
ಶಿವರಾಜ್ ತಂಗಡಗಿ ವಿರುದ್ಧ ಕ್ರಮ ಕೈಗೊಳ್ಳಿ : ಅಡವಿ ಸ್ವಾಮಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,28- ಕನ್ನಡ ಸಂಸ್ಕೃತಿ ಇಲಾಖೆಯಮಂತ್ರಿಗಳು ಶಿವರಾಜ್ ತಂಗಡಗಿ ಅವರು ಯಾರು ಮೋದಿ ಎಂದು ಹೇಳ್ತರೋ ಅಂತವರ ಕಪಾಳಕ್ಕೆ ಬಡಿಬೇಕು ಎಂದು ದೇಶದ ಯುವಕರ ಬಗ್ಗೆ ಹಗುರವಾಗಿ ಮಾತನಾಡಿದ ಭ್ರಷ್ಟಾ ಮಂತ್ರಿಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಬಳ್ಳಾರಿ ಜಿಲ್ಲೆ ಯುವ ಮೋರ್ಚಾ ವತಿಯಿಂದ ಯುವಕರ ತಂಡದೋಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ತಂಗಡಗಿ ವಿರುದ್ಧ ಧಿಕ್ಕಾರ ಘೋಷಣೆಯನ್ನು ಕುಗ್ಗುತ್ತಾ ಅವರು ಬಗ್ಗೆ ಕ್ರಮ ತಗೋಬೇಕೆಂದು ಮೆಮೊರಾಂಡಮ್ ನೀಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಗಳಾದ ಅಡವಿ ಸ್ವಾಮಿಯವರು, ಸೋಶಿಯಲ್ ಮೀಡಿಯಾ ರಾಜ್ಯ ಸಮಿತಿ ಸದಸ್ಯರಾದ ಅಂಜಿ ಕಮ್ಮರಚೇಡುರವರು,ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಸಿದ್ದಪ್ಪ ರವರು, ಪ್ರಧಾನ ಕಾರ್ಯದರ್ಶಿಗಳಾದ ಸೂದರ್ಶನ್ ರೆಡ್ಡಿಯವರು, ರಾಘವೇಂದ್ರಯವರು, ಉಪಾಧ್ಯಕ್ಷರಾದ ಗಿರಿಶ್ ರವರು,ನಗರ ಯುವ ಮೋರ್ಚಾ ಅಧ್ಯಕ್ಷರಾದ ಅರುಣ್ ಬಾಲಚಂದ್ರ ರವರು, ಪ್ರಧಾನ ಕಾರ್ಯದರ್ಶಿಗಳಾದ ಓಂ ಪ್ರಕಾಶ್ ರವರು, ಬಹಳಷ್ಟು ಯುವಕ ತಂಡ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.