02TVR 01

ಸರ್ ಎಂ.ವಿಶ್ವೇಶ್ವರಯ್ಯ ಶಾಲೆಯಲ್ಲಿ ಮತಯಾಚನೆ

ಕರುನಾಡ ಬೆಳಗು ಸುದ್ದಿ

ತಾವರಗೇರಾ, 2- ಪಟ್ಟಣದ ಸರ್ ಎಂ ವಿಶ್ವೇಶ್ವರಯ್ಯ ಶಾಲೆಯಲ್ಲಿ ಶುಕ್ರವಾರ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಈಶ್ಯಾನ್ಯ ಪದವಿಧರ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಧೀಕೃತ ಅಭ್ಯರ್ಥಿಯಾದ ಶ್ರೀ ಅಮರನಾಥ ಪಾಟೀಲ್ ಇವರ ಪರವಾಗಿ ಮತಯಾಚನೆ ಮಾಡಲಾಯಿತು.

ಈ ಸಂದರ್ಬದಲ್ಲಿ ಪಟ್ಟಣದ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು, ಕುಷ್ಟಗಿ ಮಂಡಲ ಬಿಜೆಪಿ ಕಾರ್ಯದರ್ಶಿ ಮಂಜುನಾಥ ಜುಲಕುಂಟಿ ಮುಖಂಡರಾದ ಸಾಗರ ಬೇರಿ, ಅರುಣಕುಮಾರ ನಾಲತ್ವಾಡ, ಪಟ್ಟಣ ಪಂಚಾಯತ ಸದಸ್ಯ ಬಸನಗೌಡ ಓಲಿ, ಬಸ್ಸಣ ವಿಠಲಾಪೂರ, ಮುಖ್ಯ ಶಿಕ್ಷಕರಾದ ದೇವೆಂದ್ರಗೌಡ ಪಾಟೀಲ್, ಶಾಲಾ ಶಿಕ್ಷಕರು, ಮತದಾರರು ಮತ್ತು ಪದಾದಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!