WhatsApp Image 2024-02-03 at 5.49.07 PM

ಸಂವಿಧಾನ ಕುರಿತು ಜಾಗೃತಿ ಮೂಡಿಸಿ :  ತಹಸೀಲ್ದಾರ್ ಹೆಚ್.ಪ್ರಾಣೇಶ್

ಕರುನಾಡ ಬೆಳಗು ಸುದ್ದಿ

ಕುಕನೂರು,3- ಸಂವಿಧಾನ ದಿನಾಚರಣೆಯ ನಿಮಿತ್ತ ಕುರಿತು ಸಂವಿಧಾನ ಜಾಗೃತಿ ಜಾಥ ನಡೆಯುತ್ತಿದ್ದು, ಪ್ರತಿಯೊಬ್ಬರು ಸಂವಿಧಾನ ಕುರಿತು ಜಾಗೃತಿ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಹೆಚ್.ಪ್ರಾಣೇಶ್ ಹೇಳಿದರು.

ತಾಲೂಕಿನ ಭಾನಾಪುರ ಗ್ರಾಮದಲ್ಲಿ ಸಂವಿಧಾನ ದಿನಾಚರಣೆ ನಿಮಿತ್ಯ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾದ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ  ಮಾತನಾಡಿದರು. ಜಿಲ್ಲೆಯಾ ದ್ಯಂತ ಜಾಗೃತಿ ಜಾಥಾ ನಡೆಯುತ್ತಿದ್ದು, ಸದ್ಯ ಕುಕನೂರು ತಾಲೂಕಿಗೆ ಆಗಮಿಸಿದ್ದು, ಪ್ರತಿ ಗ್ರಾಪಂ ಮಟ್ಟದಲ್ಲಿ ತಲುಪಲಿದೆ. ಇದರ ಜನರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ವಿ.ಕೆ.ಬಡಿಗೇರ, ಗ್ರಾಪಂ ಪಿಡಿಓ ರಮೇಶ ತಿಮ್ಮಾರಡ್ಡಿ, ಗ್ರಾಪಂ ಉಪಾಧ್ಯಕ್ಷೆ ಪವಿತ್ರಾ ಪ್ರಕಾಶ ಬಂಗೇರ, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ವಿಜಯಕುಮಾರ, ಗ್ರಾಪಂ ಕಾರ್ಯದರ್ಶಿ ಪರಶುರಾಮ ನಾಯಕ, ಗ್ರಾಮಲೆಕ್ಕಿಗ ಹನುಮೇಶ ಮಾಳೆಕೊಪ್ಪ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಬಸಪ್ಪ ಗಡ್ಡದ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಪ್ರೌಢ ಶಾಲೆ ಮುಖ್ಯೋಪಾಧ್ಯ ನಾಗಪ್ಪ ಅಗಸಿಮುಂದಿನ, ಸೋಮಶೇಖರ ಹರ್ತಿ, ಆನಂದ ಕುಮಾರ ಕನ್ನಾರಿ, ಕಾಶಿವಿಶ್ವನಾಥ, ಉದಯಕುಮಾರ, ಲಿಂಗರಡ್ಡಿ, ಮಾಜಿ ಗ್ರಾಪಂ ಸದಸ್ಯ ಪ್ರಕಾಶ ಸುಳ್ಳದ, ಕರವಸೂಲಿಗಾರ ಅಲ್ಲಾಭಕ್ಷಿ ನದಾಪ್, ಪ್ರಮುಖರಾದ ಪರಶುರಾಮ ಮಡಿವಾಳರ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!