
ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಶಾಲಾ ವಾರ್ಷಿಕೋತ್ಸವ ಪ್ರಯುಕ್ತ ಸರಸ್ವತಿ ಪೂಜೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,24- ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಶಾಲಾ ವಾರ್ಷಿಕೋತ್ಸವ ಪ್ರಯುಕ್ತ ಸರಸ್ವತಿ ಪೂಜೆ ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಶಾಲಾ ವಿದ್ಯಾರ್ಥಿಗಳೊಡಗೂಡಿ ವಿಜಯನಗರ ಜಿಲ್ಲೆಯ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಶ್ರೀ ಕೆ ಜಿ ಅಂಜನೇಯ, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ರಮಣಪ್ಪ ಭಜಂತ್ರಿ, ಶಾಲೆಯ ಮುಖ್ಯ ಗುರುಗಳಾದ ಶ್ರೀ ಎಂ ಕುಮಾರ ಸ್ವಾಮಿ ಮತ್ತು ಎಲ್ಲಾ ಶಿಕ್ಷಕರು ಸಂಪ್ರದಾಯದಂತೆ ಸರಸ್ವತಿ ಪೂಜೆ ಕಾರ್ಯಕ್ರಮ ನೆರವೇರಿಸಿದರು.
ರಾಮಾಂಜನೇಯ ತೊಗಲು ಗೊಂಬೆ ಮೇಳ ಟ್ರಸ್ಟ್ ಬಳ್ಳಾರಿ ವತಿಯಿಂದ ತರಬೇತಿ ಪಡೆದ ಸರ್ಕಾರಿ ಆದರ್ಶ ವಿದ್ಯಾಲಯ ಮಕ್ಕಳು ಹಾಗೂ ಸಂಗೀತ ಶಿಕ್ಷಕರಾದ ಶ್ರೀ ಬೆಳಗಲ್ಲು ಹನುಮಂತ ಇವರ ಸಾರಥ್ಯದಲ್ಲಿ ಬಾಪೂಜಿ ತೊಗಲು ಗೊಂಬೆ ಆಟದ ಪ್ರದರ್ಶನವನ್ನು ನೀಡಿದರು.
ದಾಸೋಹದ ಜಿಲ್ಲಾ ಶಿಕ್ಷಣ ಅಧಿಕಾರಿ ಆಂಜನೇಯ ಕೆ ಜಿ ರವರು ಮಾತನಾಡಿ ತೊಗಲು ಗೊಂಬೆ ನಶಿಸಿ ಹೋಗುತ್ತಿರುವ ಈ ಕಲೆಗೆ ಜೀವ ತುಂಬಿದವರು ತೊಗಲು ಗೊಂಬೆ ಆಟದ ಬ್ರಹ್ಮ ನಾಡೋಜ ಬೆಳಗಲ್ಲು ವೀರಣ್ಣನವರ ಕನಸಿನಂತೆ ವಿದ್ಯಾರ್ಥಿಗಳು ಇಂತಹಾ ಕಲೆಯನ್ನು ಪರಿಚಯಸಿ ಭಾರತೀಯ ಸಂಸ್ಕೃತಿಯನ್ನು ಉಳಿಸುತ್ತಿರುವುದು ಶ್ಲಾಘನೀಯ ಎಂದರು.
ಆದರ್ಶ ವಿದ್ಯಾಲಯದ ಮಕ್ಕಳು ಮೌಲ್ಯಯುತ ಹಾಗೂ ಗುಣಮಟ್ಟದ ಶಿಕ್ಷಣ ಜೊತೆಗೆ ಆದರ್ಶಮಯ ಬದುಕನ್ನು ಕಟ್ಟಿಕೊಂಡು. ಕ್ರೀಡೆ, ಪ್ರತಿಭಾ ಕಾರಂಜಿ, ಪ್ರಾಚ್ಯ ಪ್ರಜ್ಞೆ, ರಸಪ್ರಶ್ನೆ ಕಾರ್ಯಕ್ರಮ, ವಿಜ್ಞಾನ ವಿಚಾರಗೋಷ್ಠಿ, ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕೀರ್ತಿಯನ್ನು ತರಬೇಕು ಹಾಗೂ ಪ್ರತಿ ವರ್ಷದಂತೆ ಈ ವರ್ಷವೂ ಸಹ 10ನೇ ತರಗತಿಯಲ್ಲಿ ಶೇಕಡ 100ರಷ್ಟು ಫಲಿತಾಂಶ ತರುವುದರ ಜೊತೆಗೆ 600 ಕ್ಕಿಂತ ಹೆಚ್ಚು ಅಂಕಗಳನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಂಡು ಗುಣಮಟ್ಟದ ಫಲಿತಾಂಶ ನೀಡಲು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ತಮ್ಮ ಸ್ವಂತ ಮಕ್ಕಳಕ್ಕಿಂತ ಹೆಚ್ಚಾಗಿ ನಮಗೆ ಅನ್ನ ನೀಡುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸೂಕ್ತ ಮಾರ್ಗದರ್ಶನ ವೀಡಿ ಮೌಲ್ಯಯುತ ಹಾಗೂ ಆದರ್ಶಮಯ ಜೀವನವನ್ನು ನಡೆಸಲು ಸಲಹೆ ಮಾರ್ಗದರ್ಶನ ನೀಡಲು ಶಿಕ್ಷಕರಿಗೆ ಮನವಿ ಮಾಡಿದರು.
ಮಕ್ಕಳಿಗೆ ಬರೀ ಬುದ್ಧಿವಾದ ಹೇಳಿದರೆ ಸಾಲದು ಯಾರು ಅಂತಹ ಮಾತುಗಳನ್ನ ಕೇಳುವುದಿಲ್ಲ ಆದರೆ ನಮ್ಮನ್ನು ಮಕ್ಕಳು ಅನುಸರಿಸುತ್ತಾರೆ ಎಂಬ ಅನುಭವದ ಮಾತನ್ನು ಸೂಚ್ಯವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆ ಶಿಕ್ಷಕರ ವೃಂದದವರು, ಎಸ್ ಡಿ ಎಂ ಸಿ ಸದಸ್ಯರಾದ ಮಲ್ಲಯ್ಯ, ದೊಡ್ಡಬಸಯ್ಯ ಸ್ವಾಮಿ, ಗಣೇಶ, ಶ್ರೀಮತಿ ಶಾರದಾ ವೇದಿಕೆ ಉಪಸ್ಥಿತರಿದ್ದರು.