
ಮಹಿಳೆಯರು ಶಿಸ್ತಿನ ಸಿಪಾಯಿಗಳಾಗಬೇಕು
ಸದಾನಂದ ಬಂಗೇರ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, ೧೫- ಮಹಿಳೆಯರು ಸ್ವಾವಲಂಬಿಗಳಾಗುವ ಮೂಲಕ ಶಿಸ್ತಿನ ಸಿಪಾಯಿಗಳಾಗಬೇಕೆಂದು ಯೋಜನಾ ನಿರ್ಧೇಶಕರಾದ ಸದಾನಂದ ಬಂಗೇರ ರವರು ಹೇಳಿದರು
ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಜರುಗಿದ ಶ್ರೀ ಕ್ಷೇತ್ರಧರ್ಮಸ್ಥಳ ದವರು ಏರ್ಪಡಿಸಿದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ “ಹೊಲಿಗೆ ತರಬೇತಿ” ಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಸಂಸ್ಥೆ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುತ್ತಿರುವುದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
30 ಜನ ಹೊಲಿಗೆ ತರಬೇತಿ ದಾರರು ಹಾಜರಿದ್ದರು.ಜಿಲ್ಲಾ ಜನಜಾಗ್ರತಿ ಸಮೀತಿ ಸದಸ್ಯರಾದ ಶರಣಪ್ಪ ದಾನಕೈ ˌ ವೀರಣ್ಣ ನಿಂಗೋಜಿ ˌ ಶಿಲ್ಪಾ ಅರಕೇರಿ ಮಾತನಾಡಿದರು.
ಇನ್ನಲವ್ಹೀಲ್ ಕ್ಲಬ್ ಅಧ್ಯಕ್ಷೆ ಕೀರ್ತಿ ಜಕ್ಕಲಿ ಕಾರ್ಯಕ್ರಮವನ್ನು ಉದ್ಧಾಟಿಸಿ ಮಾತನಾಡಿದರುˌ ಮಾಜಿ ಅಧ್ಯಕ್ಷೆ ಚನ್ನಮ್ಮ ಪಾಟೀಲ ಹಾಗೂ ತ್ರಿವೇಣಿ ಹಾಗೂ ಧರಣಿ ಉಪಸ್ಥಿತರಿದ್ದರು.ಗೌರಮ್ಮ ಅಧ್ಯಕ್ಷತೆ ವಹಿಸಿದ್ದರು ಮಹಿಳಾ ಜ್ಞಾನ ವಿಕಾಸದ ಗೀತಾ ಲೋಕರೆ ಸ್ವಾಗತಿಸಿ ನಿರೂಪಿಸಿದರು. ತಾಲೂಕಾ ಯೋಜನಾ ನಿರ್ದೆಶಕರಾದ ಟಿ. ಸತೀಶ ರವರು ವಂದಿಸಿದರು