
ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ನೂತನ ನಿರ್ಮಾಣದ ಶಂಕು ಸ್ಥಾಪನೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 22- ನಗರದ ಬಳ್ಳಾರಿ ರಸ್ತೆ 150 ಎ ರಾಷ್ಟ್ರೀಯ ಹೆದ್ದಾರಿ ಬದಿ ಬರುವ ಜಾಗದಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ಇವರಿಂದ ನೂತನ ನಿರ್ಮಾಣವಾಗುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಶಂಕು ಸ್ಥಾಪನೆ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಬಿ ಎಂ ನಾಗರಾಜ ಅವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ, ನಗರಸಭೆ ಸದಸ್ಯರಾದ ಆರ್ ನಾಗರಾಜ್, ಬಿ ವೆಂಕಟೇಶ್, ಹೆಚ್ ಗಣೇಶ್, ಬಿ ಎಂ ಅಪ್ಪಾಜಿ ನಾಯಕ್, ಕಾಂಗ್ರೆಸ್ ಮುಖಂಡ ಬಿ ಮುತ್ತಾಲಯ ಶೆಟ್ಟಿ, ಜಮೀನ್ದಾರ್ ಸಯ್ಯದ್ ಮೋಹಿದ್ದೀನ್ ಖಾದ್ರಿ, ಗೊರವರ ಶ್ರೀನಿವಾಸ್ ಕೋಟಿ ರೆಡ್ಡಿ, ಕೊಡ್ಲೆ ಮಲ್ಲಿಕಾರ್ಜುನ, ಮರಿರಾಜ್ ಗೌಡ, ಕೊತ್ತಲಚಿಂತೆ ಕೃಷ್ಣಪ್ಪ, ವಿ. ಅಂಬರೀಶಪ್ಪ, ವಿ . ವೆಂಕೋಬಣ್ಣನವರ ಮಕ್ಕಳು, ವಿ. ನಾಗರಾಜ, ವಿ . ದತ್ತಾತ್ರೇಯ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರು ಸರ್ವ ಪದಾಧಿಕಾರಿಗಳು ಸರ್ವ ಭಕ್ತಾಧಿಕಾರಿಗಳು ಪಾಲ್ಗೊಂಡಿದ್ದರು.