
ಸರ್ಕಾರ ಮಾಡದ ಕೆಲಸಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ :
ಶಾಸಕ ನೇಮಿರಾಜ್ ನಾಯ್ಕ್
ಕರುನಾಡ ಬೆಳಗು ಸುದ್ದಿ
ಮರಿಯಮ್ಮನಹಳ್ಳಿ , ೩೦- ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಸಕ ನೆಮಿರಾಜ್ ನಾಯ್ಕ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯಾವುದೇ ಸರ್ಕಾರವು ಮಾಡದಂತಹ ಸಮಾಜಮುಖಿ ಕಾರ್ಯಗಳನ್ನು ಪರಮಪೂಜ್ಯ ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದ್ದು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಲು ಕಾರಣವೇ ಡಾ. ಡಿ ವೀರೇಂದ್ರ ಹೆಗ್ಗಡೆಯವರು. ರಾಜ್ಯದ ಯಾವುದೇ ಗ್ರಾಮದಲ್ಲೂ ಕೂಡ ಧರ್ಮಸ್ಥಳ ಸಂಸ್ಥೆಯು ತನ್ನದೇ ಆದ ವಿಶೇಷ ಸ್ಥಾನ ಹೊಂದಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಗಣೇಶ್ ಬಿ ಸರ್ ಅವರು ಸದಸ್ಯರು ಸಂಘದಿಂದ ಪಡೆಯುವಂತಹ ಪ್ರಗತಿ ನಿಧಿಯನ್ನು ದುಂದು ವೆಚ್ಚಗಳಿಗೆ ಬಳಸದೆ ಉತ್ಪಾದಕ ನಿಧಿಗಳಿಗೆ ಬಳಸಿಕೊಂಡು ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು ಬದುಕಿನಲ್ಲಿ ಶಿಸ್ತನ್ನು ಕಲಿತುಕೊಳ್ಳಬೇಕು ಹಾಗೂ ತಮ್ಮ ಮಕ್ಕಳನ್ನು ಕೂಡ ಶಿಸ್ತಿನಿಂದ ಬೆಳೆಸಬೇಕು ವೈಯಕ್ತಿಕವಾಗಿ ಮಾಡುವ ಪೂಜೆ ಗಿಂತ ಸಾಮೂಹಿಕವಾಗಿ ಮಾಡುವ ಪೂಜೆಗೆ ಅತಿ ಹೆಚ್ಚು ಫಲ ಸಿಗುತ್ತದೆ, ಇಲ್ಲಿಯವರೆಗೆ ತಾಲೂಕಿನಲ್ಲಿ ವಾರಕ್ಕೆ ತಲಾ 10 ರೂ ನಂತೆ ಮಾಡಿದ ಉಳಿತಾಯ ಒಟ್ಟು ಹಣ 12 ಕೋಟಿ ಆಗಿದೆ ಇಷ್ಟು ಹಣವನ್ನು ನೀವೇ ಉಳಿತಾಯ ಮಾಡಿದ್ದೀರಿ ಶಿಸ್ತುಬದ್ಧ ವ್ಯವಹಾರವನ್ನು ರೂಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಶ್ರೀ ನಿರಂಜನ ಪ್ರಭುದೇವ ಮಹಾಸ್ವಾಮಿಗಳು ಒಪ್ಪತ್ತೇಶ್ವರ ಮಠ ನಾಗಲಾಪುರ ಇವರು ಡಾ. ವೀರೇಂದ್ರ ಹೆಗಡೆಯವರ ದೂರ ದೃಷ್ಟಿ ಕಾರ್ಯಕ್ರಮಗಳು ನಮ್ಮ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಿವೆ, ಅವರ ನಿಸ್ವಾರ್ಥಮಯ ಸೇವೆಗಳು ಎಲ್ಲರಿಗೂ ಮಾದರಿಯಾಗುವಂತಹದ್ದು ಎಂದು ಆಶೀರ್ವಚನ ನೀಡಿದರು. ಹಾಗೂ ಇದೇ ಸಂದರ್ಭದಲ್ಲಿ ವಿಕಲಚೇತನರಿಗೆ ಸಲಕರಣೆ ವಿತರಣೆ, ಆರೋಗ್ಯ ರಕ್ಷಾ ಮಂಜುರಾತಿ ಪತ್ರ, ಅನುದಾನ ಮಂಜೂರಾತಿ ಪತ್ರ ವಿತರಿಸಲಾಯಿತು.
ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ಮಾರುತಿ ಅವರು ಸ್ವಾಗತಿಸಿದರು, ತಾಲೂಕಿನ ಕೃಷಿ ಅಧಿಕಾರಿ ಶ್ರೀ ಚನ್ನಪ್ಪ ನಿರುಪಿಸಿದರು, ವಲಯದ ಮೇಲ್ವಿಚಾರಕ ಶ್ರೀ ವೆಂಕಟೇಶ್ ವಂದಿಸಿದರು,
ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ಡಾ. ಮಾತಾ ಬಿ ಮಂಜಮ್ಮ ಜೋಗತಿ, ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಶೆಟ್ಟಿ, ಶ್ರೀ ಎಚ್ ನಾಗರಾಜ್ ಉಪ ತಹಸಿಲ್ದಾರರು, ಪ್ರಮುಖಂಡರಾದ ಗುಂಡ ಸೋಮಣ್ಣ, ಮಂಜುನಾಥ್ ಹಾಗೂ ಸೇವಾ ಪ್ರತಿನಿಧಿಗಳಾದ ಮಂಜುಳಾ ಹೆಚ್ ವಿ , ಮಂಜುಳ ಎಂ, ಉಮಾ ನಾಗರತ್ನ ಜಯಲಕ್ಷ್ಮಿ ಲಕ್ಷ್ಮಿ ಹಸೀನಾ ಕವಿತಾ ಲಲಿತಾ ವಿ ಎಲ್ ವಿ ಶರಣಬಸವ ಇತರರು ಉಪಸ್ಥಿತರಿದ್ದರು.