
ಶಿವರಾಜ ತಂಗಡಗಿ ಶನಿ ವಕ್ಕರಿಸಿದಂತೆ ವಕ್ಕರಿಸಿದ್ದಾರೆ ; ಶಾಸಕ ; ಜನಾರ್ದನ ರೆಡ್ಡಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 01- ಜಿಲ್ಲೆಗೆ ಶಿವರಾಜ ತಂಗಡಗಿ ಶನಿ ವಕ್ಕರಿಸಿದಂತೆ ವಕ್ಕರಿಸಿದ್ದಾರೆ. ಸರಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಶಿವರಾಜ ತಂಗಡಗಿ ಕುಟುಂಬ ಅಕ್ರಮ ಚಟುವಟಿಕೆಯಲ್ಲಿ ಶಾಮೀಲಾಗಿದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದರು.
ಅವರು ಕೊಪ್ಪದಲ್ಲಿ ಮಾಧ್ಯಮದವರೋಂದಿಗೆ ಮಾತನಾಡಿದ ಆನೆಗೊಂದಿ ಉತ್ಸವ ಕಡೆಗಣಿಸಿದ್ದಾರೆ ಕನಕಗಿರಿ ಉತ್ಸವದಲ್ಲಿ ಬಿಜೆಪಿ ಸಾಹಿತ್ಯಾಸಕ್ತರು ಕನಕಗಿರಿ ಉತ್ಸವದಲ್ಲಿ ಕಪ್ಪು ಪಟ್ಟಿ ಪ್ರದರ್ಶನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಪ್ಪುಪಟ್ಟಿ ಪ್ರದರ್ಶನ ಮಾಡಿ, ಹೋರಾಟ ಮಾಡುತ್ತೇವೆ. ಶಿವರಾಜ ತಂಗಡಿಗಿಗೆ ನಾವು ಯಾರು ಅಂತಾ ತೋರಿಸುತ್ತೆವೆ ಎಂದು ಸವಾಲೆಸೆದರು.
ಆನೆಗೊಂದಿ ಉತ್ಸವಕ್ಕೆ ನಾನು ರೈಟ್ಟಿಂಗ್ ನಲ್ಲಿ ಪ್ರಪೋಸಲ್ ನೀಡಿಲ್ಲ. ನಾನು ಮೌಕಿಕವಾಗಿ ಹೇಳಿದ್ದೇನೆ. ಕಳೆದ ವರ್ಷ 5 ಕೋಟಿ ಅನುದಾನ ಇನ್ನು ಕೊಟ್ಟಿಲ್ಲ ಸಚಿವ ಶಿವಾರಾಜ ತಂಗಡಿಗೆ ತಮ್ಮನಂತೆ ಗೌರವ ಕೊಡುತ್ತಿದ್ದೇವೆ, ಕಳೆದ ಭಾರಿ ಉತ್ಸವದ 5 ಕೋಟಿ ರೂ. ಅನುದಾನ ಕೊಡುವುದಾಗಿ ಹೇಳಿದ್ದರು. ಒಂದು ರೂ. ಅನುದಾನ ಕೂಡ ಕೊಟ್ಟಿಲ್ಲ.
ಕುಟುಂಬದವರು ಭಾಗಿ ; ಮರಳು, ಮಣ್ಣು, ಇಸ್ಪೀಕ್ ಜೂಜಾಟ, ಜಾಸ್ತಿ ಆಗಿದೆ. ತಂಗಡಗಿ ಕುಟುಂಬದ ಸಹೋದರರೇ ಶಾಮೀಲಾಗಿದ್ದಾರೆ ಎಂದು ನೇರವಾಗಿ ಆರೋಪಿಸಿದ ಅವರು ಜಿಲ್ಲೆಯಲ್ಲಿ ಪೋಲಿಸ್ ವ್ಯವಸ್ಥೆ ಹಾಳಾಗಿದೆ .
ಸದನದ ಸದ್ದು ; ಆನೆಗುಂದಿ ಉತ್ಸವ ಮತ್ತು ಅಕ್ರಮ ಚಟುವಟಿಕೆ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇವೆ ಎಂದುಮಾಹಿತಿ ನೀಡಿದರು.
ಮುಗಿದ ನಂತರ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೆಸುಗೂರ ನೇತೃತ್ವದಲ್ಲಿ ಸಚಿವ ತಂಗಡಗಿ ಕುಟುಂಬದ ಹಸ್ತಕ್ಷೇಪದ ಕುರಿತು ಧ್ವನಿ ಎತ್ತುತ್ತೇನೆ ಎಂದು ಹೇಳಿದರು.
–