
ಶಿರೂರು : 25ನೇ ವರ್ಷದ ಸರ್ವಧರ್ಮ 11 ಜೋಡಿಗಳ ಸಾಮೂಹಿಕ ವಿವಾಹಗಳು
ಕರುನಾಡ ಬೆಳಗು ಸುದ್ದಿ
ಕುಕನೂರು, 18- ಶಿರೂರು ಗ್ರಾಮದಲ್ಲಿ ಶ್ರೀದುರ್ಗಾದೇವಿ ಹಾಗೂ ಶ್ರೀಮಲಿಯಮ್ಮದೇವಿ ಮಾದಿಗ ಸಮಾಜ ಸೇವಾ ಅಭಿವೃದ್ದಿ ಸಮಿತಿಯಿಂದ 25ನೇ ವರ್ಷದ ಸರ್ವಧರ್ಮ 11 ಜೋಡಿಗಳ ಸಾಮೂಹಿಕ ವಿವಾಹಗಳು ಮೇ.27 ಸೋಮವಾರ ಜರುಗಲಿವೆ ಎಂದು ತಾ.ಪಂ ಮಾಜಿ ಉಪಾಧ್ಯಕ್ಷ ಈಶಪ್ಪ ದೊಡ್ಡಮನಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷವು ಶಿರೂರು ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ 133ನೇ ಜಯಂತಿ, ಡಾ.ಬಾಬು ಜಗಜೀವನರಾಮರವರ 117ನೇ ಜಯಂತಿ, ಶ್ರೀದುರ್ಗಾದೇವಿ ಹಾಗೂ ಶ್ರೀಮಲಿಯಮ್ಮದೇವಿ ನೂತನ ಶಿಲಶಾಸನ ದೇವಸ್ಥಾನ ಕಟ್ಟಡದ ಭೂಮಿ ಪೂಜಾ ಸಮಾರಂಭ ಹಾಗೂ ಜಾತ್ರಾಮಹೋತ್ಸವ ಅಂಗವಾಗಿ ೨೫ನೇ ವರ್ಷದ ಸಾಮೂಹಿಕ ವಿವಾಹಗಳು ಮತ್ತು ಜಾತ್ರೆಯನ್ನು ಮಾಡಿಕೊಂಡು ಬರಲಾಗುತ್ತಿವೆ. ಇಂತಹ ದೊಡ್ಡಕಾರ್ಯಕ್ಕೆ ಗ್ರಾಮದ ಗುರುಹಿರಿಯರು, ಯುವಕರು, ಮಹಿಳೆಯರು ಸಹಾಯ,ಸಹಕಾರದಿಂದ ಇಂತಹ ಕಾರ್ಯಗಳು ನಡೆಯುತ್ತಿವೆ.
ಮಾದಿಗ ಸಮಾಜದ ಇಂತಹ ಕಾರ್ಯಕ್ಕೆ ಬೇರೆ ಬೇರೆ ಮುಖಂಡರು ಸಹಾಯ, ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ಇಂತಹ ಕಾರ್ಯಗಳಿಂದ ಬಡವರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಇಂತಹ ಸಮಾಜಮುಖಿ ಶ್ರೀಗಳ ಸಲಹೆಯಂತೆ ನಡೆಸಿಕೊಂಡು ಬರಲಾಗುತ್ತಿವೆ. ಮೇ.23ರಂದು ಗಂಗಾಪೂಜೆ ನಂತರ ಶ್ರೀದುರ್ಗಾದೇವಿಗೆ ಕಂಕಣಧಾರಣೆ, ಮೇ.24 ವಿಶೇಷ ಪೂಜೆ ಕಾರ್ಯಕ್ರಮಗಳು, ಮೇ.25 ರುದ್ರಾಭಿಷೇಕ ಹಾಗೂ 1008 ಬಿಲ್ವಾರ್ಚನೆ ನಂತರ ದೇವಿಯ ಪ್ರಸಾದ ಸ್ವೀಕರಣೆ ವೈಶಾಖ, ಮೇ.26 ದುರ್ಗಾದೇವಿಗೆ ಪಂಚಾಮೃತ ಅಭಿಷೇಕ 1008 ಬಿಲ್ವಾಚಾರಣೆ ನಂತರ ಮೇರವಣಿಗೆಯ ಮುಖಾಂತರ ಊರಿನ ಸಲಕ ಸದ್ಬಕ್ತರಿಂದ ಅಗ್ನಿಯ ಕಟ್ಟಿಗೆ ತರುವುದು. ಮೇ.೨೭ರಂದು ಸರ್ವಧರ್ಮ 11 ಜೋಡಿಗಳ ಸಾಮೂಹಿಕ ವಿವಾಹಗಳು ಜರುಗಲಿವೆ ಎಂದು ಹೇಳಿದರು.
ಇಟಗಿ ಶ್ರೀಮರುಳುಸಿದ್ದೇಶ್ವರ ಪುಣ್ಯಾಶ್ರಮ ಶಿವಶರಣ ಶ್ರೀಗದಿಗೆಪ್ಪಜ್ಜನವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಚನ್ನಬಸಪ್ಪ ಎಚ್. ಹೊಳೆಯಪ್ಪನವರ್, ಯಮನೂರಪ್ಪ ಕೊಟಕೇರಿ, ರಾಮಣ್ಣ, ಈರಪ್ಪ ನಡುವಲಮನಿ, ಮಾರುತಿ ಕಡೆಮನಿ ಸೇರಿದಂತೆ ಇತರರು ಇದ್ದರು.