abe93251-24b3-471f-9348-04d04c97caa5

ಸಹಕಾರ ಬ್ಯಾಂಕ್ ಗಳಿಂದ ರೈತರಿಗೆ ಆರ್ಥಿಕ ಬಲ

: ಶಾಸಕ ಬಸವರಾಜ ರಾಯರಡ್ಡಿ

ಕರುನಾಡ ಬೆಳಗು ಸುದ್ದಿ

ಕುಕನೂರ 7-ಸಹಕಾರ ಬ್ಯಾಂಕ್ ಗಳ ಉದ್ದೇಶ ರೈತರಿಗಾಗಿ ಆರ್ಥಿಕ ಸಹಾಯ ಮಾಡುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರು ಹೇಳಿದರು.
ಅವರು ಪಟ್ಟಣದ ಎಪಿಎಂಸಿ ಆವರಣದಲ್ಲಿ ರವಿವಾರ ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ. ರಾಯಚೂರು ಕುಕುನೂರು ಶಾಖೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು ಕುಕುನೂರು ಶಾಖೆಯ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಸಿಎಂ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ಸಹಕಾರಿ ಬ್ಯಾಂಕುಗಳ ಉದ್ದೇಶ ರೈತರಿಗಾಗಿ ಹಾರ್ದಿಕ ಸಹಾಯ ಮಾಡುವುದು ಎಂದರು.

ಸಹಕಾರ ಬ್ಯಾಂಕುಗಳು ಬೆಳೆಯಬೇಕಾದರೆ ಸಹಕಾರ ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಂಡ ಪ್ರತಿಯೊಬ್ಬ ಗ್ರಾಹಕರು ಪ್ರಾಮಾಣಿಕವಾಗಿ ಸಾಲವನ್ನು ಹಿಂತಿರುಗಿಸಿ ಕಟ್ಟಿದಾಗ ಮಾತ್ರ ಇಂತಹ ಸಹಕಾರಿ ಬ್ಯಾಂಕುಗಳು ಇನ್ನು ಹೆಚ್ಚು ಬೆಳೆಯಲು ಸಹಕಾರಿ ಆಗುತ್ತದೆ.ರೈತರಿಗಾಗಿ ಸಹಕಾರಿ ಬ್ಯಾಂಕುಗಳಲ್ಲಿ ರೈತರ ಆರ್ಥಿಕ ಸಹಾಯಕ್ಕಾಗಿ 5 ಲಕ್ಷದವರೆಗೆ 0 % ಬಡ್ಡಿ ದರದಲ್ಲಿ ಸಾಲ ಕೊಡಲಾಗುತ್ತದೆ. ಇಂತಹ ಸಾಲವನ್ನು ತೆಗೆದುಕೊಂಡ ರೈತರು ಪ್ರಾಮಾಣಿಕವಾಗಿ ಹಿಂತಿರುಗಿ ಸಾಲವನ್ನು ಸಂಪೂರ್ಣ ಪ್ರಮಾಣದಲ್ಲಿ ಕಟ್ಟಿದಾಗ ಇಂತಹ ಸಹಕಾರಿ ಬ್ಯಾಂಕುಗಳು ಇನ್ನು ಹೆಚ್ಚು ಬೆಳೆಯಲು ಸಾಧ್ಯವಾಗುತ್ತವೆ.
ಸಹಕಾರಿ ಕ್ಷೇತ್ರಗಳು ಕೆಟ್ಟು ಹೋಗಿವೆ ಈಗಿನ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ರಾಜಕೀಯ ಮಾಡುತ್ತಾರೆ ಮತ್ತು ರಾಜಕೀಯದಿಂದ ರಾಜಕೀಯದಿಂದ ಇಂತಹ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಲು ಬರುತ್ತಿರುವುದು ನೋಡಿದರೆ ಸಹಕಾರಿ ಕ್ಷೇತ್ರವು ಕೆಟ್ಟುಹೋಗಿದೆ ಎಂದು ಅನಿಸುತ್ತದೆ.ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ಸಮಾಜ ಸೇವಕರು ವಿಚಾರವಂತರು ಆಗಿರಬೇಕು ಅದನ್ನು ಬಿಟ್ಟು ತಮ್ಮ ವೈಯಕ್ತಿಕ ಬಿಜಿನೆಸ್ಸಿಗಾಗಿ ಸಹಕಾರಿ ಕ್ಷೇತ್ರಕ್ಕೆ ಬಂದರೆ ಸಹಕಾರಿ ಕ್ಷೇತ್ರವು ಕಟ್ಟು ಹೋಗುತ್ತದೆ ಅದಕ್ಕಾಗಿ ಸಹಕಾರಿ ಕ್ಷೇತ್ರಕ್ಕೆ ಬರುವವರು ಸಮಾಜ ಸೇವಕರಾಗಿ ರೈತರ ಚಿಂತಕರಾಗಿ ಈ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಅಂದಾಗ ಮಾತ್ರ ಇಂತಹ ಸಹಕಾರಿ ಬ್ಯಾಂಕುಗಳು ಇನ್ನೂ ಹೆಚ್ಚು ಬೆಳೆಯಲು ಸಾಧ್ಯವಾಗುತ್ತವೆ ಎಂದು ಹೇಳಿದರು.

ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ರೈತರಗಾಗಿ ಆರ್ಥಿಕ ಸಹಾಯ ಮಾಡಿದ್ದಕ್ಕಾಗಿ ರೈತರು ನಂಬಿಕೆ ಇಟ್ಟುಕೊಂಡು ಈ ಕುಕನೂರಿನ ಆರ್. ಕೆ. ಡಿ. ಸಿ. ಸಿ ಬ್ಯಾಂಕ್ ನಲ್ಲಿ 12000 ಕೋಟಿ ಹಣವನ್ನು ಡಿಪೋಜಿಟ್ ಇದೆ ಸಹಕಾರಿ ಬ್ಯಾಂಕುಗಳು ಬೆಳೆಯಲು ಕಾರಣ ಸಹಕಾರಿ ಬ್ಯಾಂಕುಗಳಲ್ಲಿ ಗ್ರಾಹಕರು ಸಿಬ್ಬಂದಿಗಳು ಕೂಡಿಕೊಂಡು ನಂಬಿಕೆ ಇಟ್ಟುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುವುದರಿಂದ ಇಂತಹ ಸಹಕಾರಿ ಬ್ಯಾಂಕುಗಳು ಲಾಭಗಳಲ್ಲಿವೆ. ನಮ್ಮ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ರಾಜಕೀಯದಲ್ಲಿ ತುಂಬಾ ಅನುಭವ ಇರುವ ವ್ಯಕ್ತಿ ಅಂಥವರಿಗೆ ಅವರ ಪಕ್ಷದ ನಾಯಕರು ಅವರಿಗೆ ಬೇಗನೆ ಒಂದು ಸ್ಥಾನವನ್ನು ಕೊಡಲು ಎಲ್ಲೋ ಸ್ವಲ್ಪ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ನನ್ನ ಗೆ ಅನಿಸುತ್ತದೆ. ಇದನ್ನು ನಾನು ರಾಜಕೀಯವಾಗಿ ಹೇಳುತ್ತಿಲ್ಲ ನಾನು ಈ ಕ್ಷೇತ್ರದ ಒಬ್ಬ ಪ್ರಜೆಯಾಗಿ ಹೇಳುತ್ತಿದ್ದೇನೆ ಅಷ್ಟೇ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ವಿಶ್ವನಾಥ್ ಪಾಟೀಲ್ ಮಾತನಾಡಿ, ನಮ್ಮ ಸಹಕಾರಿ ಬ್ಯಾಂಕ್ 6 ಕೋಟಿ ಲಾಭದಲ್ಲಿದೆ. ಮುಂದಿನ ದಿನಮಾನಗಳಲ್ಲಿ ವಿಶ್ವದ ಗುರು ಎಂದರೆ ಈ ಆರ್ಥಿಕ ಸಹಾಯ ಮಾಡುವ ಸಹಕಾರಿ ಬ್ಯಾಂಕು ಆಗಬೇಕು ನಮ್ಮ ಬ್ಯಾಂಕುಗಳಲ್ಲಿ ಸಿಬ್ಬಂದಿಗಳ ಗ್ರಾಹಕರ ನಡುವೆ ಉತ್ತಮವಾದ ವೈ ವಾಟು ಇರುವುದರಿಂದ ನಮ್ಮ ಈ ಸಹಕಾರಿ ಬ್ಯಾಂಕು ಉತ್ತಮವಾಗಿ ಬೆಳೆಯಲು ಸಹಾಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಮೇಶ್ ವೈದ್ಯರು, ಶೇಖರ್ ಗೌಡ ಎಸ್ ಉಳ್ಳಾಗಡ್ಡಿ,ನಿರ್ದೇಶಕರು ಆರ್. ಕೆ. ಡಿ. ಸಿ. ಸಿ. ಬ್ಯಾಂಕ್ ರಾಯಚೂರು, ಐ ಎಸ್ ಗಿರೆಡ್ಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಎಚ್ ಪ್ರಾಣೇಶ್ ತಹಸಿಲ್ದಾರ್, ಶಿವಶಂಕರಗೌಡ ಪಾಟೀಲ್, ಶೇಖರ ಗೌಡ ಪಾಟೀಲ್, ಶರಣಪ್ಪ ಹ್ಯಾಟಿ, ಶೇಖರ್ ಗೌಡ ಎಸ್ ಉಳಾಗಡ್ಡಿ, ವೀರಣ್ಣ ಬಳೂಟಗಿ, ಬಸವರಾಜ ಉಳ್ಳಾಗಡ್ಡಿ, ಶಿವಕುಮಾರ್ ನಾಗಲಾಪುರ ಮಠ, ವೀರಣ್ಣ ಹುಬ್ಬಳ್ಳಿ, ಬಸನಗೌಡ್ರು ತೊಂಡಿಹಾಳ್, ಇನ್ನಿತರರಿದ್ದರು.

Leave a Reply

Your email address will not be published. Required fields are marked *

error: Content is protected !!