30702817-88c8-46b8-b3ac-d68d1a794d39

ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಿ

      ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ ನಾಯ್ಕ್ ಒತ್ತಾಯ

 

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,ನ.23-  ರಾಜ್ಯ ಸರಕಾರ ಪುಕ್ಕಟೆ ಭಾಗ್ಯ ನೀಡುವ ಬದಲು ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ ನಾಯ್ಕ ಅವರು ಒತ್ತಾಯಿಸಿದರು.
ತಾಲೂಕಿನ‌ ಶಿಡಿಗನಮೊಳ, ಮೀನಳ್ಳಿ ಹಾಗೂ ಬೈಲೂರು ಗ್ರಾಮಗಳಲ್ಲಿ ಜೆಡಿಎಸ್ ಪಕ್ಷ ಮಠಾಧೀಶರ ಜತೆ ಬರ ಅಧ್ಯಯನ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರೈತರು ಮಕ್ಕಳಿಗೆ ಶಾಲೆ ಫೀಸ್ ಕಟ್ಟಲು ಹಣವಿಲ್ಲದೇ ಪರದಾಡುತ್ತಿದ್ದಾರೆ. ಹೀಗಾಗಿ ಭಾಗ್ಯಗಳನ್ನು ನೀಡುವ ಮೊದಲು ಪರಿಹಾರ ಕೊಡಿ ಎಂದರು.ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಅಖಂಡ ಬಳ್ಳಾರಿ ಜಿಲ್ಲಾ ಬರ ಪರಿಹಾರ ಸಮಿತಿ ಸದಸ್ಯ ಮೀನಳ್ಳಿ ತಾಯಣ್ಣ ಅವರು ಮಾತನಾಡಿ, ಜಿಲ್ಲೆಯ ಗಡಿಭಾಗದ ಗ್ರಾಮಗಳು ಮಳೆಯಾಧಾರಿತವಾಗಿದ್ದು ಮಳೆ ಬೆಳೆ ಇಲ್ಲದೇ ರೈತಾಪಿ ವರ್ಗ ತೀವ್ರ ಸಂಕಷ್ಟದಲ್ಲಿದ್ದಾರೆ ಎಂದರು.
ಸರಕಾರ ತಕ್ಷಣ ಜನರ ಸಂಕಷ್ಟಗಳಿಗೆ ಸ್ಪಂದಿಸದಿದ್ದರೆ ಪಕ್ಷ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ ದರು.
ಮಠಾಧೀಶರ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಶ್ರೀ ಕಲ್ಯಾಣ ಸ್ವಾಮಿಗಳು ಮಾತನಾಡಿ ಅನ್ನಭಾಗ್ಯದ ಅಕ್ಕಿ ನೀಡಲು ಕೂಡ ರೈತ ಬೆಳೆಯಬೇಕಲ್ಲವೇ ಎಂದು ಪ್ರಶ್ನಿಸಿ, ರೈತರ ನೆರವಿಗೆ ಸರಕಾರ ಧಾವಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜುನಾಯಕ,ಸಿರುಗುಪ್ಪದ ಪರಮೇಶ ನಾಯಕ, ತಾಲೂಕು ಅಧ್ಯಕ್ಷ ಶಿವನಾರಾಯಣ, ಹಗರಿಬೊಮ್ಮನಹಳ್ಳಿ ತಾಲೂಕು ಪಕ್ಷದ ಅಧ್ಯಕ್ಷ ವೈ. ಮಲ್ಲಿಕಾರ್ಜುನ, ತುಂಗಭದ್ರಾ ರೈತ ಸಂಘದ ದರೂರು ಪುರುಷೋತ್ತಮ ಗೌಡ, ಗ್ರಾಮ ಘಟಕದ ಅಧ್ಯಕ್ಷ ಚಾಗನೂರು ನಾಗರಾಜ್, ಮುಖಂಡರಾದ ಎಂ. ಕಿರಣ್ ಕುಮಾರ್, ಬಸಪ್ಪ ಮತ್ತಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!