
ಸಡಗರದಿಂದ ನಡೆದ ಶ್ರೀ ರಾಮ ನಾಮ ಜಪ ಎಲ್ಲಿ ನೋಡಿದರೂ ರಾಮ ನಾಮ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,22- ಅಯೋಧ್ಯೆಯಲ್ಲಿ ರಾಮದೇವರ ಪ್ರತಿಷ್ಠಾಪನ ಅಂಗವಾಗಿ ಇಂದು ನಗರದಲ್ಲಿ ಸಡಗರದಿಂದ ರಾಮನಾಮ ಜಪ ಮತ್ತು ಹಲವಾರು ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆದವು. ಕೇಸರಿ ಬಣ್ಣದ ಧ್ವಜಗಳು ದೇವಸ್ಥಾನ ಮತ್ತು ಮುಖ್ಯ ರಸ್ತೆಗಳಲ್ಲಿ ಹಾರಿದವು. ಪ್ರಧಾನವಾಗಿ ಆಂಜನೇಯ, ಮತ್ತು ರಾಮದೇವರ ದೇವಸ್ಥಾನಗಳಲ್ಲೂ ರಾಮನಿಗೆ ವಿಶೇಷ ಪೂಜಾ ಕಾರ್ಯಗಳು ಅದ್ದೂರಿಯಾಗಿ ನಡೆದವು. ಒಂದು ಕಡೆ ರಾಷ್ಟ್ರ ಸರ್ಕಾರ ರಾಜ ಘೋಷಣೆ ಮಾಡಿರುವುದರಿಂದ ಪೋಸ್ಟ್ ಆಫೀಸ್ ಮತ್ತು ಬ್ಯಾಂಕುಗಳು ಮುಚ್ಚಲಾಯಿತು. ನಗರದ ಪ್ರಧಾನ ರಸ್ತೆಗಳಲ್ಲಿ ಭಕ್ತ ಮಂಡಳಿ ಅವರು ಹಾಕಿದ ಎಲ್ಇಡಿ ಟಿವಿಗಳಲ್ಲಿ ಅಯೋಧ್ಯೆಯ ರಾಮದೇವರ ದೇವಸ್ಥಾನ ಪ್ರಾರಂಭೋತ್ಸವ ಕಾರ್ಯಕ್ರಮಗಳನ್ನು ಕಣ್ತುಂಬ ವೀಕ್ಷಣೆ ಮಾಡಿದರು. ಮತ ಸರ್ಕಲ್, ಬೆಂಗಳೂರು ರೋಡ್, ಬಸವೇಶ್ವರನಗರ, ಗಳ ಜತೆಗೆ ಹಲವಾರು ಏರಿಯಾ ಗಳಲ್ಲಿ ರಾಮದೇವರ ಪೂಜೆ ಪುರಸ್ಕಾರಗಳ ನಂತರ ಭಕ್ತಾದಿಗಳಿಗೆ ಸೇವಾ ಸಂಸ್ಥೆಗಳು ಪ್ರಸಾದ ವಿತರಣೆ ಮಾಡಲಾಯಿತು. ನಗರದ ನಾನಾ ಭಾಗಗಳಲ್ಲಿ ಇಂದು ಶ್ರೀ ರಾಮನ ಪೂಜೆ ಅಂಗವಾಗಿ ಹಬ್ಬದ ವಾತಾವರಣ ಅಳವಡಿಸಿತ್ತು.