
ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ : ಲಲಿತಾ ಗಂಗಾಧರ್ ಕಬ್ಬೇರ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ : ಸಮಾಜಮುಖಿ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುವುದಾಗಿ2024-25 ಸಾಲಿನ ನೂತನ ಅಧ್ಯಕ್ಷೆ ಶ್ರೀಮತಿ ಲಲಿತಾ ಗಂಗಾಧರ್ ಕಬ್ಬೇರ್ ಹೇಳಿದರು.
ಅವರು ಭಾಗ್ಯನರಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಇನ್ನರ್ ವೀಲ್ ಕ್ಲಬ್ ಭಾಗ್ಯನಗರ ವತಿಯಿಂದ ಅಭಿನಂದನಾ ಕಾರ್ಯಕ್ರಮ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಮಹಿಳೆಯರು ಸಮಾಜಮುಖಿ ಕಾರ್ಯ ಮಾಡಿದಾಗ ಅದು ಇನ್ನೊಬ್ಬರಿಗೆ ಮಾದರಿಯಾಗುತ್ತದೆ ಎಲ್ಲರೂ ಕೂಡಿ ಸಮಾಜಮುಖಿ ಕಾರ್ಯಗಳನ್ನು ಮಾಡೋಣ ಎಂದರು.
ಕಾರ್ಯಕ್ರಮವನ್ನು ಡಾ.ಪಾರ್ವತಿ ಪಲೋಟಿ ಜಿಲ್ಲಾ ಖಜಾಂಚಿ ಉದ್ಘಾಟಿಸಿ ಮಹಿಳೆಯರು ಸಮಾಜದ ಜೊತೆ ಬೆರೆತು ಸಮಾಪರ ಕೆಲಸ ಮಾಡುವ ಮೂಲಕ ಮತ್ತು ಮಹಿಳೆಯರಲ್ಲಿರುವ ಕೌಶಲ್ಯವನ್ನು ಹೊರ ಹಾಕಲು ಹಾಗೂ ಪ್ರೀತಿ-ಸ್ನೇಹವನ್ನು ಹಂಚಲು ಬೆಳೆಸಲು ಸಂಘಟನಾ ಮನೋಭಾವ ಇಂತಹ ವೇದಿಕೆಗಳು ಅವಶ್ಯಕವಾಗಿವೆ. ಇದೇ ವೇಳೆ ಸಮಾಜ ಸೇವಕರು ಹಾಗೂ ಇನ್ನರ್ ವೀಲ್ ಭಾಗ್ಯನಗರದ – 2023-24 ಶ್ರೀಮತಿ ಶಾರದಾ ಪಾನಘಂಟಿ ಮಾತನಾಡಿ ಮಹಿಳೆಯರು ಅಡುಗೆ ಮನೆಗೆ ಅಷ್ಟೇ ಸೀಮಿತರಾಗದೆ ತಮಲ್ಲಿರುವ ಪ್ರತಿಭೆಯ ಮೂಲಕ ಸಮಾಜಕ್ಕೆ ಪರಿಚಯವಾಗಲು ಈ ಇನ್ನರ್ ವೀಲ್ ಕ್ಲಬ್ ಉತ್ತಮ ವೇದಿಕೆಯನ್ನುಕಲ್ಪಿಸಿದೆ. ನಮ್ಮ ಅಧಿಕಾರಾವಧಿಯಲ್ಲಿ ಶಿಕ್ಷಣ ಸ್ವಚ್ಚತೆ ಆರೋಗ್ಯ ಅರಿವು ಮತ್ತು ಸಮಾಜಪರ ಕಾಳಜಿ ಕೆಲಸ ಹೀಗೆ ಇನ್ನೂ ಅನೇಕ ಸಮಾಜಪರ ಕೆಲಸ ಮಾಡಿದ್ದು, ನನಗೆ ತೃಪ್ತಿ ತಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಮೂವರು ವೈದ್ಯರಾದ ಡಾ.ಜಗನ್ನಾಥ್ ಜೋಶಿ ಎಲುಬು-ಕೀಲು ತಜ್ಞರು, ಡಾ.ಚಂದ್ರಶೇಖರ್ ದಂತ ವೈದ್ಯರು,ಡಾ.ಶಂಕರ್ ಪಾಟೀಲ್ ಹಾಗೂ ತಮಗೆ ಸಹಕಾರ ನೀಡಿದ ಸಮಾಜಮುಖಿ ವ್ಯಕ್ತಿಗಳಿಗೆ ಸನ್ಮಾನಿಸಿ ಗೌರವಿಸಿದರು .
ಇದೇ ವೇಳೆ ಸುವರ್ಣ ಗಂಟಿಯವರು ಇನ್ನರ್ ವೀಲ್ ಕ್ಲಬ್ 2023-24 ನೇ ಸಾಲಿನ ವಾರ್ಷಿಕ ವರದಿಯನ್ನು ಒಪ್ಪಿಸಿದರು.
ಕ್ಲಬ್ ನ ನೂತನ ಕಾರ್ಯದರ್ಶಿಯಾಗಿ ಸಂಗೀತಾ ಕಬಾಡಿ, ಖಜಾಂಚಿಯಾಗಿ ಪದ್ಮಾವತಿ ಕಂಬಳಿ ಅಧಿಕಾರ ವಹಿಸಿಕೊಂಡರು. ಕಾರ್ಯಕ್ರಮದಲ್ಲಿ ಜ್ಯೋತಿ ಗೊಂಡಬಾಳ, ರೂಪಾ ಪವಾರ, ಜಯಮಾಲ ಶೇಡ್ಮಿ, ಶಾಂತಾ ಗೌರಿಮಠ, ರಮಾ ಅಂಟಾಳಮರದ.ಲಕ್ಷ್ಮೀ ಪಾನಘಂಟಿ, ಸುನಿತಾ ಅಂಟಾಳಮರದ, ವಿದ್ಯಾಲಕ್ಷ್ಮೀ ಹಾಗೂ ಮತ್ತೀತರರು ಉಪಸ್ಥಿತರಿದ್ದರು.