
ಸರ್ಕಾರಿ ನೌಕರ ರಾಜ್ಯಮಟ್ಟದ ಕ್ರೀಡಾಕೂಟ
ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸುಜಾತ ವೈ
ಬಳ್ಳಾರಿ:ಅ (29)ರಂದು 2023 ನೇ ಸಾಲಿನ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಹಾಗೂ ಸಂಸ್ಕೃತಿಕ ಸ್ಪರ್ಧೆಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕ್ರೀಡಾ ಕೂಟವು ತುಮಕೂರಿನಲ್ಲಿ ಅಕ್ಟೋಬರ್ 27 ಶುಕ್ರವಾರದಿಂದ ಮೂರು ದಿನಗಳ ಭಾನುವಾರದವರಿಗೆ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವಿವಿಧ ವಿಭಾಗಗಳಲ್ಲಿ ರಾಜ್ಯದ ಸರ್ಕಾರಿ ನೌಕರರು ಕ್ರೀಡೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಅದೇ ರೀತಿಯಾಗಿ ಈ ಕ್ರೀಡಾಪಟುಗಳ ಮಹಿಳಾ ವಿಭಾಗದಲ್ಲಿ ಉತ್ತಮವಾಗಿ ತಮ್ಮ ಆಟದ ಕೌಶಲ ಪ್ರದರ್ಶನ ಮಾಡುವ ಮೂಲಕ ಗೆದ್ದು ಬೀಗಿದ ಬಳ್ಳಾರಿ ಜಿಲ್ಲೆಯ ಗ್ರಾಮಾಂತರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸ ಮೋಕ ಶಾಲೆಯ ಸುಜಾತ ವೈ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಅಭೂತಪೂರ್ವ ಗೆಲುವು ದಾಖಲಿಸುವುದರ ಮೂಲಕ ರಾಜ್ಯ ಮಟ್ಟದ ಮಹಿಳಾ ಚೆಸ್ ವಿಭಾಗದಿಂದ ವಿಜೇತರಾಗಿ ಗೋವಾದಲ್ಲಿ ನಡೆಯುವ ರಾಷ್ಟ್ರಮಟ್ಟದ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.
ಪ್ರಮುಖವಾಗಿ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದ ಚೆಸ್ ವಿಭಾಗದಲ್ಲಿ ವಿಜೇತಳಾಗಿ ಇದು ನಾಲ್ಕನೇ ಬಾರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಒಂದು ಆಶ್ಚರ್ಯಕರ ಸಂಗತಿಯಾಗಿದೆ ಮತ್ತು ಈ ವಿಭಾಗದಲ್ಲಿ ಜಿಲ್ಲೆಗೆ ಹಾಗೂ ಗ್ರಾಮಾಂತರದ ಶಿಕ್ಷಕರ ವೃಂದಕ್ಕೂ ಕೀರ್ತಿ ತಂದಿದ್ದಾರೆ.