
ಕೆಡಿಪಿ ಸಮಿತಿಯಲ್ಲೂಅನ್ಸಾರಿ ಬಣ ಮೇಲುಗೈ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 4- ರಾಜ್ಯ ಸರಕಾರದ ಯೋಜನೆಗಳು ಮಾಹಿತಿ ನೀಡಲು ಸಭೆಗಳಲ್ಲಿ ಚರ್ಚಿಸಲು ಕೆಡಿಪಿ ನೂತನ ಸದಸ್ಯರುಗಳು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಅಮರೇಶ ಗೊನಾಳ ಹೇಳಿದರು.
ನಗರದ ತಾಲೂಕ ಪಂಚಾಯತ ಕಾರ್ಯಾಲಯದ ಆವರಣದಲ್ಲಿ ನೂತನವಾಗಿ ಕೆಡಿಪಿ ಸದಸ್ಯರಗಳಿಗೆ ಗೌರವಿಸಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರವರು ಈಗಾಗಲೇ ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜತಂಗಡಗಿಯವರು ಜಿಲ್ಲೇಯ ಸರ್ವೋತುಮುಖ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಮಾಜಿ ಸಚಿವ ಇಕ್ಬಾಲ ಅನ್ಸಾರಿಯವರು ಸರಕಾರದ ಯೋಜನೆಗಳು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲು ನೂತನ ಸದಸ್ಯರುಗಳನ್ನು ಸಚಿವ ಶಿವರಾಜ ತಂಗಡಗಿಯವರೊಂದಿಗೆ ಸೇರಿ ನೇಮಕ ಗೋಳಿಸಿದ್ದಾರೆ ಎಂದರು.
ನಗರಸಭೆ ಮಾಜಿ ಸದಸ್ಯ ದಲಿತ ಸಂಘಟನೆಯ ಮುಖಂಡ ಹುಸೇನಪ್ಪ ಹಂಚಿನಾಳ ಮಾತನಾಡಿದರು.
ಕೆಡಿಪಿ ನೂತನ ಸಮಿತಿ ಸದಸ್ಯರು ಮಾಜಿ ಸಚಿವ ಇಕ್ಬಾಲ ಅನ್ಸಾರಿಯವರ ಬಣದವರೇ ಆಗಿದ್ದಾರೆ. ಸರಕಾರದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ತಾಲೂಕ ಸಮಿತಿ ಅಧ್ಯಕ್ಷರಾದಿಯಾಗಿ ಎಲ್ಲಾ ಸದಸ್ಯರುಗಳು ಅನ್ಸಾರಿ ಬಣದವರಾಗಿದ್ದಾರೆ.
ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಸಮಿತಿಯ ಉಮೇಶ ಅಯ್ಯಣ್ಣ ಹೇರೂರ, ನಾಗಣ್ಣಗೌಡ ಆಚಾರ ನರಸಾಪೂರ, ರಫಿಕ್ ಸಂಪಗಿ ಗಂಗಾವತಿ, ವೆಂಕಟೇಶ ಮಲಕನ ಮರಡಿ, ಗೌಸಿಯಾ ಬೆಗಂ ಸನ್ನಿಕ್ ಗಂಗಾವತಿ ಮುಂತಾದವರು ಉಪಸ್ಥಿತರಿದ್ದರು.