
ಸರಕಾರಿ ಶಾಲೆಯ ಮಕ್ಕಳಿಗೆ ರಾಗಿ ಮಾಲ್ಟ್ ಹೆಲ್ತ್ ಮಿಕ್ಸ : ಪ.ಪಂ. ಮುಖ್ಯಾಧಿಕಾರಿ ನಾಗೇಶ
ಕರುನಾಡ ಬೆಳಗುಇ ಸುದ್ದಿ
ಯಲಬುರ್ಗಾ,22- ಸರಕಾರದ ಆದೇಶದ ಮೇರೆಗೆ ಸರಕಾರಿ ಶಾಲೆಯ ಮಕ್ಕಳಿಗೆ ರಾಗಿ ಮಾಲ್ಟ ಹೆಲ್ತ್ ಮಿಕ್ಸ ಹಾಲಿನೊಂದಿಗೆ ಬೆರಸಿ ಕುಡಿಯುವದರಿಂದ ಮಕ್ಕಳ ಆರೋಗ್ಯ ವೈದಿಯಾಗುತ್ತದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-1 ಶಾಲೆಯಲ್ಲಿ ತಾಲೂಕು ಮಟ್ಟದ ರಾಗಿ ಮಾಲ್ಟ್ ವಿತರಣೆ ಕಾರ್ಯಕ್ರಮ ಜರುಗಿತು.
ಮಕ್ಕಳಿಗೆ ರಾಗಿ ಮಾಲ್ಟ್ ವಿತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಾಲಾ ಮಕ್ಕಳಿಗೆ ಬಿಸಿ ಹಾಲಿನೊಂದಿಗೆ ರಾಗಿ ಹೆಲ್ತ್ ಮಿಕ್ಸ್ ಬೆರೆಸಿ ರಾಗಿ ಮಾಲ್ಟ್ ವಿತರಿಸುವ ಕಾರ್ಯಕ್ರಮ ಬಹಳ ವಿಶೇಷವಾದುದು, ಎಲ್ಲಾ ಮಕ್ಕಳು ಇದನ್ನು ತಪ್ಪದೇ ಕುಡಿಯುವ ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ಉತ್ತಮ ಆರೋಗ್ಯ ಹೊಂದಬೇಕು ಎಂದರು.
ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಫ್.ಎಮ್.ಕಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರದ ಆದೇಶದನ್ವಯ ತಾಲೂಕಿನ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-10ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ಕ್ಷೀರಭಾಗ್ಯ ಯೋಜನೆಯ ಹಾಲಿನೊಂದಿಗೆ ರಾಗಿ ಪೌಡರ್ ಬೆರೆಸಿ ಮಾಲ್ಟ್ ತಯಾರಿಸಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ರಾಗಿ ಮಾಲ್ಟ್ ಕುಡಿಯುವುದರಿಂದ ಮಕ್ಕಳಿಗೆ ರಾಗಿಯಲ್ಲಿ ಸಮೃದ್ಧವಾಗಿ ದೊರೆಯುವ ಕಬ್ಬಿಣಾಂಶ, ನಾರಿನಾಂಶ ಮತ್ತು ಕ್ಯಾಲ್ಸಿಯಂ ಗಳಿಂದ ದೇಹದ ಮೂಳೆಗಳು, ಹಲ್ಲು ಗಟ್ಟಿಯಾಗುವ ಜೊತೆಗೆ ನೆನಪಿನ ಶಕ್ತಿ ವೃದ್ಧಿಸುತ್ತದೆ ಎಂದರು. ರಾಗಿ ಮಾಲ್ಟ್ ತಯಾರಿಸುವ ವಿಧಾನವನ್ನು ತಾಲೂಕಿನ ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರ ಮೂಲಕ ಅಡುಗೆದಾರರಿಗೆ ತರಬೇತಿಗೊಳಿಸಲಾಗಿದೆ.
ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷರಾದ ಅಮರೇಶ ಹುಬ್ಬಳ್ಳಿ ಮಾತನಾಡಿ ಮಕ್ಕಳಿಗೆ ರಾಗಿ ಮಾಲ್ಟ್ ವಿತರಿಸುವ ಸರ್ಕಾರದ ಕಾರ್ಯಕ್ರಮ ತುಂಬಾ ಶ್ಲಾಘನೀಯವಾದುದು ಎಂದರು.
ಪಟ್ಟಣ ಪಂಚಾಯತ ಸದಸ್ಯರಾದ ರೇವಣಪ್ಪ ಹಿರೇಕುರುಬರ ಮಾತನಾಡಿ ಮಕ್ಕಳಿಗೆ ಸಿರಿಧಾನ್ಯಗಳ ಮಹತ್ವ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಟಿ. ನಿಂಗಪ್ಪ ಅವರು ವಹಿಸಿಕೂಂಡು ನಂತರ ಮಾತನಾಡಿದ ಅವರು ಮಕ್ಕಳು ಮದ್ಯಾಹ್ನ ಉಪಹಾರ ಯೋಜನೆಯ ಬಿಸಿ ಹಾಲು, ಬಿಸಿಯೂಟ ಮತ್ತು ಪೂರಕ ಪೌಷ್ಠಿಕ ಆಹಾರಗಳನ್ನು ತಪ್ಪದೇ ಸೇವಿಸುವ ಮೂಲಕ ಉತ್ತಮ ಆರೋಗ್ಯಕ್ಕೆ ಹೊಂದಬೇಕು. ಇದರಿಂದ ಮೆದುಳಿನಲ್ಲಿ ನೆನಪಿನ ಶಕ್ತಿ ವೃದ್ಧಿಸುತ್ತದೆ ಎಂದರು. ಮಕ್ಕಳು ಉತ್ತಮ ತರಕಾರಿಗಳನ್ನು ತಟ್ಟೆಯಿಂದ ಹೊರಗೆ ಎಸೆಯದೇ ಸೇವಿಸಬೇಕು ಎಂದು ಸಲಹೆ ನೀಡಿದರು.
ಎಸ್.ವಿ.ಧರಣಾ, ಅಶೋಕ್ ಮಾಲಿಪಾಟೀಲ ಕಾಯ೯ಕ್ರಮ ಕುರಿತು ಮಾತನಾಡಿದರು.
ಈಸಂದರ್ಭದಲ್ಲಿ ವಸಂತ, ಭಾವಿಮನಿ, ಬಸವರಾಜ ಮೇಟಿ, ಬಸವರಾಜ ಮಾಸ್ತಿ, ವಿ.ಎಸ್. ಬೆಣಕಲ್, ಸೋಮಶೇಖರ ಹರ್ತಿ, ಸಿದ್ದಲಿಂಗಪ್ಪ ಶ್ಯಾಗೋಟಿ, ವೀರಭದ್ರಪ್ಪ ಅಂಗಡಿ, ರವಿ ಹಡಪದ, ಹೇಮಾವತಿ ಬಣಕಾರ, ಶಂಕ್ರಮ್ಮ, ಶಿವಪ್ಪ ಅಧಿಕಾರಿ, ಮುಖ್ಯೋಪಾಧ್ಯಾಯ ರುದ್ರಗೌಡ, ಶಿಕ್ಷಕರಾದ ಜಗದೀಶ್ ಚಂದ್ರ, ಸಂಗಮ್ಮ, ಶಾರದಾದೇವಿ, ಸುಧಾ, ರಮಜಾನಬೀ ಮತ್ತು ಮುದಿಯಪ್ಪ ಮತ್ತು ಇತರರು ಭಾಗವಹಿಸಿದ್ದರು