
ಸಮೀಕ್ಷೆ ಯಲ್ಲಿ ಕಡ್ಡಾಯವಾಗಿ ಮಾದಿಗ ಎಂದು ಬರೆಯಿಸಿ
ಕ್ರಾಂತಿಕಾರಿ ರಥ ಯಾತ್ರೆ ಮೂಲಕ ಜಾಗೃತಿ
ಕರುನಾಡ ಬೆಳಗು ಸುದ್ದಿ
ಕುಕನೂರ 13 – ಪಟ್ಟಣದ ಅಂಬೇಡ್ಕರ್ ಕಾಲೋನಿಯ 8 ನೇ ವಾರ್ಡಿನ ಶ್ರೀ ಗಾಳೆಮ್ಮ ದೇವಿ ದೇವಸ್ಥಾನದ ಮುಂಬಾಗದಲ್ಲಿ ಜಾತಿ ಸಮೀಕ್ಷೆ ಯಲ್ಲಿ ಕಡ್ಡಾಯವಾಗಿ ಜಾತಿ ಕಾಲಂ ನಲ್ಲಿ ಮಾದಿಗ ಎಂದು ಬರೆಯಿಸುವಂತೆ ಭಾಸ್ಕರ್ ಪ್ರಸಾದ್ ಅವರ ತಂಡದ ವತಿಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ರಾಜ್ಯದ 22 ಜಿಲ್ಲೆಗಳಲ್ಲಿ ಸುತ್ತಾಡಿ ಪ್ರತಿಯೊಂದು ಕೇರಿಗಳಲ್ಲಿ ಕ್ರಾಂತಿ ಕಾರೀ ರಥ ಯಾತ್ರೆ ತಂಡ ಜಾಗೃತಿ ಮೂಡಿಸುತ್ತಿದೆ. ರವಿವಾರ ಸಾಯಂಕಾಲ ಪಟ್ಟಣಕ್ಕೆ ಆಗಮಿಸಿದ ಕ್ರಾಂತಿ ಕಾರಿ ರಥ ಯಾತ್ರೆ ತಂಡವನ್ನು ಮಾದಿಗ ಸಮಾಜದ ಮುಖಂಡರು ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ವೃತ್ತದವರೆಗೆ ಬೈಕ್ ರಾಲಿ ಮೂಲಕ ಸ್ವಾಗತಿಸಿದರು.
ನಂತರ ಶಿಕ್ಷಕರಾದ ನಾಗರಾಜ ಪೂಜಾರ ಮಾತನಾಡಿ ಸಮೀಕ್ಷೆಗೆ ಬರುವ ಗಣಿತಿದಾರರಿಗೆ ಸ ವಿವಾರವಾಗಿ ಮಾಹಿತಿ ಯನ್ನು ಹೇಗೆ ನೀಡಬೇಕು. ಕಾಲಂ 61 ರಲ್ಲಿ ಕಡ್ಡಾಯವಾಗಿ ಮಾದಿಗ ಎಂದೇ ಬರೆಯಿಸಿ ಬೇಕು, ಯಾವ ಯಾವ ಮಾಹಿತಿಯನ್ನು ನೀಡಬೇಕು ಎಂಬ ವಿವರಣೆ ನೀಡಿದರು. ಕ್ರಾಂತಿಕಾರಿಗಳ ತಂಡದಿಂದ ಕ್ರಾಂತಿ ಕಾರೀ ಗೀತೆಗಳನ್ನು ಹಾಡುವ ಮೂಲಕ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಪ್ಪ ಭಂಡಾರಿ, ಯಮನೂರಪ್ಪ ಗೋರ್ಲೆಕೊಪ್ಪ, ಪರುಶುರಾಮ ಸಕ್ರಣ್ಣವರ , ಚಂದ್ರಪ್ಪ ಆರುಬೆರಳಿನ, ವೆಂಕಟೇಶ್ ಬಳ್ಳಾರಿ, ಪ್ರಶಾಂತ ಆರುಬೆರಳಿನ , ಮಲಿಯಪ್ಪ ಅಣ್ಣಿಗೇರಿ,ನಿಂಗಪ್ಪ ಗೋರ್ಲೆಕೊಪ್ಪ ನಿಂಗರಾಜ ಅಣ್ಣಿಗೇರಿ, ಹನುಮಂತ, ನಾಗರಾಜ, ದೊಡ್ದ ಈರಪ್ಪ, ಲಕ್ಷ್ಮಣ ಬಾರಿಗಿಡದ, ಮಾರುತಿ ಭಂಡಾರಿ, ಭೀಮಣ್ಣ ಗುಡದಳ್ಳಿ , ಮಂಜುನಾಥ ಪ್ರಸಾದ್, ಶರಣಪ್ಪ ಮಾಲಗಿತ್ತಿ, ಸಿದ್ದು ದೊಡ್ಡಮನಿ, ಚಂದ್ರಕಾಂತ್ ಗುಡಿಮನಿ, ಶಂಕರ ಭಂಡಾರಿ ,ಸಂಜೀವ ಬೂದಗುಂಪಾ, ಸೇರಿದಂತೆ ಮಹಿಳೆಯರು ಯುವಕರು ಇದ್ದರು.