WhatsApp Image 2024-01-26 at 5.41.41 PM

ಸಮಗ್ರ ಅಭಿವೃದ್ಧಿಗೆ ಎಲ್ಲರೂ ಶ್ರಮ ವಹಿಸಬೇಕು ಶಾಸಕ ಬಿ ಎಂ ನಾಗರಾಜ್

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,26- ಭಾರತ ಸರ್ಕಾರದ ಕಾಯಿದೆ 1950ರಲ್ಲಿ ಭಾರತದ ಸಂವಿಧಾನವು ಜಾರಿಗೆ ಬಂದ ಮಹತ್ವದ ಸಂದರ್ಭವನ್ನು ಸೂಚಿಸುತ್ತದೆ ಎಂದು ತಾಲೂಕ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಹೆಚ್ ವಿಶ್ವನಾಥ ಅವರು ಹೇಳಿದರು.

ಸಿರುಗುಪ್ಪ ನಗರದ ತಾಲೂಕ ಕ್ರೀಡಾ ಮೈದಾನದಲ್ಲಿ 75ನೇ ಗಣರಾಜ್ಯೋತ್ಸವದ ದಿನಾಚರಣೆಯ ಪ್ರಯುಕ್ತ ರಾಷ್ಟ್ರಪತಿ ಮಹಾತ್ಮ ಗಾಂಧೀಜಿಯವರ ಮತ್ತು ಬಿ ಆರ್ ಅಂಬೇಡ್ಕರ್ ಅವರ ಭಾವ ಚಿತ್ರಗಳಿಗೆ ಗೌರವ ಸಮರ್ಪಣೆ ಮಾಡಿ ರಾಷ್ಟ್ರಧ್ವಜ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿ ಅವರು ಮಾತನಾಡುತ್ತಾ ಗಣರಾಜ್ಯೋತ್ಸವವು ಭಾರತವನ್ನು ಸಾರ್ವಭೌಮ ಗಣರಾಜ್ಯವಾಗಿ ಪರಿವರ್ತಿಸುವುದನ್ನು ಗೌರವಿಸುವ ಮಹತ್ವದ ದಿನವಾಗಿದೆ ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವದ ಆದರ್ಶಗಳಿಗೆ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.

ಧರ್ಮದ ಆಧಾರದಲ್ಲಿ ದೇಶ ಕಟ್ಟುವುದನ್ನು ಒಪ್ಪಲು ಸಾಧ್ಯವಿಲ್ಲ ಸಂವಿಧಾನದ ಆಶಯಗಳನ್ನು ಸಾಕಾರ ಗೊಳಿಸುವುದೇ ನಮ್ಮ ರಾಜ ಧರ್ಮ ಎಂದು ನಂಬಿರುವ ಕಾಂಗ್ರೆಸ್ ಸರ್ಕಾರ ನಮ್ಮದು ಎಂದು ಜನಪರ ಜನಪ್ರಿಯ ಶಾಸಕ ಬಿ ಎಂ ನಾಗರಾಜ್ ಅವರು ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಉದ್ಘಾಟಕರಾಗಿ ಪಥಸಂಚಲನ ವೀಕ್ಷಣೆ ಗೌರವ ವಂದನೆ ಸ್ವೀಕಾರ ದೊಂದಿಗೆ ಮಾತನಾಡುತ್ತಾ ಯುಗಾಂತರಗಳಿಂದ ಮಾನವೀಯತೆ ನೆಲೆಸಿರುವ ರಾಷ್ಟ್ರ ನಮ್ಮ ಭಾರತ ಇದು ಜಾತ್ಯತೀತ ಧರ್ಮ ಸಮಾಜ ಸಾಂಸ್ಕೃತಿ ವಿಭಿನ್ನ ಮತ್ತು ಭಾಷೆಗಳಿಂದ ಎಲ್ಲವೂ ಪರಸ್ಪರ ಶಾಂತಿ ಮತ್ತು ಸಹೋದರ ಸರ್ವಾಂಗೀಣ ಅಭಿವೃದ್ಧಿಗೆ ನಾವೆಲ್ಲರೂ ಒಟ್ಟಾಗಿ ಶ್ರಮ ವಹಿಸಬೇಕು ಎಂದು ಕರೆ ನೀಡಿದರು.

ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯ ಕೋರಿದರು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಎಸ್ ದಂಡಪ್ಪನವರ್, ಪೊಲೀಸ್ ಉಪ ಅಧೀಕ್ಷಕರು ಯು ವೆಂಕಟೇಶ, ನಗರಸಭಾ ಪೌರಾಯುಕ್ತ ಗಂಗಾಧರ ಗೌಡ ಎಂ, ಕ್ಷೇತ್ರ ಶಿಕ್ಷಣಾಧಿಕಾರಿ ಗುರ್ರ ಪ್ಪ, ಕ್ಷೇತ್ರ ಸಂಪನ್ಮೂಲ ಕೇಂದ್ರ ಶಿಕ್ಷಣ ಸಮನ್ವಯಾಧಿಕಾರಿ ತಮ್ಮನ ಗೌಡ ಪಾಟೀಲ್, ತಾಲೂಕ ಆರೋಗ್ಯ ವೈದ್ಯಾಧಿಕಾರಿ ಡಾ ಬಿ ಈರಣ್ಣ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಬಿ ರಾಜೇಶ್ವರಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎ ಗಾದಿಲಿಂಗಪ್ಪ, ಪರಿಶಿಷ್ಟ ವರ್ಗಗಳ ಇಲಾಖೆ ಅಧಿಕಾರಿ ರಾಘವೇಂದ್ರ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಅಧಿಕಾರಿ ಪ್ರದೀಪ್, ಸಹಾಯಕ ಕೃಷಿ ನಿರ್ದೇಶಕ ಎಸ್ ಬಿ ಪಾಟೀಲ್ ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ರಾಜ ಲಿಂಗಾರೆಡ್ಡಿ, ಸಿಪಿಐ ವೈ ಎನ್ ಹನುಮಂತಪ್ಪ , ಪಿಎಸ್ಐ ತಿಮ್ಮಣ್ಣ, ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ನಾಗಲಾಪುರ ಬಸವರಾಜಪ್ಪ, ಕಾಂಗ್ರೆಸ್ ಮುಖಂಡ ಬಿ ಮುತ್ಯಾಲಯ್ಯ ಶೆಟ್ಟಿ, ರಾಷ್ಟ್ರೀಯ ಸಾಕ್ಷರತಾ ಪ್ರಾದಿಕಾರ ಸದಸ್ಯ ಸಮಾಜ ಸುಧಾರಕ ಅಬ್ದುಲ್ ನಬಿ, ಶಿಕ್ಷಣ ಪ್ರೇಮಿ ಸಮಾಜಮುಖಿ ಚಿಂತಕರು ಸೈಯದ್ ಮೋಹಿದ್ದೀನ್ ಖಾದ್ರಿ, ನಗರಸಭಾ ಸದಸ್ಯರಾದ ಹೆಚ್ ಗಣೇಶ್, ಬಿ ಎಂ ಅಪ್ಪಾಜಿ ನಾಯಕ, ಹಾಜಿ ಬಿ ಮೆಹಮುದ್ ಕಾರ್ಯಕ್ರಮ ನಿರೂಪಣೆಯನ್ನು ಉಪನ್ಯಾಸಕ ಪಂಪಾಪತಿ ಅವರು ನೀಡಿದರು ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು ನೋಡುಗರ ಗಮನ ಸೆಳೆಯಿತು ವಿವಿಧ ಶಾಲಾ ಮಕ್ಕಳಿಂದ ಸ್ಪರ್ಧಿಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ಬಹುಮಾನ ನೆನಪಿನ ಕಾಣಿಕೆ ನೀಡಲಾಯಿತು ಸಾಮಾಜಿಕ ಕಾರ್ಯಕರ್ತ ದೇಶಪ್ರೇಮಿ ಎ ಅಬ್ದುಲ್ ನಬಿ ಅವರು ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಶಾಲಾ ಮಕ್ಕಳಿಗೆ ಸಾರ್ವಜನಿಕರಿಗೆ ತ್ರಿವರ್ಣ ರಾಷ್ಟ್ರಧ್ವಜಗಳನ್ನು ವಿತರಿಸಿ ದೇಶಪ್ರೇಮ ಮೆರೆದರು .

Leave a Reply

Your email address will not be published. Required fields are marked *

error: Content is protected !!