
ನೌಕರರ ಕ್ರೀಡಾಕೂಟ ಸಾಂಸ್ಕೃತಿಕ ಸ್ಪರ್ಧೆಗೆ ಸಿಇಓ ರಾಹುಲ್ ಉದ್ಘಾಟನೆ
ಸರಕಾರಿ ನೌಕರರಿಗೆ ಕ್ರೀಡೆ ಮುಖ್ಯ
ರಾಹುಲ್ ರತ್ನಂ ಪಾಂಡೆಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 06- ಸರಕಾರಿ ನೌಕರರು ನಿತ್ಯ ಒತ್ತಡದ ಜೀವನ ನಡೆಸುತ್ತಿದ್ದು ಪ್ರತಿದಿನ ವೈಯಕ್ತಿಕ ಬದುಕಿಗಾಗಿ ಪ್ರತಿದಿನ ಕ್ರೀಡೆಯಲ್ಲಿ ತೊಡಗಿಸಿಕೋಳ್ಳಿ ಕ್ರೀಡಾಕೂಟದಲ್ಲಿ , ಪರಸ್ಪರರೊಂದಿಗೆ ಸ್ನೇಹ ಹಾಗೂ ಉತ್ತಮ ಸಂಬಂಧ ಬೆಳೆಸಿ ಕೋಳ್ಳಿ ಎಂದು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಹೇಳಿದರು.
ಅವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದರು.
ನೌಕರರು ಆಸಕ್ತಿಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ನಿರ್ಣಾಯಕರ ನಿರ್ಣಯವೇ ಅಂತಿಮ ಆಗಿದ್ದು, ಯಾರೊಬ್ಬರು ಜಗಳವಾಡದೇ ಪ್ರೀತಿ ಮತ್ತು ಸಂತೋಷದಿಂದ ಭಾಗವಹಿಸಬೇಕು. ಪ್ರತಿವರ್ಷ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಕ್ರೀಡಾಕೂಟ ಆಯೋಜನೆ ಮಾಡಿ.
ಆಗ ಬಿಸಿಲು ಕಡಿಮೆ ಇರುತ್ತದೆ. ಈ ಹಿನ್ನಲೆ ಹೆಚ್ಚು ಜನ ಭಾಗವಹಿಸುತ್ತಿದ್ದರು. ಕ್ರೀಡಾಕೂಟಕ್ಕೆ ಮ ಮುಂದಿನ ವರ್ಷ ೫ ಲಕ್ಷ ರೂ. ನೀಡುತ್ತೇವೆ. ಎಷ್ಟೇ ಹಣವಿದ್ದರೂ ಕೂಡಾ ಆರೋಗ್ಯ ಸರಿ ಇಲ್ಲದಿದ್ದರೇ ಯಾವುದನ್ನು ಅನುಭವಿಸಲಾಗುವುದಿಲ್ಲ. ಹಾಗಾಗಿ ಆರೋಗ್ಯವೇ ಭಾಗ್ಯವಾಗಿದ್ದು, ಉತ್ತಮವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ನಾಗರಾಜ್ ಜುಮ್ಮಣ್ಣನವರ ಪ್ರಾಸ್ತಾವಿಕ ಮಾತನಾಡಿ, ಕಳೆದ ೧೨ ವರ್ಷದಿಂದ ಜಿಲ್ಲಾಧ್ಯಕ್ಷನಾಗಿ ಅರ್ಥಪೂರ್ಣವಾಗಿ ಕ್ರೀಡಾಕೂಡ ಆಯೋಜಿಸುತ್ತಿದ್ದೇನೆ. ಆರೋಗ್ಯ ಇಲಾಖೆಯ ಪಲ್ಸ್ ಪೋಲಿಯೋ, ಪಿಯುಸಿ ಪರೀಕ್ಷೆ, ಸ್ವೀಪ್ ಹಾಗೂ ಆರ್ಥಿಕ ವರ್ಷದ ಕೊನೆಯ ತಿಂಗಳಾಗಿದ್ದು, ಹೆಚ್ಚು ಜನರು ಭಾಗವಹಿಸಲು ಸಾಧ್ಯವಾಗಿಲ್ಲ. ಒತ್ತಡದಿಂದ ಹೊರಬರಲು ಕ್ರೀಡಾಕೂಟ ಆಯೋಜಿಸಿ, ಎರಡು ದಿನ ಸರ್ಕಾರ ಅವಕಾಶ ನೀಡಿದೆ. ಕ್ರೀಡಾಕೂಟದಲ್ಲಿ ಜಿಲ್ಲಾ ನೌಕರರು ಅಭೂತ ಪೂರ್ವ ಸಾಧನೆ ಮಾಡಿದ್ದು ಜಿಲ್ಲೆಗೆ ಹೆಮ್ಮಯ ವಿಷಯ ಎಂದರು.
ಗ್ರಾಮೀಣ ಕ್ರೀಡೆ ಕಬ್ಬಡ್ಡಿಯಲ್ಲಿ ಜಿಲ್ಲೆಯ ನೌಕರರು ರಾಜ್ಯಮಟ್ಟದಲ್ಲಿ ವಿಜೇತರಾಗಿ, ೨೦೨೩ರಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಿಂದೂಸ್ಥಾನಿ ಸಂಗೀತ ಸ್ಪರ್ಧೆಯಲ್ಲೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ನಿರಂತರ ಶ್ರಮದಿಂದ ಕನಸು ನನಸಾಗಿದೆ. ಕ್ರೀಡಾಕೂಟವು ಯಾವ ಒಲಂಪಿಕ್ ಗೂ ಕಡಿಮೆ ಇಲ್ಲ. ಸಾಂಸ್ಕೃತಿಕ ಕಾರ್ಯಕ್ರಮದಿಂದ ಸಂಸ್ಕೃತಿ, ಕಲೆ ಬಿಂಬಿಸುವ ಕಾರ್ಯ ಮಾಡುತ್ತಿದ್ದು, ೨೦೦ ಜನ ಭಾಗವಹಿಸುತ್ತಿದ್ದಾರೆ.
ಈ ಕ್ರೀಡಾ ಕೂಟಕ್ಕೆ ಜಿಲ್ಲಾ ಪಂಚಾಯಿತಿಯಿಂದ ೩.೫೦ ಲಕ್ಷ ರೂ. ಅನುದಾನ ನೀಡಿದ್ದು, ಸಮವಸ್ತ್ರದೊಂದಿಗೆ ಕ್ರೀಡೆಯಾಡಲು ಮುಂದಿನ ವರ್ಷ ೫ ಲಕ್ಷ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು. ಜನಸಾಮಾನ್ಯರ ಸೇವೆ ಜೋತೆಗೆ ಕ್ರೀಡೆ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಲ್ಯಾಣ ಕರ್ನಾಟಕದ ಭಾಗದಲ್ಲಿ ಶೇ. ೩೫ರಷ್ಟು ಹುದ್ದೆಗಳು ಖಾಲಿ ಇದ್ದು, ಇವರ ಭಾರ ಹೊತ್ತು ಕೆಲಸ ಮಾಡುತ್ತಿದ್ದಾರೆ. ಸಮ್ಮೇಳನದ ಫಲ ಎರಡ್ಮೂರು ದಿನಗಳಲ್ಲಿ ಸಿಗಲಿದೆ. ಹೋರಾಟಕ್ಕೆ ಅಣಿಯಾಗಬೇಕಿದೆ. ಅಂಗವಿಕಲರ ಕ್ರೀಡಾಕೂಟ, ದೈಹಿಕ ಶಿಕ್ಷಕರಿಗೆ ಕ್ರೀಡಾ ಕೂಟ ನಡೆಯಲಿದೆ ಎಂದರು.ಸರ್ಕಾರಿ ನೌಕರರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಬ್ಬಡ್ಡಿ ಕ್ರೀಡಾಪಟುಗಳಿಗೆ ಹಾಗೂ ಹಿಂದೂಸ್ಥಾನಿ ಸಂಗೀತ ಗಾಯಕಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ವೇದಿಕೆ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ಟಿ.ಲಿಂಗರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ್, ಆರ್.ಸಿ.ಎಚ್ ಅಧಿಕಾರಿ ಪ್ರಕಾಶ, ಅಬಕಾರಿ ಡಿವೈಎಸ್ಪಿ ಭಾರತಿ, ಸಂಘದ ಗೌರವಾಧ್ಯಕ್ಷ ಬಿ.ಜಿ.ಸುಧಾಕರ, ರಾಜ್ಯ ಪರಿಷತ್ ಸದಸ್ಯ ಗೋಪಾಲ್ ದುಬೆ, ಪ್ರಧಾನ ಕಾರ್ಯದರ್ಶಿ ಶಂಕರಗೌಡ ಮಾಲಿ ಪಾಟೀಲ್, ಖಜಾಂಚಿ ವೆಂಕಟೇಶ ಕುಲಕರ್ಣಿ, ಕಾರ್ಯಾಧ್ಯಕ್ಷ ಶಿವಪ್ಪ ಜೋಗಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಗಂಗಾವತಿಯ ಶರಣೇಗೌಡ ಪೊಲೀಸ್ ಪಾಟೀಲ್, ಯಲಬುರ್ಗಾದ ವೈ.ಜಿ.ಪಾಟೀಲ್, ಕಾರಟಗಿಯ ಸರ್ದಾರ ಅಲಿ, ಕುಕನೂರಿನ ಮಹೇಶ ಸಬರದ, ಕುಷ್ಟಗಿಯ ಬಾಲಾಜಿ ಬಳಿಗೇರ್, ಕನಕಗಿರಿಯ ವೆಂಕಟಮಧುಸೂದನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ, ಮಾರ್ತಾಂಡರಾವ್ ದೇಸಾಯಿ, ಉಪಾಧ್ಯಕ್ಷೆ ಡಾ.ಕವಿತಾ ಇದ್ದರು.