WhatsApp Image 2024-03-20 at 12.12.41 PM

ಸಂಸದ ಅನಂತಕುಮಾರ ಹೆಗಡೆ ಗಡಿಪಾರಿಗೆ ಆಗ್ರಹ

ಕರುನಾಡ ಬೆಳಗು ಸುದ್ದಿ

ಕುಕನೂರು,20- ಸಂಸದ ಅನಂತಕುಮಾರ ಹೆಗಡೆ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಸಮಿತಿಯಿಂದ ಗ್ರೇಡ್-2 ತಹಶೀಲ್ದಾರ್ ಮುರುಳಿಧರ್ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಆಗಮಿಸಿದ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಸಮಿತಿಯ ಕಲಬುರ್ಗಿ ವಿಭಾಗೀಯ ಉಪಾಧ್ಯಕ್ಷ ಬಸವರಾಜ ನಡುವಲಮನಿ ಮಾತನಾಡಿ, ರಾಜ್ಯದ ಬಿಜೆಪಿ ಪಕ್ಷದ ಸಂಸದ ಅನಂತಕುಮಾರ ಹೆಗಡೆ ಅವರು ಪದೆ ಪದೇ ಸಂವಿಧಾನವನ್ನು ನಾವು ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡುತ್ತಾ ಬಂದಿದ್ದಾರೆ. ಆದರೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರವಾಗಲಿ ಅವರ ವಿರುದ್ಧ ಏನು ಕ್ರಮ ಕೈಗೊಂಡಿಲ್ಲ ಮತ್ತೆ ಸಂವಿಧಾನ ಕುರಿತು ತಮ್ಮ ಹೇಳಿಕೆಯನ್ನು ಪುರ್ನರುಚ್ಚರಿಸಿದ್ದಾರೆ. ಸಂವಿಧಾನ ವಿರೋಧ ಹೇಳಿಕೆಯಾಗಿದ್ದು ಅನಂತಕುಮಾರ ಹೆಗಡೆ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಕಾನೂನಿನ ಅಡಿಯಲ್ಲಿ ಕಠೋರವಾದ ಶಿಕ್ಷೆಯನ್ನು ಕೊಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಸವರಾಜ ನಡುವಲಮನಿ, ಶಿವಪ್ಪ ಭಂಡಾರಿ, ವೆಂಕಟೇಶ ಬಳ್ಳಾರಿ, ರವಿ ಹಿರೇಮನಿ, ಶರಣಪ್ಪ ಹಿರೇಮನಿ, ಹನಮಂತಪ್ಪ ಕಡೇಮನಿ, ಅಂದಪ್ಪ ಭಂಡಾರಿ, ಲೋಹಿತ್ ಹಿರೇಮನಿ ಸೇರಿದಂತೆ ಇತರರು ಇದ್ದರು.

ಕುಕನೂರು ಪಟ್ಟಣದಲ್ಲಿ ಸಂಸದ ಅನಂತಕುಮಾರ ಹೆಗಡೆ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಸಮಿತಿಯಿಂದ ಗ್ರೇಡ್-೨ ತಹಶೀಲ್ದಾರ್ ಮುರುಳಿಧರ್ ಕುಲಕರ್ಣಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!