IMG_20240505_132911

ಸಮಬಾಳು ಸಮಪಾಲು ಎಸ್ ಯು ಸಿ ಐ ಪಕ್ಷದ ಅಂತಿಮ ಗುರಿ : ಶರಣು ಗಡ್ಡಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 5- ಲೋಕಸಭಾ ಕ್ಷೇತ್ರದಲ್ಲಿ ಎಲ್ಲಾ ಎಂಟು ಕ್ಷೇತ್ರದ ಜನರ ಭೇಟಿ ಮಾಡಿದಾಗ ಒಳ್ಳೆಯ ಸ್ಪಂದನೆ ಸಿಕ್ಕಿರುವುದು ಖುಷಿ ತಂದಿದೆ. ಆದರೆ ನೋವಿನ ವಿಷಯವೇನೆಂದರೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಜನರ ಬವಣೆಗಳು, ಕಾರ್ಮಿಕರು ರೈತರ ಸಂಕಷ್ಟಗಳು, ಯುವ ಜನರಿಗೆ ಉದ್ಯೋಗ,ಎಲ್ಲಾ ಮಕ್ಕಳಿಗೆ ಶಿಕ್ಷಣದ ಸೌಲಭ್ಯ ಜೊತೆ ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಮತ್ತು , ನಗರದ ಬಡಾವಣೆಗಳಲ್ಲಿ ರಸ್ತೆ, ಶುದ್ಧ ಕುಡಿಯುವ ನೀರು,ಸ್ವಚ್ಛತೆ ನೈರ್ಮಲ್ಯ ಚರಂಡಿ ಹಾಗೂ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು, ಔಷಧಿ ಕೊರತೆ ಎದ್ದು ಕಾಣುತ್ತಿದೆ ಎಂದು ಅಭ್ಯರ್ಥಿ ಶರಣು ಗಡ್ದಿ ಹೇಳಿದರು.

ಅಧಿಕಾರಕ್ಕೆ ಬಂದ ಕಾಂಗ್ರೆಸ್,ಬಿ ಜೆ ಪಿ ಯ ನಾಯಕರು ತಮ್ಮ ವೈಯಕ್ತಿಕ ಅಭಿವೃದ್ಧಿ ಮಾಡಿಕೊಂಡು ಜನಸಾಮಾನ್ಯರ ಆಶೋತ್ತರಗಳನ್ನು ಸುಳ್ಳು ಮಾಡಿದ್ದಾರೆ. ಮತ್ತೆ ಅಧಿಕಾರಕ್ಕೆ ಬರಲು ಚುನಾವಣಾ ಬಾಂಡ್ ಹೆಸರಲ್ಲಿ ಉದ್ಯಮಿಗಳಿಂದ ದೇಣಿಗೆ ಪಡೆದು ಜನಸಾಮಾನ್ಯರಿಗೆ ಆಮಿಷಗಳನ್ನು ಕೆಳಮಟ್ಟದ ರಾಜಕೀಯ ಮಾಡುತ್ತಿರುವ ಈ ಬಂಡವಾಳಶಾಹಿ ಪಕ್ಷಗಳನ್ನು ಸೋಲಿಸಬೇಕು.

ಈ ಚುನಾವಣೆಯಲ್ಲಿ ಜನಸಾಮಾನ್ಯರ ಚರ್ಚೆ ಮಾಡದೆ ಕೇವಲ ಕಾಂಗ್ರೆಸ್ ಬಿಜೆಪಿ ಒಬ್ಬರು ಇನ್ನೊಬ್ಬರನ್ನು ಟೀಕೆ ಮಾಡುತ್ತಾರೆ ದುಡಿಯುವ ವರ್ಗದ ಜನಗಳಿಗೆ ಮೋಸ ಮಾಡಿದ್ದಾರೆ.

ಆದರೆ ಎಸ್ ಯು ಸಿ ಐ ಕಮ್ಯುನಿಸ್ಟ್ ನಮ್ಮ ಪಕ್ಷ ಕೊಪ್ಪಳ ಲೋಕಸಭಾ ಕ್ಷೇತ್ರದ ಸಮಸ್ಯೆಗಳನ್ನು ಈ ಸಂದರ್ಭದಲ್ಲಿ ಜನರನ್ನು ಭೇಟಿ ಮಾಡಿದಾಗ ಹತ್ತಿರದಿಂದ ಜನರ ಹತ್ತಿರ ಚರ್ಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ನಾಯಕರದ ಕೃಷ್ಣ ಬೆಂಗಳೂರು ಸದಸ್ಯರಾದ ಶರಣು ಪಾಟೀಲ್ ಗಂಗರಾಜ, ಶಾರದಾ, ಮಲ್ಲಪ್ಪ, ಮೌನೇಶ್ ಬಡಿಗೇರ್ ಇನ್ನು ಅನೇಕರು ಇದ್ದರು.

Leave a Reply

Your email address will not be published. Required fields are marked *

error: Content is protected !!