
ಶ್ರೀರಕ್ಷಾಗೆ ಶೇ. 97.6ರಷ್ಟು ಫಲಿತಾಂಶ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 9- ಇಲ್ಲಿನ ಕುಷ್ಟಗಿ ರಸ್ತೆಯಲ್ಲಿರುವ ನ್ಯೂ ಆಕ್ಸ್‌ಫರ್ಡ್ ಶಾಲೆಯ ವಿದ್ಯಾರ್ಥಿನಿ ನಗರದ ಪ್ರಶಾಂತ ಕಾಲೊನಿಯ ಶ್ರೀರಕ್ಷಾ ಜಹಗೀರದಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 97.6ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ.
ಇಂಗ್ಲಿಷ್‌ನಲ್ಲಿ 119 ಅಂಕಗಳನ್ನು ಪಡೆದಿರುವ ಶ್ರೀರಕ್ಷಾ ಕನ್ನಡ ಹಾಗೂ ಹಿಂದಿ ವಿಷಯದಲ್ಲಿ ತಲಾ 100, ಗಣಿತ 93, ವಿಜ್ಞಾನ ಮತ್ತು ಸಮಾಜ ವಿಜ್ಞಾನದಲ್ಲಿ ತಲಾ 99 ಅಂಕಗಳನ್ನು ಗಳಿಸಿದ್ದಾರೆ. ಶ್ರೀರಕ್ಷಾ, ವೇಣುಗೋಪಾಲ್ ಜಹಗೀರದಾರ್ ಹಾಗೂ ವೀಣಾ ದಂಪತಿಯ ಪುತ್ರಿ.
‘ಆಯಾ ದಿನದ ಕೆಲಸವನ್ನು ಅಂದೇ ಮುಗಿಸುತ್ತಿದ್ದೆ. ಪರೀಕ್ಷೆ ಸಮೀಪಿಸಿದಾಗ ಓದಬೇಕು ಎಂದು ಯಾವತ್ತೂ ಕಾಯಲಿಲ್ಲ. ಹೀಗಾಗಿ ಉತ್ತಮ ಫಲಿತಾಂಶ ಪಡೆದುಕೊಳ್ಳಲು ಸಾಧ್ಯವಾಯಿತು. ಕುಟುಂಬದವರ ಸಹಕಾರವೇ ಈ ಸಾಧನೆಗೆ ಕಾರಣ’ ಎಂದು ಶ್ರೀರಕ್ಷಾ ಸಂತಸ ವ್ಯಕ್ತಪಡಿಸಿದಳು.