
ಶ್ರೀ ಕಲ್ಲಗಸಿ ಮಾರುತೇಶ್ವರ ದೇವಸ್ಥಾನದಲ್ಲಿ
ಸಂಭ್ರಮದಿಂದ ಕಾರ್ತಿಕೋತ್ಸವ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೭- ನಗರದ ಗಡಿಯಾರ ಕಂಭದ ಬಳಿಯ ಐತಿಹಾಸಿಕ ಪ್ರಸಿದ್ಧ ಶ್ರೀ ಕಲ್ಲಗಸಿ ಮಾರುತ್ತೆಶ್ವರ ದೇವಸ್ಥಾನದಲ್ಲಿ ಸಂಭ್ರಮದಿಂದ ಕಾರ್ತಿಕೋತ್ಸವ ಕಾರ್ಯಕ್ರಮ ಜರುಗಿತು.
ಶನಿವಾರದಂದು ರಾತ್ರಿ ಸಹಸ್ರಾರು ದೀಪಗಳನ್ನು ಹಚ್ಚುವುದರ ಮೂಲಕ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಆಚರಿಸಲಾಯಿತು.
ಬೆಳಿಗ್ಗೆ ಆಂಜನೆಯನಿಗೆ ವಿಶೇಷ ಅಲಂಕಾರ ಹಾಗೂ ಪಲ್ಲಕಿ ಮಹೋತ್ಸವ ಜರುಗಿದವು.
ಬೆಳ್ಳಿಯ ಅಲಂಕಾರ : ಕಾರ್ತಿಕೋತ್ಸವದ ಅಂಗವಾಗಿ ಶಿನಿವಾರ ಆಂಜನೆಯ ಸ್ವಾಮಿಗೆ ಬೆಳ್ಳಿಕವಚ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದ ಸಂಜಯ ವರೆಗೆ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನಿತರಾದರು.