
ಶಿಕ್ಷಣ ಕ್ಷೇತ್ರಕ್ಕೆ ಕಲ್ಮಠ ಕೋಡುಗೆ ಅಪಾರ
ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೋಳ್ಳಿ : ಶ್ರೀ ಗಳು
ಕರುನಾಡ ಬೆಳಗು ಸುದ್ದಿ
ಗಂಗಾವತಿ, ಡಿ,೬ – ಶಿಕ್ಷಣ ಕ್ಷೇತ್ರಕ್ಕೆ ಕಲ್ಮಠದ ಕೋಡುಗೆ ಅಪಾರವಾಗಿದೆ ಎಂದು ಜಗದಗುರು ಶ್ರೀ ಫಕೀರ ದಂಗಾಲೇಶ್ವರ ಶ್ರೀ ಗಳು ಹೇಳಿದರು.
ಅವರು ನಗರದ ಕೋಟ್ಟೋರಶ್ವರ ಕಾಲೇಜ ಸಮಾರಂಭದಲ್ಲಿ ಮಾತನಾಡಿ ಒಂದೆ ಸಮುಚ್ಚಯ ದಡಿ ಡಾ/ಕೊಟ್ಟೂರು ಶ್ರೀ ಗಳು ಕೆಜಿಯಿಂದ ಪಿಜಿಯವರೆಗೆ ತರಗತಿಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಶಿಕ್ಷಣ ಸಂಸ್ಥೆ ಗಳನ್ನು ನಡೆಸುವುದು ಸುಲಭದ ಮಾತಲ್ಲ. ಇವತ್ತಿನ ಭರಾಟೆ ಯಲ್ಲಿ ಮಕ್ಕಳು ಓದುವ ಹವ್ಯಾಸ ಕಡಿಮೆ ಮಾಡುತ್ತಿದ್ದಿರಿ ಹಾಗಾಗಬಾರದು ಓದುವ ಹವ್ಯಾಸ ಬೇಳೆಸಿಕೋಳ್ಳಿ ಎಂದರು.
ಮಾಜಿ ಸಂಸದ ಶಿವರಾಮಗೌಡ,ಮಾಜಿ ಶಾಸಕರುಗಳಾದ ಪರಣ್ಣ ಮುನವಳ್ಳಿ, ಹೆಚ್.ಆರ್.ಶ್ರೀ ನಾಥ,ಪ್ರಾಚಾರ್ಯರುಗಳಾದ ಸಿದ್ದು ಯಾಪಲಪರ್ವಿ,ಡಾ/ಕೆಜಿ ಕುಲ ಕಣಿ ೯ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೋಟ್ಟೋರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ/ಕೋಟ್ಟೂರು ಶ್ರೀ ಗಳು ಮಾತನಾಡಿದರು.
ಹಿರೆನಾಗಾವಿ ಶ್ರೀ ಗಳು,ಬಸವಕಲ್ಯಾಣ ಶ್ರೀ ಗಳು,ಸುಳೇಕಲ್ ಭುವನೇಶ್ವರ ಯ್ಯ ತಾತನವರು ಇದ್ದರು. ಮಾಜಿ ಶಾಸಕ ಜಿ ವಿರಪ್ಪ,ಕಾರ್ಯದರ್ಶಿ ಶರಣೆಗೌಡ,ರಾಜಶೇಖರಪ್ಪ ಗುಂಜಳ್ಳಿ,ಸಿ.ಹೆಚ್.ನಾರಿನಾಳ,ಜೋಗದ ನಾರಾಯಣಪ್ಪ ನಾಯಕ, ಕೆ ಚನ್ನಬಸಯ್ಯ,ಸುರೇಶ ಸಿಂಗನಾಳ,ಪ್ರಾಚಾರ್ಯರುಗಳಾದ ಡಾ/ಶರಣಬಸಪ್ಪಕೋಲ್ಕಾರ, ಚೌವ್ಹಾಣ,ಬಸವರಾಜ,ಯಾವಗಲ್,ಉಪಪ್ರಾಚಾರ್ಯ ಲಕ್ಷ್ಮಿಕಾಂತ ಹೇರೂರ ಮುಂತಾದವರು ಉಪಸ್ಥಿತರಿದ್ದರು.