
ಸಂವಿಧಾನ ನಮ್ಮನ್ನು ರಕ್ಷಿಸಿಸು ದೊಡ್ಡ ಅಸ್ತ್ರ
ಮುತ್ತಪ್ಪ ಹೂವನವರ
ಕರುನಾಡ ಬೆಳಗು ಸುದ್ದಿ
ಕುಕನೂರ 27-ಸಂವಿಧಾನ ನಮ್ಮಲ್ಲರನ್ನು ರಕ್ಷಿಸಿಸುವ ಬಹು ದೊಡ್ಡ ಕಾನೂನು ಎಂದು ಊರಿನ ಹಿರಿಯ ಮುಖಂಡ ಮುತ್ತಪ್ಪ ಹೂವನವರ ಹೇಳಿದರು.
ತಾಲೂಕಿನ ಮೊಳೆಕೊಪ್ಪ ಗ್ರಾಮದಲ್ಲಿ ಸಂವಿಧಾನ ದಿನಾಚಾರಣೆ ಮಾಡಲಾಯಿತು.ಸಂವಿಧಾನ ದಿನಾಚಾರಣೆ ಉದ್ದೇಸಿಸಿ ಮುತ್ತಪ್ಪ ಹೂವನವರ ಮಾತನಾಡಿ, ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತ ಗೊಳಿಸಿದ ಸರ್ವರಿಗೂ ಸಮಾನತೆಯೋದಗಿಸಿದೆ. ಮೂಲಭೂತ ಹಕ್ಕುಗಳ ಕರ್ತವ್ಯವನ್ನು ನೀಡಿದೆ.
ಭಾರತಕ್ಕೆ ಸಂವಿಧಾನವೆ ದೊಡ್ಡ ಬಲ ನಮ್ಮ ಸಂವಿಧಾನವು ನಮ್ಮಲ್ಲರನ್ನು ರಕ್ಷಿಸಿಸುವ ಬಹು ದೊಡ್ಡ ಕಾನೂನು.
ನಮ್ಮ ದೇಶದಲ್ಲಿ ಹೊಸ ಶಕೆ ಆರಂಭವಾಗಿದೆ.
ಸಂವಿಧಾನ ಜಾರಿಗೆ ಬಂದಾಗಿನಿಂದಲೇ ಸಂವಿಧಾನ ಮಹತ್ವದ ಬಗ್ಗೆ ಎಲ್ಲ ರಿಗೂ ಅರಿವು ಮೂಡಿಸಿರುವ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೆಡ್ಕರ ಅವರಿಗೆ ಗೌರವ ಸಾಲಿಸುವುದರ ಜೊತೆಗೆ ಅವರ ಸಾಧನೆಯ ಬಗ್ಗೆ ತಿಳಿಸಿಕೊಡುವುದು ಈ ದಿನದ ವಿಶೇಷತೆ ಭಾರತದ ಸಂವಿಧಾನಕ್ಕೆ ವಿಶ್ವದಲೇ ದೊಡ್ಡ ಸಂವಿಧಾನ ಎಂಬ ಹಿರಿಮೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಲಗಪ್ಪ ಛಲವಾದಿ, , ನಿಂಗಪ್ಪ, ಸಿದ್ದಣ್ಣ, ಮಲಪ್ಪ, ಶಿವನಂದಪ್ಪ, ರುದ್ರಪ್ಪ, ಚಿದಾನಂದ, ನಿಂಗಪ್ಪ, ಈರಪ್ಪ, ಇತರರಿದ್ದರು.