
ಶ್ರೀ ಹುಲಿಗೇಮ್ಮ ದೇವಿ
ದೇವಸ್ಥಾನದ ಹುಂಡಿ ಎಣಿಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೪- ನಾಡಿನ ಅದಿ ದೇವತೆ ಐತಿಹಾಸಿಕ ಕ್ಷೇತ್ರ ಶ್ರೀ ಹುಲಿಗೇಮ್ಮ ದೇವಿ ದೇವಸ್ಥಾನದ ೫೨ದಿನದ ಹುಂಡಿ ಎಣಿಕೆ ಯಾಗಿದ್ದು ದಾಖಲೆಯ ಮೋತ್ತ ಸಂಗ್ರಹವಾಗಿದೆ.
ದೇವಸ್ಥಾನದಲ್ಲಿ ಒಟ್ಟು 1,11,43,435 ರೂ.ನಗದು, 333ಗ್ರಾಂ ಕಚ್ಛಾ ಬಂಗಾರ ಮತ್ತು 11.300 ಕೆಜಿ ಬೆಳ್ಳಿ ಸಂಗ್ರಹವಾಗಿದೆ. 52 ದಿನಗಳ ಬಳಿಕ ಹುಂಡಿ ಎಣಿಕೆ ಮಾಡಿದ್ದು, ಬುಧವಾರ ಹಾಗೂ ಗುರುವಾರ ಎರಡು ದಿನ ಎಣಿಕೆ ಮಾಡಲಾಗಿದೆ.
ಹುಣ್ಣಿಮೆ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ಭೇಟಿ ನೀಡಿದ ಹಿನ್ನೆಲೆಯಲ್ಲಿ ಹಿಂದಿಗಿಂತ ಈ ಬಾರಿ ಹೆಚ್ಚು ಹಣ ಸಂಗ್ರಹವಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಸುತಗೊಂಡಿ ತಿಳಿಸಿದ್ದಾರೆ.