
ಸಂಘಟನೆಯ ಚಾತುರ್ಯತೆಯನ್ನು ಹೊಂದಿದ ವ್ಯಕ್ತಿ ನವೀನ್ ಕುಮಾರ್ ಗುಳಗಣ್ಣವರ : ಮಲ್ಲಪ್ಪ ಚಳಮಾರದ್
ಕರುನಾಡ ಬೆಳಗು ಸುದ್ದಿ
ಕುಕನೂರು,31-ಸಂಘಟನೆಯ ಚಾತುರ್ಯತೆಯನ್ನು ಹೊಂದಿದ ವ್ಯಕ್ತಿ ನವೀನ್ ಕುಮಾರ್ ಗುಳುಗಣ್ಣವರ್ ಎಂದು ಯಮನೂರು ಸ್ವಾಮಿ ದರ್ಗಾ ಕಮಿಟಿಯ ಕಾರ್ಯದರ್ಶಿ ಮಲ್ಲಪ್ಪ ಚಳಮಾರದ್ ಹೇಳಿದರು.
ತಾಲೂಕಿನ ಇಟಗಿ ಗ್ರಾಮದಲ್ಲಿ ಕುಕನೂರಿನ ಯಮನೂರ ಸ್ವಾಮಿ ದರ್ಗಾ ಸೇವಾ ಕಮಿಟಿ ವತಿಯಿಂದ ಮಂಗಳವಾರ ನೂತನವಾಗಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನವೀನ್ ಕುಮಾರ್ ಗುಳಗಣ್ಣನವರಿಗೆ ಕಮಿಟಿ ವತಿಯಿಂದ ಸನ್ಮಾನಿಸಿ ನಂತರ ಮಾತನಾಡಿದರು.
ಅವರು ಸಂಘಟನೆಯ ಚಾತುರ್ಯ ವ್ಯಕ್ತಿ ಮತ್ತು ಯುವಕರ ಸ್ಪೂರ್ತಿ ನೀಡುವಂತ ವ್ಯಕ್ತಿ ನವೀನ್ ಕುಮಾರ್ ಗುಳಗಣ್ಣನವರ್ ಅಂತಹ ವ್ಯಕ್ತಿಗೆ ಜಿಲ್ಲಾಧ್ಯಕ್ಷ ಸ್ಥಾನವನ್ನು ಕೊಟ್ಟಿರುವುದು ಭಾರತೀಯ ಜನತಾ ಪಕ್ಷದ ಒಳ್ಳೆಯ ನಿರ್ಧಾರ ಮುಂದಿನ ದಿನಮಾನಗಳಲ್ಲಿ ಒಳ್ಳೆಯ ಸಂಘಟನೆಯ ಬೆಳವಣಿಗೆಯನ್ನು ಅವರ ಮುಖದಲ್ಲಿ ಕಾಣಲಾಗಿದೆ ಅಲ್ಲದೆ ನಮ್ಮ ತಾಲೂಕಿನಲ್ಲಿ ಇಲ್ಲಿಯವರೆಗೂ ಜಿಲ್ಲಾಧ್ಯಕ್ಷರಾದವರು ಮುಂದೆ ಶಾಸಕರಾಗಿಯು ಕೂಡ ಸೇವೆ ಸಲ್ಲಿಸಿರುವುದು ಉದಾಹರಣೆಯಾಗಿವೆ ಕಾಣಬಹುದು ಅದೇ ತರಹ ಮುಂದಿನ ದಿನಮಾನಗಳಲ್ಲಿ ಸಂಘಟನೆಯ ಮೂಲಕ ತಾಲೂಕಿನ ಸೇವೆಗೆಳಿಯಲ್ಲಿದ್ದಾರೆ ನವೀನ್ ಕುಮಾರ್ ಗುಳಗಣ್ಣನವರು ಅವರ ಸಂಘಟನೆಯಿಂದಾಗಿ ಮತ್ತೆ ಭಾರತದಲ್ಲಿ ಪ್ರಧಾನಿ ಮೋದಿ ಮತ್ತೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಮಿಟಿಯ ಅಧ್ಯಕ್ಷ ಯಲ್ಲಪ್ಪ ಕಲಾಲ, ಗೌರವಾಧ್ಯಕ್ಷ ದೊಡ್ಡ ಯಮನೂರು ಸಾಬ್, ರಾಜಸಾಬ್ ನರೇಗಲ್, ಫಕೀರ ಸಾಬ್ ನರೇಗಲ್, ಮರ್ದಾನ್ ಸಾಬ್ ಸಿದ್ನೆಕೊಪ್ಪ, ಫಕೀರ ಸಾಬ್ ಬೇದವಟ್ಟಿ, ಗುಂಡಪ್ಪ ತಹಸಿಲ್ದಾರ್, ಉಮೇಶ್ ಕಲಾಲ್, ತಮ್ಮಣ್ಣ ಕಲಾಲ್, ರಂಜಾನ್ ಸಾಬ್ ಬೆದವಟ್ಟಿ, ಯಮನೂರು ಸಾಬ್ ಬೆದವಟ್ಟಿ, ನೇತಾಜಿ ಕಲಾಲ್, ಮಂಜುನಾಥ್ ಕಲಾಲ್, ಹಾಗೂ ಇತರರಿದ್ದರು.