
ಸಂಗಣ್ಣ ಕರಡಿ ನಿರ್ಧಾರ ಇನ್ನು ನಿಗೂಢ
ಕಾರ್ಯಕರ್ತರ ಅಭಿಪ್ರಾಯ ಪಡೆದಿರುವೆ –
ನಾಲ್ಕು ದಿನದ ನಂತರ ನಿರ್ಧಾರ – ಸಂಸದ ಸಂಗಣ್ಣ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 21-ಪಕ್ಷದ ರಾಜ್ಯ ನಾಯಕರು ಸ್ವಲ್ಪ ಕಾಯಲು ಹೇಳಿದ್ದಾರೆ ಇಂದಿ ಕಾರ್ಯಕರ್ತರ ಅಭಿಪ್ರಾಯದಂತೆ ನಾಲ್ಕು ದಿನಗಳಲ್ಲಿ ಅಂತಿಮವಾಗಿ ನುರ್ದಾರ ಮಾಡುವುದಾಗಿ ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಗುರುವಾರದಂದು ಕೊಪ್ಪಳ ನಗರದ ಶ್ರಿ ಶಿವಶಾಂತವೀರ ಮಂಗಲ ಭವನದಲ್ಲಿ ಜರುಗಿದೆ ಸಂಸದ ಸಂಗಣ್ಣ ಕರಡಿ ಅಭಿಮಾನಿಗಳ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ರಾಜಕಾರಣದಲ್ಲಿ ಯಾರು ಮಿತ್ರ, ಯಾರು ಶತ್ರು ಅನ್ನಬೇಕು ಅನ್ನೋದು ಗೊತ್ತಾಗುತ್ತಿಲ್ಲ ಎಂದು ಹೇಳುವುದರ ಮೂಲಕ ಪರೋಕ್ಷವಾಗಿ ಹಾಲಪ್ಪ ಆಚಾರ ಅವರ ವಿರುದ್ಧ ಕಿಡಿಕಾರಿದರು.
ಗರಂ ; ಕೊಪ್ಪಳದಲ್ಲಿ ಬಿಜೆಪಿ ಕಚೇರಿ ಬಿಟ್ಟು, ಕುಷ್ಟಗಿಯಲ್ಲಿ ಯಾಕೆ ಕೋರ್ ಕಮಿಟಿ ಮಾಡಿದ್ರು ಅನ್ನೋದು ಅರ್ಥ ಆಗಲಿಲ್ಲ ,ಇಂದು ಜರುಗಿದ ಸಭೆಗೆ ಬಿಜೆಪಿ ಪದಾಧಿಕಾರಿಗಳು ಹೊಗದಂತೆ ಹೋದರೆ ಕ್ರಮದ ಬೆದರಿಗೆ ನೀಡಿದ್ದಾರೆ.ನೀವು ಕ್ರಮ ಕೈಗೊಂಡರೇ ನಿಮ್ಮ ಬಿಜೆಪಿ ಪಾರ್ಟಿ ಖಾಲಿಯಾಗುತ್ತದೆ ಎಂದು ಸಂಗಣ್ಣ ಕರಡಿ ಟಾಂಗ್ ನೀಡಿದರು.
ಪಕ್ಷ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ ಹಾಗೂ ಬಿ ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ರಾಮದಾಸ ಸೇರಿದಂತೆ ಅನೇಕ ರಾಜ್ಯ ಮುಖಂಡರು ಕರೆ ಮಾಡಿ ದುಡುಕಿನ ನಿರ್ಧಾರ ತೇಗೆದು ಕೊಳ್ಳದಂತೆ ಸೂಚಿಸಿದ್ದಾರೆ.
ಸಭೆಯಲ್ಲಿ ಕೆಲವರು ಪಕ್ಷೇತರ ಅಭ್ಯರ್ಥಿ ಯಾಗಿ ನಿಲ್ಲರಿ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.ನಾನು ನರೇಂದ್ರ ಮೋದಿಯವರ ಅಭಿಮಾನಿ ಮತ್ತೆ ಮೋದಿಯವರನ್ನು ಪ್ರಧಾನಿ ಮಾಡಬೇಕಿದೆ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕೊಟ್ರಪ್ಪ ತೋಟದ್ ಮಾತನಾಡಿಬಿಜೆಪಿ ಟಿಕೆಟ್ ಬದಲಾಗಬೇಕು ಸಂಸದ ಸಂಗಣ್ಣ ಕರಡಿ ಹಗಲು ಇರುಳೆನ್ನದೆ ಜನ ಸೇವೆ, ಎರಡು ಅವದಿ ಸಂಸದರಾಗಿ ನಿರಂತರ ಜನ ಸೇವೆ ಮಾಡಿದ್ದಾರೆ, ಲೋಕಸಭೆಯಲ್ಲಿ ಹ್ಯಾಟ್ರಿಕ್ ಗೆಲುವಿಗಾಗಿ ಅಭ್ಯರ್ಥಿ ಬದಲಿಸಿ ಎಂದರು.
ಬಿಜೆಪಿ ಟಿಕೆಟ್ ಬದಲಿಸದಿದ್ದರೆ ಪ್ರತಿ ವಿಧಾನಸಭೆಯಲ್ಲಿ ಸಮಾವೇಶ ಮಾಡುಸಂಗಣ್ಣ ಕರಡಿಯಿಂದ ಯಾರಿಗೂ ನೋವು ಆಗಲಿಲ್ಲಾ. ರೈಲ್ವೆ ಬ್ರಿಜ್, ರೈಲು , ಹಳ್ಳಿ ಹಳ್ಳಿಯಲ್ಲಿ ಕೆಲಸ.ಸಂಗಣ್ಣ ಕರಡಿ ನಿರ್ಧಾರಕ್ಕೆ ಬದ್ಧ.
ನ್ಯಾಯವಾದಿ ಹನುಮಂತರಾವ ಕೆಂಪಳ್ಳಿ ಮಾತನಾಡಿ ಸಮರ್ಥರಿಗೆ ಟಿಕೆಟ್ ಕೆಡುವ ಬದಲು ಬಕೆಟ್ ಹಿಡಿಯುವವರಿಗೆ ಟಿಕೆಟ್ನೀಡಲಾಗಿದೆ ಇನ್ನು ನಾಮನೇಶನ ಆಗಿಲ್ಲಾ ಟಿಕೆಟ್ ಬದಲಾವಣೆ ಮಾಡಿ. ಜೀವನವನ್ನೆ ರಾಜಕಾರಣ ಮಾಡಿಕೊಂಡವರರು ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ನೀಡಿ ಎಂದು ಆಗ್ರಹಿಸಿದರು.
ವಕೀಲರ ಸಂಘದ ಅಧ್ಯಕ್ಷ ಎ ವಿ ಕಣವಿ ಮಾತನಾಡಿ ಸಂಗಣ್ಣ ಟಿಕೆಟ್ ಕೊಡದಿದ್ದರೆ ನಿಮಗೆ ನಷ್ಟ.389 ಪ್ರಶ್ನೆ ಕೇಳಿ ಜನರ ಸಮಸ್ಯೆಗೆ ಸ್ಪಂದನೆ ಮಾಡಿದ್ದಾರೆ, ಜನಪರ ಆಲೋಜನೆ, ಜನರನ್ನು ಬಿಟ್ಟು ಬದಕಲು ಸಾಧ್ಯವಿಲ್ಲ, ಕರ್ನಾಟಕದ ಜಿಜೆಪಿ ಸ್ಥಿತಿ ಚಿಂತಾಜನಕವಾಗಿದೆ. ಕೊಪ್ಪಳಕ್ಕೆ ಸಂಗಣ್ಣ ಕರಡ ಅನಿವಾರ್ಯ ಎಂದು ಹೇಳಿದರು.
ಮುಖಂಡ ನಾಗರಾಜ ಬಿಲ್ಗಾರ ಮಾತನಾಡಿ ಬಿಜೆಪಿ ಸಂಗಣ್ಣ ಕರಡಿ ಅವರ ಒಳ್ಳೆಯತನ ನೋಡಲಿಲ್ಲಾ , ಯಾವ ಮಾನ ದಂಡ ದಿಂದ ಟಿಕೆಟ್ ನೀಡಲ್ಲಾ ತಿಳಿಸಿ.ರಾಜಕಾರಣ ಜನ ,ಬಿಟ್ರಾ ಏನು ಗೊತ್ತಿಲ್ಲ.ಟಿಕೆಟ್ ಬದಲಿಸಿ. ಗೆಲ್ಲೂವುದು ಬಹಳ್ಳ ಮುಖ್ಯ. ದೇಶಕ್ಕೆ ಮೋದಿ ಕ್ಷೇತ್ರ ಕ್ಕೆ ಸಂಗಣ್ಣ ಎಂದರು.
ಮುಖಂಡ ಸಣ್ಣ ಕನಕಪ್ಪ ,ವಿರಭದ್ರಪ್ಪ ಆವಾರಿ
ಮಂಜುನಾಥ ಹಂದ್ರಾಳ , ವಿರುಪಾಕ್ಷಕಯ್ಯ ಗದುಗಿನಮಠ, ನಾಗರಾಜ ಬಿಲ್ಗಾರ, ವಿರುಪಾಕ್ಷಪ್ಪ, ಮಂಜುನಾಥ ನಾಡಗೌಡ್ರ ಇತರರು ಮಾತನಾಡಿದರು.