
ಸರ್ಕಾರ ಕೆ. ತಾಂಡವನ್ನು ಕಂದಾಯ ಗ್ರಾಮವೆಂದು ಘೋಷಣೆ : ಶಂಶೇ ಆಲಂ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,27- ತಾಲೂಕು ಕೆಂಚನಗುಡ್ಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆ ತಾಂಡವನ್ನು ಸರ್ಕಾರ ಕಂದಾಯ ಗ್ರಾಮವೆಂದು ಘೋಷಿಸಿದ ಹಿನ್ನೆಲೆ ತಹಶೀಲ್ದಾರ್ ಶಂಶೇ ಆಲಂ ಮತ್ತು ಕಂದಾಯ ಅಧಿಕಾರಿಗಳ ತಂಡ ಕೆ ತಾಂಡಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ತಹಸಿಲ್ದಾರ್ ಶಂಶೇಆಲಂ ಅವರು ಮಾತನಾಡಿ ಸರ್ಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಈಗಾಗಲೇ ಮನೆ ನಿರ್ಮಿಸಿಕೊಂಡಿರುವವರ ಸರ್ವೆ ಕಾರ್ಯ ಬಹುತೇಕ ಮುಕ್ತಾಯವಾಗಿದ್ದು ಹಕ್ಕುಪತ್ರ ರಹಿತವಾಗಿ ವಾಸವಾಗಿರುವ ಇವರಿಗೆ ನಮೂನೆ 9 ಮತ್ತು 11 ಬಿ ಫಾರಂ ನೀಡುವ ಮೂಲಕ ಹಕ್ಕುಪತ್ರ ನೀಡಲಾಗುವುದು ಎಂದರು.
ಸಿರುಗುಪ್ಪ, ತೆಕ್ಕಲಕೋಟೆ ಹಾಗೂ ಕರೂರು ಹೋಬಳಿ ವ್ಯಾಪ್ತಿಯ 11 ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲಾಗಿದ್ದು ಸರ್ವೆ ನಂತರ ಖಾಸಗಿ ಜಮೀನುಗಳಲ್ಲಿ ಮನೆ ನಿರ್ಮಿಸಿ ಕೊಂಡಿದ್ದರೆ ಪಟ್ಟ ನೀಡಲಾಗುವುದು ಎಂದು ಶಂಶೇ ಆಲಂ ತಿಳಿಸಿದರು.
ಕಂದಾಯ ನಿರೀಕ್ಷಕ ಸುರೇಶ್ ಬಾಬು, ಗ್ರಾಮ ಆಡಳಿತ ಅಧಿಕಾರಿ ಗಿರೀಶ್ ಬಾಬು, ಸಾಕ್ಷರತಾ ಅಬ್ದುಲ್ ನಬಿ, ಗ್ರಾಮದ ಮುಖಂಡರಾದ ಧನಸಿಂಗ್ ನಾಯಕ್, ಸ್ವಾಮಿ ತೋಟ ನಾಯಕ್, ಕೃಷ್ಣ ನಾಯಕ್, ಹರಿನಾಥ್ ನಾಯಕ್, ಮೋತಿ ನಾಯಕ್, ವೆಂಕಟೇಶ್ ನಾಯಕ್, ಶಂಕರ್ ನಾಯಕ್ ,ಧನಸಿಂಗ್ ನಾಯಕ್ ಮತ್ತಿತರರು ಇದ್ದರು.