bda7830a-4dbc-477a-b7c5-3ad1431b72a0

ಸರ್ಕಾರ ಮಾಡಬೇಕಾಗಿರುವ ಕೆಲಸಗಳನ್ನು

 ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ :‌

ನ್ಯಾಯವಾದಿ ಮಲ್ಲಿಕಾರ್ಜುನ್

ಮರಿಯಮ್ಮನಹಳ್ಳಿ ಡಿ.4 – ಹೋಬಳಿಯ ಇಂದಿರಾ ನಗರದ, ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಸಂಸ್ಥೆಯಿಂದ, ಹಾಗೂ ಸಿ ಕಾರ್ಯಕ್ಷೇತ್ರದ ಶಿವಾನಿ ಜ್ಞಾನ ವಿಕಾಸ ಕೇಂದ್ರದಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ ಟೈಲರಿಂಗ್ ತರಬೇತಿ ” ಸಮಾರೋಪ ಸಮಾರಂಭ ಶನಿವಾರ ಹಮ್ಮಿಕೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ವಕೀಲರಾದ ಲಕ್ಕಿಮರದ ಮಲ್ಲಿಕಾರ್ಜುನ ರವರು ಕಾನೂನು ಸಲಹೆಗಾರರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಕ್ರಮ ಕುರಿತು ಮಾತನಾಡಿದ ಅವರು ಧರ್ಮಸ್ಥಳ ಸಂಸ್ಥೆ ರಾಜ್ಯದ್ಯಂತ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿರುವುದನ್ನು ನಾವೆಲ್ಲ ನೋಡುತ್ತಿದ್ದೇವೆ. ಸರ್ಕಾರ ಮಾಡಬೇಕಾಗಿರುವ ಕೆಲಸಗಳನ್ನು ರಾಜ್ಯಾದ್ಯಂತ ಧರ್ಮಸ್ಥಳ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸರ್ಕಾರದ ಎಷ್ಟೋ ಮಹಿಳಾ ಕಾರ್ಯಕ್ರಮಗಳು ಅವರಿಗೆ ಮುಟ್ಟದಿರುವುದನ್ನು ನಾವು ಕಾಣ್ತಾ ಇದ್ದೇವೆ.
ಈ ಮುಂಚೆ ಸ್ವತಂತ್ರ ಪೂರ್ವದಲ್ಲಿ ಮಹಿಳೆಯರ ಸ್ಥಿತಿ ಸಾಮಾಜಿಕ, ಧಾರ್ಮಿಕ, ಆರ್ಥಿಕ,ರೂಢಿ ಸಂಪ್ರದಾಯ ಪದ್ಧತಿಗಳ ಆಧಾರದ ಮೇಲೆ ಮಹಿಳೆ ಕೇವಲ ಒಂದು ಕುಟುಂಬದ ಅಡುಗೆ ಕೊನೆಗೆ ಮಾತ್ರ ಸೀಮಿತಳಾಗಿದ್ದಳು. ಧಾರ್ಮಿಕ ಕಾರ್ಯಗಳಿಗೆ, ಶಿಕ್ಷಣ ಪಡೆಯುವ, ಸಭೆ ಸಮಾರಂಭಗಳಿಗೆ ಹೋಗುವ ಅವಕಾಶಗಳು ಇರ್ಲಿಲ್ಲ, ಅಂತ ಪರಿಸ್ಥಿತಿ ಇರುವಂತ ಸಂದರ್ಭದಲ್ಲಿ ಭಾರತ ಸಂವಿಧಾನ ಅನುಷ್ಠಾನ ಆಗುದೊಂದಿಗೆ ಮಹಿಳೆಗೆ ಎಲ್ಲಾ ರೀತಿಯ ಸಮಾನತೆಯನ್ನು ನೀಡಲಾಯಿತು.ಆದರೆ ಸರ್ಕಾರದ ಎಲ್ಲಾ ಸೌಲಭ್ಯಗಳು ಮಹಿಳೆಯರಿಗೆ ಸಂಪೂರ್ಣವಾಗಿ ಸಿಗುತ್ತಿಲ್ಲ. ಧರ್ಮಸ್ಥಳ ಸಂಸ್ಥೆಯಿಂದ ದೇವಸ್ಥಾನಗಳು ಜೀರ್ಣೋದ್ಧಾರ , ಕೆರೆ ಪುನಶ್ಚೇತನ, ಮಹಿಳೆಯರಿಗೆ ವೃತ್ತಿ ತರಬೇತಿ ಕಾರ್ಯಕ್ರಮಗನ್ನು ಹಮ್ಮಿ ಕೊಳ್ಳಲಾಗುತ್ತಿದೆ. ದೇವದಾಸಿ ಪದ್ಧತಿ ಕಾನೂನು ಪ್ರಕಾರ ನಿರ್ಮೂಲನೆಯಾಗಿದೆ ಆದರೆ ಇನ್ನೂ ಅಸ್ತಿತ್ವದಲ್ಲಿದೆ
ಮಹಿಳೆಯರು ಹೆಣ್ಣು ಮಕ್ಕಳ ಭ್ರೂಣ ಹತ್ಯೆಯನ್ನು ಮಾಡಿಸಬಾರದು ಹೆಣ್ಣು ಎಂದು ಕೊಲ್ಲದೆ ಅವರನ್ನು ಕಾಪಾಡಿ ಒಳ್ಳೆಯ ಶಿಕ್ಷಣ ಕೊಡಿಸಿ. ಕುಟುಂಬದಲ್ಲಿ ಹೆಣ್ಣು ಗಂಡು ಇಬ್ಬರನ್ನೂ ಸಮಾನವಾಗಿ ಕಾಣಬೇಕು ಎಂದರು

ಕಾನೂನು ಸಲಹೆ : ಕೌಟುಂಬಿಕ ದೌರ್ಜನ್ಯ ಕಾಯ್ದೆ 2005 ರ ಅಡಿ, ಕುಟುಂಬದಲ್ಲಿ ಗಂಡನು ತಮ್ಮನು ಯಾರಾದರೂ ಕಾನೂನು ವಿರುದ್ಧವಾಗಿ ನಿಮಗೆ ಕಿರುಕುಳ ಕೊಡುತ್ತಿದ್ದರೆ ಕಾನೂನು ಕ್ರಮಕ್ಕಾಗಿ ಪೊಲೀಸ್ ಸ್ಟೇಷನ್ ಗೆ ಭೇಟಿ ಮಾಡುವುದು, ವಿಚಾರದಲ್ಲಿ ಸಮಪಾಲು ಕೊಡದಿದ್ದರೆ ಕಾನೂನನಲ್ಲಿ ಸಮನಾಗಿ ಪಡೆದುಕೊಳ್ಳುವ ಅವಕಾಶವಿದೆ. ಇಂತಹ ಶೋಷಣೆಗಳನ್ನು ಸಮಸ್ಯೆಗಳನ್ನು ದುಃಖದಿಂದ ಯಾರಾದರೂ ಅನುಭವಿಸುತ್ತಿದ್ದರೆ ಕಾನೂನು ವ್ಯವಸ್ಥೆಯಲ್ಲಿ ಹತ್ತಿರದ ಪೊಲೀಸ್ ಸ್ಟೇಷನ್ ನ ಗಮನಕ್ಕೆ ಹಾಕುವುದರ ಜೊತೆಗೆ ವಕೀಲರನ್ನು ಭೇಟಿ ಮಾಡುವುದರ ಮುಖಾಂತರ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಧರ್ಮಸ್ಥಳ ಸೇವಾ ಸಂಸ್ಥೆಯಲ್ಲೂ ಕೂಡ ಆಪ್ತ ಸಮಾಲೋಚನೆ ವ್ಯವಸ್ಥೆ ಕೂಡ ಇದೆ ಮುಖ್ಯಸ್ಥರ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ಕಾನೂನು ಸಲಹೆ ನೀಡಿದರು.

ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಹಿಳೆಯರಿಗೆ ಸ್ವ ಉದ್ಯೋಗದಿಂದ ಹಾಗೂ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು, ಧರ್ಮಸ್ಥಳ ಸಂಸ್ಥೆಯ ಸಮಾರಂಭಗಳಿಂದ ಸೇವೆ ಸಲ್ಲಿಸುತ್ತಿದೆ. ನಮ್ಮ ಸಂಸ್ಥೆಯ ಸೇವೆಗಳನ್ನು ಸರ್ಕಾರವು ಸಹ ಪ್ರಶಂಶಿಸಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಹೆಣ್ಣು ಮಕ್ಕಳು ಧರ್ಮಸ್ಥಳ ಸಂಸ್ಥೆಯು ಆಯೋಜನೆ ಮಾಡುವ ಕಾರ್ಯಕ್ರಮಗಳನ್ನು ಅರಿತುಕೊಂಡು ಕಲಿತು ಸ್ವಯಂ ಉದ್ಯೋಗಿಗಳಾಗಬೇಕು. ಸಂಸ್ಥೆಯು ಯಾವುದೇ ರೀತಿಯ ಸಾಲವನ್ನು ನೀಡುವುದಿಲ್ಲ. ಬದಲಾಗಿ ಕೋ ಆಪರೇಟಿವ್ ಬ್ಯಾಂಕ್ ಗಳ ಜೊತೆಗೆ ಸಂಯೋಜಿಸಿಕೊಂಡು ತಮ್ಮ ಅಭಿವೃದ್ಧಿಗಾಗಿ ಸಾಲವನ್ನು ನೀಡುತ್ತಿದೆ ಇದನ್ನು ಪ್ರತಿಯೊಬ್ಬ ಸದಸ್ಯರು ಸದುಪಯೋಗಪಡಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕೆಂದು ಹೇಳಿದರು.

3 ತಿಂಗಳಿಂದ ಟೈಲರಿಂಗ್ ತರಬೇತಿ ಪಡೆದ 18 ಮಹಿಳೆಯರಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ ಎನ್ ಕೆರೆ ಗ್ರಾಮ ಪಂಚಾಯತಿ ಸದಸ್ಯ ಸೋಮಣ್ಣ ವಹಿಸಿಕೊಂಡು ಮಾತನಾಡಿದರು. ಈ ಸಂದರ್ಭದಲ್ಲಿ ನೇತ್ರಾವತಿ, ಹಾಗೂ ಜ್ಞಾನವಿಕಾಸ ಸಮನ್ವಯ ಅಧಿಕಾರಿ, ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿ, ಕೇಂದ್ರದ ಸಂಘದ ಸದಸ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!