
ಹಳೆಕೋಟೆ: ಶ್ರೀ ವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಗ್ನಿಕುಂಡ ತುಳಿಯುವ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ- ತಾಲೂಕಿನ ಹಳೆಕೋಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ಅಗ್ನಿಕುಂಡ ತುಳಿಯುವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಶ್ರೀ ವೀರಭದ್ರ ದೇವರು ತನ್ನ ಕೆಂಡದ ಸೇವೆ ಆರಂಭಿಸಲು ತನಗೆ ಅಲಂಕಾರ ಮಾಡಿದ ಹೂ ಪತ್ರಿ ಬಿಳಿಸುವುದರ ಮೂಲಕ ಭಕ್ತರಿಗೆ ಅಗ್ನಿಕುಂಡ ತುಳಿಯಲು ಸೂಚನೆ ನೀಡುತ್ತಾನೆ ಹೂ ಕೊಟ್ಟ ನಂತರ ಮಂಗಳಾರತಿ ಮಾಡಿ ವೀರಭದ್ರೇಶ್ವರ ಉತ್ಸವ ಮೂರ್ತಿಯನ್ನು ಹೊತ್ತ ಅರ್ಚಕರು ವೀರಭದ್ರೇಶ್ವರ ಸ್ವಾಮಿಯ ವೇಷ ಧರಿಸಿದ ಕಾಚಯ್ಯ ಅಗ್ನಿ ಕುಂಡದಲ್ಲಿ ನಡೆದು ಬಂದ ನಂತರ ಭಕ್ತರು ಅಗ್ನಿ ಕುಂಡದಲ್ಲಿ ನಡೆದು ಬಂದು ತಮ್ಮ ಹರಕೆಯನ್ನು ತೀರಿಸಿದರು.
ಹಳೆಕೋಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿಯ ಅಗ್ನಿ ಕುಂಡದಲ್ಲಿ ನಡೆದು ಹೋಗುವುದರಿಂದ ರೋಗ ರುಜಿನಗಳು ಕಡಿಮೆಯಾಗುತ್ತವೆ ಮಕ್ಕಳಾಗುತ್ತವೆ ಮನೆಯಲ್ಲಿ ಸಂಪತ್ತು ಆರೋಗ್ಯ ವೃದ್ಧಿಯಾಗುತ್ತದೆ ಬೇಡಿದ ಹರಕೆಗಳು ಈಡೇರುತ್ತವೆ ಎನ್ನುವ ನಂಬಿಕೆಯು ಭಕ್ತರಲ್ಲಿ ಬಲವಾಗಿ ಬೇರೂರಿದೆ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.