
ಆಂಧ್ರಪ್ರದೇಶದ ದ್ರಾವಿಡ ವಿಶ್ವವಿದ್ಯಾನಿಲಯದಿಂದ ಶಿವಬಸಪ್ಪ ಮಸ್ಕಿ ಯವರಿಗೆ ಪಿಎಚ್‌ಡಿ ಪದವಿ ಪ್ರದಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,26- ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಶಿವಬಸಪ್ಪ ಮಸ್ಕಿ ಯವರು ವಿಜಯನಗರ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕರಾದ ಡಾ. ಉಮಾಮಹೇಶ್ವರ್ ರವರ ಮಾರ್ಗದರ್ಶನದಲ್ಲಿ “ಎ ಸ್ಟಡಿ ಆಪ್ ಮ್ಯಾನ್ ಅಂಡ್ ವುಮೆನ್ ರಿಲೇಷನ್ ಶಿಪ್ ಇನ್ ಕಮಲಾ ಮಾರ್ಕಂಡಯ್ಯ, ಅನಿತಾ ದೇಸಾಯಿ ಅಂಡ್ ಆರ್.ಕೆ. ನಾರಾಯಣ ನಾವೆಲ್ಸ” ಎಂಬ ವಿಷಯದ ಮೇಲೆ ಮಂಡಿಸಿದ ಪಿಎಚ್‌ಡಿ ಪ್ರಭಂದಕ್ಕೆ ಆಂಧ್ರಪ್ರದೇಶದ ದ್ರಾವಿಡ ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ಪ್ರಧಾನ ಮಾಡಿದೆ. ಈ ಕುರಿತು ದ್ರಾವಿಡ ವಿಶ್ವವಿದ್ಯಾನಿಲಯದ ಕುಲಸಚಿವರು ದಿನಾಂಕ 19-03-2024 ರಂದು ಅಧಿಸೂಚನೆ ಹೊರಡಿಸಿರುತ್ತಾರೆ.