
ತಾಲೂಕಿನ ನಾನಾ ಕಡೇ ಸಂಭ್ರಮದಿಂದ ಎಳ್ಳಅಮವಾಸಿ ಆಚರಣೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 11 ತಾಲೂಕಿನ ತುಂಬಾ ನಾನಾ ಎಳ್ಳಅಮವಾಸಿ ದಿನದಂದು ಹಬ್ಬವನ್ನು ಎಲ್ಲರೂ ಆಚರಿಸುತ್ತಾರೆ ಈ ಹಬ್ಬಕ್ಕೆ ಜಾತಿ ಭೇದ ವಿಲ್ಲಾ.ಈ ಹಬ್ಬವನ್ನು ಎಲ್ಲಾ ಸಮುದಾಯದ ರೈತರು ಅತಿ ಸಂತೋಷದಿಂದ ಆಚರಿಸುವ ಮಹತ್ವದ ಹಬ್ಬವಾಗಿದೆ.
ಉತ್ತರ ಕರ್ನಾಟಕದಲ್ಲಿ ಎಳ್ಳ ಅಮವಾಸ್ಯೆ ರೈತರ ಪಾಲಿಗೆ ಸಂಭ್ರಮದ ಹಬ್ಬ. ಪ್ರತಿಯೊಂದು ಕುಟುಂಬದ ಮಹಿಳೆಯರು ಬಗೆ ಬಗೆಯ ಸಿಹಿ ತಿನ್ನಸು ಎಳ್ಳಹೋಳಿಗೆ. ಸಿಂಗಾಹೋಳಿಗೆ.ಒಬಟ್ಟು.ಬಿಳಿಜೋಳದ ರೂಟಿ.ಸಜ್ಜಿರೂಟಿ.ಬಗೆ ಬಗೆಯ ಇನ್ನೂ ಹಲವಾರು ರೀತಿಯ ಆಹಾರ ಪದಾರ್ಥಗಳನ್ನು ಮನೆಯಲ್ಲಿ ಮಾಡಿಕೊಂಡು ಹೊಲಕ್ಕೆ ಹೋಗಿ ಭೂತಾಯಿಗೆ ಪೂಜಿಸುತ್ತಾರೆ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಕೊಪ್ಪಳ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಗದಗ, ಧಾರವಾಡ, ರಾಯಚೂರು ಜಿಲ್ಲೆ ಸೇರಿದಂತೆ ಬಹುತೇಕ ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಬಹಳ ವಿಶೇಷ ಈ ಎಳ್ಳ ಅಮವಾಸ್ಯೆ ದಿನದಂದು ರೈತರು ತಮ್ಮ ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗಿ ಚರಗ ಚೆಲ್ಲಿ ಭೂತಾಯಿಗೆ ನಮನ ಸಲ್ಲಿಸುತ್ತಾರೆ.
ಹಬ್ಬವನ್ನು ರೈತರು ಹೊಲದಲ್ಲಿ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಯಲಬುರ್ಗಾ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸೀಮಿಯಲ್ಲಿ ‘ಚೆರಗ ಚೆಲ್ಲುವ ಹಬ್ಬ’ ಅತಿ ವಿಶಿಷ್ಟವಾಗಿ ಆಚರಿಸುವುದು ಕಂಡು ಬರುತ್ತದೆ ಎಳ್ಳು ಅಮಾವಾಸ್ಯೆಯ ಪ್ರಯುಕ್ತ ಪಾಂಡವರನ್ನು ಹೊಲದಲ್ಲಿ ಪೂಜೆ ಸಲ್ಲಿಸುವ ಮೂಲಕ ಎಳ್ಳು ಅಮಾವಾಸ್ಯೆ ಅಪ್ಪಟ ರೈತರ ಹಬ್ಬ ಹೊಲಗಳಲ್ಲಿ ಬೆಳೆದು ನಿಂತಿರುವ ಕಡಲೆ.ಬಿಳಿ ಜೋಳ ಕುಸಿಬಿ ಇನ್ನಿತರ ಹಿಂಗಾರು ಪೈರುಗಳ ನಡುವೆ ಬನ್ನಿ ಮರಗಳಿಗೆ, ಬನ್ನಿಕಂಟಿಗೆ ಸೀರೆ ಉಡಿಸಿ, ಐದು ಕಲ್ಲುಗಳನ್ನು ( ಪಾಂಡವರು) ಇಟ್ಟು ಭೂ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ “ಹುಲಿಗೊ ಚಲಾಂಬರಗೋ ’ಎಂದು ಕೂಗುತ್ತ ಮನೆಯಿಂದ ತಂದ ಆಹಾರವನ್ನು ಹೊಲದಲ್ಲಿ ಚೆಲುತ್ತಾರೆ.
ಇದನ್ನೇ ಚರಗ ಚೆಲ್ಲುವುದು ಎಂದು ಕರೆಯುತ್ತಾರೆ. ಈ ಎಳ್ಳು ಅಮಾವಾಸ್ಯೆಯಂದು ಹೊಲಕ್ಕೆ ಹೋಗಿ ಚರಗ ಚೆಲ್ಲುವುದು ಈ ಯರಿ ಭಾಗದಲ್ಲಿ ಅದ್ದೂರಿಯಾಗಿ ಹಬ್ಬವನ್ನು ತಮ್ಮ ತಮ್ಮ ಹೊಲದಲ್ಲಿ ಅತಿ ಸಂತಸದಿಂದ ಆಚರಿಸುವದು ಕಂಡುಬರುತ್ತದೆ. ಜೊತೆಗೆ ತಮ್ಮ ಬಂಧು ಬಾಂಧವರನ್ನು ಸಂಬಂಧಿಕರು.,ಸ್ನೇಹಿತರು ತಮ್ಮ ಗೆ ಬೇಕಾದವರನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿ , ಚರಗ ಚೆಲ್ಲಿದ ನಂತರ ಹೊಲಗಳಲ್ಲಿ ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಊಟ ಮಾಡುವುದು ಒಂದು ವಿಶೇಷ.ಹಬ್ಬವಾಗಿದೆ