WhatsApp Image 2024-02-25 at 5.46.45 PM

ಸಂತೋಷ್ ಲಾಡ್ ಹುಟ್ಟುಹಬ್ಬ ನಿಮಿತ್ತ ದಿಗ್ಗಜರ ಕುರಿತಾದ ಗೀತೆಗಳ ಬಿಡುಗಡೆ ಸಮಾರಂಭ

ಕರುನಾಡ ಬೆಳಗು ಸುದ್ದಿ

ವಿಜಯನಗರ,25- ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಎಸ್‌ ಲಾಡ್‌ ಅವರ ಹುಟ್ಟುಹಬ್ಬದ ಅಂಗವಾಗಿ ಹೊಸಪೇಟೆಯ ಡಾ. ಪುನೀತ್‌ ರಾಜ್‌ಕುಮಾರ್‌ ಮೈದಾನದಲ್ಲಿ ಇದೇ ಫೆ.27 ರಂದು ಸಂಜೆ 4.00 ಗಂಟೆಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಹುಟ್ಟುಹಬ್ಬದ ಅಂಗವಾಗಿ ಅಭಿಮಾನ ಸಮರ್ಪಣೆ ಹಾಗೂ ಸಂತೋಷ್ ಲಾಡ್ ಅವರು ಖ್ಯಾತ ಚಲನಚಿತ್ರ ಸಾಹಿತಿ ಡಾ. ವಿ ನಾಗೇಂದ್ರ ಪ್ರಸಾದ್‌ ಅವರಿಂದ ರಚಿಸಿರುವ ಕಾಯಕಯೋಗಿ ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಕುರಿತಾದ ಗೀತೆಗಳ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಖ್ಯಾತ ಗೀತೆ ರಚನೆಕಾರ ಡಾ. ಬಿ ನಾಗೇಂದ್ರ ಪ್ರಸಾದ್‌ ಅವರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ.

ಈ ಸಮಾರಂಭದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಕನ್ಹಯ್ಯಾ ಕುಮಾರ್‌, ರಾಷ್ಟ್ರೀಯ ದಲಿತ ಅಧಿಕಾರ ಮೋರ್ಚಾದ ಸಂಚಾಲಕ ಜಿಗ್ನೇಶ್‌ ಮೇವಾನಿ ಹಾಗೂ ಪಕ್ಷದ ಹಿರಿಯ ಮುಖಂಡರಾದ ಕೆ ರಾಜು ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.

ಉಸ್ತುವಾರಿ ಸಚಿವ ಬಿ.ಝಡ್.ಅಹಮದ್ ಖಾನ್, ಬಳ್ಳಾರಿ ಉಸ್ತುವಾರಿ ಸಚಿವ ನಾಗೇಂದ್ರ, ಜಿಲ್ಲೆಯ ಶಾಸಕರಾದ ಎಚ್.ಆರ್.ಗವಿಯಪ್ಪ, ಎನ್.ಟಿ.ಡಾ.ಶ್ರೀನಿವಾಸ, ಲತಾ ಮಲ್ಲಿಕಾರ್ಜುನ, ಕೃಷ್ಣನಾಯ್ಕ, ನೇಮಿರಾಜನಾಯ್ಕ್, ನಾರಾ ಭರತರೆಡ್ಡಿ, ಜೆ.ಎನ್.ಗಣೇಶ, ತುಕಾರಾಂ, ಬಿ.ಎಂ.ನಾಗರಾಜ, ಮಾಜಿ ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕ್, ಮಾಜಿ ಶಾಸಕ ಭೀಮಾನಾಯ್ಕ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ವಿಜಯನಗರ ಜಿಲ್ಲಾಧ್ಯಕ್ಷ ಸಿರಾಜಶೇಖ್, ಕೆಪಿಸಿಸಿ ಪ್ರ.ಕಾ.ರಾಣಿ ಸಂಯುಕ್ತಾ, ಮಹಮ್ಮದ್ ರಫೀಕ್, ಬಿ.ವಿ.ಶಿವಯೋಗಿ ಸೇರಿದಂತೆ ಇತರೆ ಜನಪ್ರತಿನಿಧಿಗಳು, ಎಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!