IMG-20240117-WA0059

ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶ ತಾಲ್ಲೂಕು ಮಟ್ಟದಲ್ಲಿ ಸಭೆಗೆ ತೀರ್ಮಾನ

ಕರುನಾಡ ಬೆಳಗು ಸುದ್ದಿ 

ಬಳ್ಳಾರಿ,17-ಕಾಂತರಾಜು ಆಯೋಗದ ವರದಿ ಜಾರಿಗೆ ದಿನಾಂಕ ಜ.28ರಂದು ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶ ಯಶಸ್ವಿಗೊಳಿಸಲು ತಾಲೂಕು ಮಟ್ಟದ ಸಭೆಗಳನ್ನು ನಡೆಸಲಾಗುವುದು ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಾ.ಗಾದಿಲಿಂಗನಗೌಡ ಅವರು ತಿಳಿಸಿದ್ದಾರೆ.

ಈ ಕುರಿತು ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಬುಧವಾರ ಬೆಳಿಗ್ಗೆ ಬಳ್ಳಾರಿ ನಗರದ ಜಿಲ್ಲಾ ಗೊಲ್ಲರ ಸಂಘದ ಸಭಾಂಗಣದಲ್ಲಿ ನಡೆದ ಎಲ್ಲಾ ಶೋಷಿತ ಸಮುದಾಯಗಳ ಮುಖಂಡರ ಸಭೆಯಲ್ಲಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಸ್ಥಳೀಯ ಶಾಸಕರ ಸಹಕಾರದೊಂದಿಗೆ ತಾಲ್ಲೂಕು ಮಟ್ಟದಲ್ಲಿ ಎಲ್ಲಾ ಶೋಷಿತ ಸಮುದಾಯದ ಸಂಘ, ಸಂಸ್ಥೆಗಳು, ಪ್ರಗತಿಪರ ಹೋರಾಟಗಾರರನ್ನು ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಬೇಕು. ಜ.28 ರಂದು ಚಿತ್ರದುರ್ಗದಲ್ಲಿ ನಡೆದ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶವನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.

ಪ್ರಚಾರ ಸಮಿತಿಯನ್ನು ರಚಿಸಲಾಗಿದೆ, ಸಮಾವೇಶಕ್ಕೆ ಸಂಬಂಧಿಸಿದ ಪ್ರಚಾರ ಕಾರ್ಯದ ಜವಾಬ್ದಾರಿಯನ್ನು ಬಳ್ಳಾರಿ ಮುಸ್ಲಿಂ ಅಂಜುಮನ್‍‍‍(ಸಾಮಾಜಿಕ ಸಂಘಟನೆ) ಅಧ್ಯಕ್ಷ ಇಮಾಮ್ ಗೋಡೆಕಾರ ಹಾಗೂ ಮಾನವ ಬಂಧುತ್ವ ವೇದಿಕೆ ಸಂಚಾಲಕ ಸಂಗನಕಲ್ಲು ವಿಜಯಕುಮಾರ್ ಅವರಿಗೆ ವಹಿಸಲಾಯಿತು.

ಬಳ್ಳಾರಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಜನರ ಸಮಾವೇಶದಲ್ಲಿ ಭಾಗವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಡಾ.ಗಾದಿಲಿಂಗನಗೌಡ ಮುಖಂಡರಲ್ಲಿ ಮನವಿ ಮಾಡಿದರು.

ಮುಂಡ್ರಿಗಿ ನಾಗರಾಜ, ಗಾದಿಲಿಂಗನಗೌಡ,ಬಿ.ಶ್ವೇತಾ ಸೋಮು,ಉಪ ಮೇಯರ್ ಜಾನಕಮ್ಮ,ವಿ.ಎಸ್.ಶಿವಶಂಕರ್, ಹುಮಾಯೂನ್ ಖಾನ್, ಉರುಕುಂದಪ್ಪ, ಜಾಸ್ವ, ಗಾದೆಪ್ಪ, ಕುಡುತಿನಿ ರಾಮಾಂಜನಿ, ತಳವಾರ ದುರ್ಗಪ್ಪ, ಜೋಗಿನ ಚಂದ್ರಪ್ಪ, ಪಾಂಡುರಂಗ, ರಫಿ, ಮಾರೇಶ, ಲೋಕೇಶ್, ಕಪ್ಪಗಲ್ಲು , ಗುಜರಿ ಬಸವರಾಜ್, ದೇವಿ ನಗರ್ ಪೆದ್ದಣ್ಣ, ಚಂಪಾ ಚೌಹಾಣ್, ಸಂಗನಕಲ್ಲು ವಿಜಯ್ ಕುಮಾರ್, ಲೋಕೇಶ್ ಯಾದವ್, ಇಮಾಮ್ ಗೋಡೆಕಾರ ಸೇರಿದಂತೆ ಮೊದಲಾದವರು ಇದ್ದರು.

*(ಬಾಕ್ಸ್……….)*

ಸಮಾವೇಶ ಯಶಸ್ಸಿಗೆ ಅಗತ್ಯ ಸಹಕಾರ ನೀಡುವೆ: ಶಾಸಕ ನಾರಾ ಭರತ್ ರೆಡ್ಡಿ

ಜ.28ರಂದು ಚಿತ್ರದುರ್ಗದಲ್ಲಿ ನಡೆಯುವ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶದಲ್ಲಿ ಯಶಸ್ಸಿಗಾಗಿ ಅಗತ್ಯ ಸಹಕಾರ ನೀಡುವೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಭರವಸೆ ನೀಡಿದ್ದಾರೆ.

ಬುಧವಾರ ಬೆಳಿಗ್ಗೆ ಗಾಂಧಿನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಅವರು ಭೇಟಿ ನೀಡಿದ ಶೋಷಿತ ಸಮುದಾಯಗಳ ಸಂಘಟನೆಗಳ ಮುಖಂಡರಿಗೆ ಅವರು ಭರವಸೆ ನೀಡಿದರು.

ಶೋಷಿತ ಸಮುದಾಯಗಳ ಜಾಗೃತಿ ಯಶಸ್ವಿಯಾಗಲಿ, ಬಳ್ಳಾರಿ ಜಿಲ್ಲೆಯಿಂದ ಚಿತ್ರದುರ್ಗಕ್ಕೆ ತೆರಳುವ ಜನರಿಗೆ ಅನುಕೂಲ ಮಾಡಿ ಕೊಡಲು ನನ್ನಿಂದಾಗುವ ನೆರವು, ಸಹಕಾರ ನೀಡುವೆ ಎಂದು ಪ್ರಕಟಿಸಿದರು.

Leave a Reply

Your email address will not be published. Required fields are marked *

error: Content is protected !!