f3e6dd39-3d20-4dcf-a169-66fa54df7ed5

ಸನ್ನೆ ಬರಹದಿಂದ ಮಕ್ಕಳು ಆಕರ್ಷಿತರಾಗಿ ಕನ್ನಡ ಬರಹ.ಓದು ಕಲಿಯುತ್ತಾರೆ – ಪೀರಜಾದೆ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೮-  ಕನ್ನಡ ಭಾಷೆ ಕಲಿಕೆಯಲ್ಲಿ ಅನೇಕ ಸರಳ ವಿಧಾನಗಳಿವೆ. ಅದರಲ್ಲಿ ಕನ್ನಡ ಸನ್ನೆ ಬರಹವು ಸಹ ಒಂದು. ಪ್ರಾಥಮಿಕ ಹಂತದಲ್ಲಿ ಕನ್ನಡ ಭಾಷೆ ಬರಹ ಮತ್ತು ಓದುವುದನ್ನು ಕಲಿಸುತ್ತಾ ಕನ್ನಡ ಭಾಷೆಯಲ್ಲಿ ಸನ್ನೆ ಬರಹವನ್ನು ಕಲಿಸುತ್ತಾ ಹೋದರೆ ಮಕ್ಕಳು ಕಡಿಮೆ ಸಮಯದಲ್ಲಿ ಕಲಿಯಲು ಸಾಧ್ಯ ಎಂದು ಉರ್ದು ಶಾಲೆಯ ಕನ್ನಡ ನಿವೃತ್ತ ಶಿಕ್ಷಕ ಹಾಗೂ ಕನ್ನಡ ಸನ್ನೆ ಬರಹ ಸಂಶೋಧಕ ಸೈಯ್ಯದ್ ಗೌಸ್ ಮೊಹಿಯುದ್ದೀನ್ ಪೀರಜಾದೆ ಹೇಳಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯ ಮಕ್ಕಳಿಗೆ ಕನ್ನಡ ಸನ್ನೆ ಬರಹ ಪ್ರದರ್ಶನ ನೀಡಿದ ಸೈಯ್ಯದ್ ಗೌಸ್ ಮೊಹಿಯುದ್ದೀನ್ ಪೀರಜಾದೆ ಮುಂದುವರೆದು ಮಾತನಾಡಿಎಂಥಾ ಕಠಿಣ ಶಬ್ದಗಳನ್ನು ಕೊಟ್ಟರೂ ಸಹ ಅದನ್ನು ಸನ್ನೆ ಗಮನಿಸಿ ಸರಳವಾಗಿ ಮಕ್ಕಳು ಬರೆಯುತ್ತಾರೆ.

ಕನ್ನಡ ಕಲಿಸುತ್ತಾ ಜೊತೆಗೆ ಸನ್ನೆ ಬರಹವು ಕಲಿಸಿದರೆ ಮಕ್ಕಳು ಆಕರ್ಷಿತರಾಗಿ ಕನ್ನಡ ಭಾಷೆ ಬರೆಯಲು.ಓದಲು ಕಲಿಯುತ್ತಾರೆ. ನಾನು ಇದೇ ಕೊಪ್ಪಳ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿದ್ದ ಐದ ರಿಂದ ಏಳನೇಯ ತರಗತಿಯವರಿಗೆ ಪಿಯುಟಿಸಿಯಲ್ಲಿ ಎಂಟರಿಂದ ಹತ್ತನೇ ತರಗತಿ ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ನಂತರ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ 1978 ರಿಂದ 80 ವರೆಗೆ ಕಲಿತು ರಾಯಚೂರಿನ ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕನಾಗಿ ನೇಮಕಗೊಂಡು ಸುಧೀರ್ಘ ಸೇವೆ ಸಲ್ಲಿಸಿದ ನಂತರ ನಿವೃತ್ತಿಗೊಂಡಿದ್ದೇನೆ ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ನಗರದ ಬಹಾರ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ನೌಮಾನ್ ಖಾಸೀಮ್ ಸಾಬ್ ಕಿಲ್ಲೇದಾರ್ ನಿವೃತ್ತ ಶಿಕ್ಷಕ ಸೈಯ್ಯದ್ ಗೌಸ್ ಮೊಹಿಯುದ್ದೀನ್ ಪೀರಜಾದೆ ಅವರು ಹೆಜ್ಜೆ ಇಡುವುದನ್ನು ಮತ್ತು ಸನ್ನೆ ಗಮನಿಸಿ ಬರೆಯುವ ಮೂಲಕ ಎಲ್ಲರ ಗಮನ ಸೆಳೆದರು.
ಕನ್ನಡ ಸನ್ನೆ ಬರಹ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ಮೊಹಮ್ಮದ್ ಅಬ್ದುಲ್ ಖಯ್ಯೂಮ್ ಪರದೇಘರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್. ಆಂಗ್ಲ ಶಿಕ್ಷಕ ರಾಮಣ್ಣ ಚಲವಾದಿ. ಹಿಂದಿ ಶಿಕ್ಷಕ ಹುಲಗಪ್ಪ ಅಡ್ಡಮನಿ. ದೈಹಿಕ ಶಿಕ್ಷಕ ಸಿದ್ದಪ್ಪ ಮೇಟಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!