
ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದಲ್ಲಿ
ವಾರ್ಷಿಕ ವಿಶೇಷ ಶಿಬಿರ
ಕರುನಾಡ ಬೆಳಗು ಸುದ್ದಿ
ಗಂಗಾವತಿ, ೨೫- ಶ್ರೀ ಕೊಟ್ಟೂರೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಎಚ್ ಆರ್ ಸರೋಜಮ್ಮ ಬಾಲಕಿಯರ ಸಂಯುಕ್ತ ಪದವಿ ಪೂರ್ವ ಕಾಲೇಜು, ಗಂಗಾವತಿ ಇವರ ರಾಷ್ಟೀಯ ಸೇವಾ ಯೋಜನೆ ಯ ವಾರ್ಷಿಕ ವಿಶೇಷ ಶಿಬಿರವನ್ನು ಹಿರೇಬೆಣಕಲ್ ನ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಲ್ಲಿ ಆಯೋಜಿಸಲಾಯ್ತು.
ಶಿಬಿರವನ್ನು ಬಳ್ಳಾರಿ ವಿಭಾಗ ರಾ. ಸೇ. ಯೋ. ಸಂಯೋಜನಾಧಿಕಾರಿ ಬಸಪ್ಪ ನಾಗೋಲಿ ರವರು ಉದ್ಘಾಟಿಸಿದರು. ಸಂಘದ ಕಾರ್ಯದರ್ಶಿ ಶರಣೆಗೌಡ ಮಲಿಪಾಟೀಲ್ ಧ್ವಜಾರೋಹಣ ನೆರವೇರಿಸಿದರು. ಕೊಪ್ಪಳ ಜಿಲ್ಲಾ ರಾ. ಸೇ. ಯೋ. ಸಂಯೋಜನಾಧಿಕಾರಿ ನಾಗರಾಜ ಹೀರಾ ರವರು ಸ್ವಯಂ ಸೇವಕರಿಗೆ ಪ್ರತಿಜ್ನ್ಯಾ ವಿಧಿ ಭೋದಿಸಿದರು.
ಕಾಲೇಜು ಪ್ರಾಂಶುಪಾಲರಾದ ವೀರೇಶ ಯಾವಗಲ್ ಹಾಗೂ ಡಾ. ರವಿ ಚವಾಣ್ ಹಾಗೂ ಉಪನ್ಯಾಸಕರ ಸಂಘದ ತಾಲೂಕ ಅಧ್ಯಕ್ಷ ಮಹೇಬೂಬ್ ಅಲಿ, ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ದ್ಯಾಮಣ್ಣ ಮತ್ತು ಹನುಮೇಶ ಹಾಗೂ ಕಾರ್ಯಕ್ರಮ ಅಧಿಕಾರಿ ಚಂದ್ರಶೇಖರ ಹಂಚಿನಾಳ ಹಾಗೂ ಹನಮಂತ ವಡ್ಡರ ಹಾಗೂ ಉಪನ್ಯಾಸಕ ಕೆ ಎಚ್ ಕೊಲ್ಲಣ್ಣವರ, ಕೃಷ್ಣ ಕುಮಾರ,ಯಮನೂರಪ್ಪ ಕಂಬಳಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.