
ಸಮಾಜದಲ್ಲಿ ಪ್ರತಿಯೊಬ್ಬರು ಕುಲಮತ ಭೇದಗಳನ್ನು ಮರೆತು ಕಲತು ಜೀವನ ಸಾಗಿಸಬೇಕು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,30- ಸಮಾಜದಲ್ಲಿ ಪ್ರತಿಯೊಬ್ಬರು ಕುಲಮತ ಭೇದಗಳನ್ನು ಮರೆತು ಕಲತು ಜೀವನ ಸಾಗಿಸಲು, ಲೋಹದ ಪಡುವ ಸೌಹಾರ್ದ ಪರಂಪರೆಯ ಅಭಿಯಾನದ ಅಂಗವಾಗಿ ಇಂದು ಬಳ್ಳಾರಿಯ ಗಾಂಧಿ ಭವನದಿಂದ ಹೋರಾಟ ಸೌಹಾರ್ದ ಜಾತವು ವಿವಿಧ ಸಂಘ, ಮತ್ತು ಸೇವಾ ಸಂಸ್ಥೆಗಳ ನೇತೃತ್ವದಲ್ಲಿಹಮ್ಮಿಕೊಳ್ಳಲಾಗಿತ್ತು.
ಈ ಜಾತವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಸೌಹಾರ್ಧತ ಮಾನವ ಸೇರ್ಪಡೆ ಎಲ್ಲೋ ನಿರ್ಮಿಸಲಾಯಿತು. ನಂತರ ಮೋತಿ ವೃತ್ತದಲ್ಲಿರುವ ಬಸವೇಶ್ವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಜಾತಾವನ್ನು ಮುಂದುವರಿಸಲಾಯಿತು.
ಈ ಸಂದರ್ಭದಲ್ಲಿ ಕ್ರಿಶ್ಚಿಯನ್ ಷಾ ದ್ರಿಗಳಾದ, ಐವನ್ ಪಿಂಟು ಮಾತನಾಡಿ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುವ ಮತ್ತು ಭಾವೈಕ್ಯತೆ ಸಾರುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು. ನಂತರ ಭಾಷಣೆಯನ್ನು ಮುಂದುವರಿಸಿದ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಷ್ಟಿ ರುದ್ರಪ್ಪ ಮಾತನಾಡಿ ದೇಶದಲ್ಲಿ ಶಾಂತಿ ನಿಲ್ಲಿಸಲು ಸೌಹಾರ್ದತೆ ಮತ್ತು ಸಹಬಾಳ್ವೆ ಅಗತ್ಯವೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಾಮ್ರೆಡ್ ಸತ್ಯ ಬಾಬು, ಸಾಹಿತಿ ಎಚ್ಡಿ ವೆಂಕಟಮ್ಮ ಪಿಆರ್ ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ವೆಂಕಟೇಶ್ ಹೆಗಡೆ, ಕೆ ಕೋಟೇಶ್ವರ ರಾವ್, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಅಧ್ಯಕ್ಷರು ಸಂಗನಕಲ್ಲು ಕೃಷ್ಣಪ್ಪ, ವಿಎಸ್ ಶಿವಶಂಕರ್, ನ್ಯಾಯವಾದಿಗಳು ಬಾದಾಮಿ ಶಿವಲಿಂಗ, ಗ್ರಾಮೀಣ ಬ್ಯಾಂಕ್, ಗಂಗಪ್ಪ ಪತ್ತಾರ್ ಜ್ಯೋತಿಗೆ ಹಲವಾರು ಮಂದಿ ಪಾಲ್ಗೊಂಡಿದ್ದರು.