
ಸಮಾಜ ವೃದ್ದರನ್ನು ಕಡೆಗಣಿಸಬಾರದು
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಜ್ಜನ
ಕರುನಾಡ ಬೆಳಗು ಸುದ್ದಿ
ಕೊಪ್ವಳ, -ನಿಮ್ಮೊಂದಿಗೆ ಸದಾ ನಾವಿರುತ್ತೇವೆ ಅದೈರ್ಯಗೊಳ್ಳಬೇಡಿ ಸಮಾಜ ವೃದ್ದರನ್ನು ಕಡೆಗಣಿಸಬಾರದು ಎಂದು ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಬಿ. ವಿ. ಸಜ್ಜನ ಹೇಳಿದರು .
ಅವರು ವಕೀಲರ ದಿನಾಚರಣೆಯ ಅಂಗವಾಗಿ ಇಲಕಲ್ಲಗಡದ ಮೈತ್ರಿ ವೃದ್ದಾಶ್ರಮದಲ್ಲಿ ಸಿಹಿ ಊಟ ವಿತರಿಸಿ ಹಿರಿಯ ವೃದ್ಧರೊಂದಿಗೆ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ವಕೀಲರಾದ ಹನುಮಂತ ರಾವ್ ಕೆಂಪಳ್ಳಿ ಅವರು ಮಾತನಾಡಿ ಪಿತೃ ದೇವೋಭವ, ಮಾತೃ ದೇವೋಭವ ಎಂಬ ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದೆ ವಯಸ್ಸಾದ ಹಿರಿಯರ ನಿರ್ಲಕ್ಷ ಸಲ್ಲದು, ಎಲ್ಲರೂ ಪ್ರೀತಿ ಇಂದ ಇದ್ದಾಗ ಮನೆಯಲ್ಲಿ ಸಂಭ್ರಮವಿರುತ್ತದೆ, ನಿಮ್ಮೊಂದಿಗೆ ಈ ದಿನಾಚರಣೆಯು ಅರ್ಥ ಪೂರ್ಣವಾಗಿದೆ ಎಂದು ಹೇಳಿದರು
ಇನ್ನೊರ್ವ ಅತಿಥಿಗಳಾದ ವಕೀಲರು ಹಾಗೂ ಕರುನಾಡ ಪರಿಸರ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಬಾಳಪ್ಪ ಎಸ್ ವೀರಾಪುರ ಅವರು ಮಾತನಾಡಿ ಎಲ್ಲರಿಗೂ ಒಂದು ದಿನ ವಾಸ್ಸಾಗಲೇ ಬೇಕು ವಯಸ್ಸಾದ ಹಿರಿಯರನ್ನು ಗೌರವದಿಂದ ಕಂಡು ಪ್ರೀತಿ ಬಿತ್ತಿ ಪ್ರೀತಿ ಬೆಳೆಸಿ ಪೊಸಿಸಿಸದರೆ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಕೀಲರಾದ ಅಮರೇಶ್ ಕುರಿ, ಬಸವರಾಜ್ ಮೇಲಸಕ್ರಿ ಸೇರಿದಂತ ಅನೇಕರು ಇದ್ದರು.