03 TVR 02

ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ

ಸದೃಡ ಕರ್ನಾಟಕ ನಿರ್ಮಾಣಕ್ಕಾಗಿ ಬೆಂಬಲಿಸಿ

ಆಪ್ತ ಸಮಾಲೋಚಕರಾದ ಅರುಣ್ ಕುಮಾರ್ ಕರೆ

ಕರುನಾಡ ಬೆಳಗು ಸುದ್ದಿ

ತಾವರಗೇರಾ,೦೩- ಗರ್ಬಿಣೀಯರನ್ನು ಹಾಗು ಮಕ್ಕಳನ್ನು ಸದೃಡರನ್ನಾಗಿಸುವ ಮಹತ್ವದ ಕಾರ್ಯ ಈ ಕಾರ್ಯಕ್ರಮದ ಉದ್ದೇಶವಾಗಿದೆ ಇದರ ಯಶಸ್ವಿಗೆ ವಿಧ್ಯರ್ಥಿಗಳು ಕೈಜೋಡಿಸಿದರೆ ಸದೃಡ ಕರ್ನಾಟಕ ಸಾದ್ಯ ಎಂದು ಆಪ್ತ ಸಮಾಲೋಚಕರಾದ ಅರುಣ್ ಕುಮಾರ್ ಕರೆ ನೀಇಡದರು.

ಅವರು ಪಟ್ಟಣದ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಏರ್ಪಡಿಸಿದ್ದ “ಅನೀಮಿಯಾ ಮುಕ್ತ ಪೌಷ್ಟೀಕಾ ಕರ್ನಾಟಕ ಕಾರ್ಯಕ್ರಮವನ್ನು ನಿಯೋಜಿಸಿದ್ದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ಸಮುದಾಯ ಅರೋಗ್ಯ ಕೇಂದ್ರ ತಾವರಗೇರಾ, ಕಿಶೋರ್ ಮತ್ತು ಬಾಲ ಸ್ವಾಸ್ಥö್ಯ ಕಾರ್ಯಕ್ರಮ, ಶ್ರೀ ಶಶಿಧರ ಸ್ವಾಮಿ ಪದವಿ ಪೂರ್ವ ಕಾಲೆಜ ತಾವರಗೇರಾ ಸಹಯೋಗದಿಂದ ಆಯೋಜಿಸಿದ್ದ “ಅನೀಮಿಯಾ ಮುಕ್ತ ಪೌಷ್ಟೀಕ ಕರ್ನಾಟಕ” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಸದೃಡ ಕರ್ನಾಟಕ ನಿರ್ಮಾಣಕ್ಕಾಗಿ ನಮ್ಮ ಘನ ಸರ್ಕಾರ”ಅನೀಮಿಯಾ ಮುಕ್ತ ಪೌಷ್ಟೀಕ ಕರ್ನಾಟಕ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಹದಿಹರೆಯದ ವಯಸ್ಸಿನಲ್ಲಿಯೇ ರಕತ ಹೀನತೆಯನ್ನು ಹೋಗಲಾಡಿಸಲು ಈ ಕಾರ್ಯಕ್ರಮ ದಿಟ್ಟಹೆಜ್ಜೆಯಾಗಿದೆ, ಎಲ್ಲ ಪದವಿ ಪೂರ್ವ ಕಾಲೇಜ ವಿಧ್ಯಾರ್ಥಿಗಳಿಗೆ ಹಿಮೊಗ್ಲೊಬಿನ್ ಪರಿಕ್ಷೆ ಮಾಡಿಸಿ ಪರಿಕ್ಷೆಯ ಆಧಾರದ ಮೇಲೆ ಅವರಿಗೆ ಉಚಿತ ಚಿಕಿತ್ಸೆ ಹಾಗು ಆಪ್ತಸಮಾಲೋಚನೆಯನ್ನು ನೀಡುವದರ ಮೂಲಕ ಭವಿಷದ ನಾಗರೀಕರನ್ನು ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಭಾರತಿ ಬಸವರಾಜ ಹಿರಿಯ ಉಪನ್ಯಾಸಕರು ವಹಿಸಿದ್ದರು. ಉಧ್ಘಾಟನೆ ಡಾ.ರಾಜೇಂದ್ರ ಪ್ರಸಾದ, ಮುಖ್ಯ ಅತಿಥಿಗಳಾಗಿ ಡಾ.ಸಂತೋಷಕುಮಾರ ಹಾದಿಮನಿ, ಡಾ.ಸಿದ್ದನಗೌಡ, ಡಾ.ವಿಜಯಲಕ್ಷಿ, ಮಹಾಂತಗೌಡ ನೇತ್ರಾಧಿಕಾರಿಗಳು, ಕುಮಾರಿ ಸೀತಾ ಆರೋಗ್ಯ ಅಧಿಕಾರಿಗಳು ಭಾಗವಹಸಿದ್ದರು.
ಫೋಟೋ ಕ್ಯಾಫ್ಸನ್-“ಪರಿಕ್ಷೆ ಚಿಕಿತ್ಸೆ ಉಚಿತ ಅನಿಮಿಯಾ ಮುಕ್ತ ಖಚಿತ” ಕಾರ್ಯಕ್ರಮವನ್ನು ಶನಿವಾರ ಶ್ರೀ ಶಶಿ ಧರ ಸ್ವಾಮಿ ಪದವಿ ಪೂರ್ವ ಕಾಲೇಜ ತಾವರಗೇರ, ಆರ್ ಬಿ ಎಸ್ ಕೆ ತಂಡ, ಆರ್ ಕೆ ಎಸ್ ಕೆ ಮತ್ತು ಸಮುದಾಯ ಅರೋಗ್ಯ ಕೇಂದ್ರ ತಾವರಗೇರ ಇವರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನರವೇರಿತು.

Leave a Reply

Your email address will not be published. Required fields are marked *

error: Content is protected !!