
ಶ್ರೀ ಮಂಗಳೇಶ್ವರ ರಥ : ಸದ್ಭಕ್ತರ ಹರ್ಷೋದ್ಘಾರ
ಕರುನಾಡ ಬೆಳಗು ಸುದ್ದಿ
ಕುಕನೂರ,20- ತಾಲೂಕಿನ ಮಂಗಳೂರಿನ ಶ್ರೀ ಮಂಗಳೇಶ್ವರ ರಥವು ಸದ್ಭಕ್ತರ ಹರ್ಷೋದ್ಘಾರ ಮಧ್ಯೆ ಸಂಭ್ರಮದಿಂದ ಜರುಗಿ ಸಾಯಂಕಾಲ 6:30 ಸುಮಾರಿಗೆ ಸಂಪನ್ನ ಗೊಂಡಿತು.
ಮಂಗಳೇಶ್ವರನ ರಥಕ್ಕೆ ಪೂಜೆ ಸಲ್ಲಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತಸಮೂಹ ಶ್ರೀ ಮಂಗಳೇಶ್ವರ ಮಹಾರಾಜ್ ಕೀ ಎಂದು ಜಯಘೋಷ ಹಾಕುತ್ತಾ ಭಜನೆ, ಝಾಂಜಮೇಳ, ಡೊಳ್ಳು, ಸಂಗೀತ ವಾದ್ಯ ವೈಭವದಿಂದ ನಂದಿಕೊಲು, ಛತ್ರ ಚಾಮರಗಳೊಂದಿಗೆ ಭಕ್ತಿ ಭಾವದಿಂದ ಭಕ್ತರು ಉತ್ತತ್ತಿ, ಬಾಳೆಹಣ್ಣುಗಳನ್ನು ಎಸೆದು ನಮನ ಸಲ್ಲಿಸಿದರು.
ರಥವು ಯಶಸ್ವಿಯಾಗಿ ಮರಳಿ ಸ್ವಸ್ಥಳಕ್ಕೆ ಬಂದು ನಿಂತಾಗ ಭಕ್ತಾದಿಗಳು ಚಪ್ಪಾಳೆ ತಟ್ಟಿ ಭಕ್ತಿ ಬಾವ ಮರೆದರು. ಬಳಿಕ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಕಾಯಿ ಒಡೆಸಿ, ನೈವೇದ್ಯ ನೆರವೇರಿಸಿ ಧನ್ಯರಾದರೂ.
ಇದಕ್ಕೂ ಮುನ್ನ ಬೆಳಗ್ಗೆ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಮಂಗಳೇಶ್ವರ ಮೂರ್ತಿಗೆ ರುದ್ರಾಭಿಷೇಕ, ವಿಶೇಷ ಅಲಂಕಾರಿಕ ಪೂಜೆ, ಧಾರ್ಮಿಕ ಕಾರ್ಯದಲ್ಲಿ ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.
ಸಹಸ್ರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು