11

            ಸಹಯೋಗ್ ಮಲ್ಟಿಸ್ಟೇಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ನಿಂದ

         ಕೊಪ್ಪಳದಲ್ಲಿ ರಾಷ್ಟ್ರೀಯ ಸಸಿ ನೆಡುವ ಕಾರ್ಯಕ್ರಮ

 

ಕೊಪ್ಪಳ, 28- ಭಾರತ ದೇಶಾದ್ಯಂತ ಸಹಯೋಗ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್  ನಿಂದ ಜರುಗಿದ ರಾಷ್ಟ್ರೀಯ ಸಸಿ ನೆಡುವ ಕಾರ್ಯಕ್ರಮದ ಅಮಗವಾಗಿ ಕೊಪ್ಪಳದ ನಗರದಲ್ಲಿ ಕೊಪ್ಪಳ ಶಾಖೆ ವತಿಯಿಂದ ಗವಿ ಮಠದ ಯಾತ್ರಿ ನಿವಾಸದ ಆವರಣದಲ್ಲಿ ಹಂಮ್ಮಿಕೊಳ್ಳಲಾಗಿತ್ತು .

ಶನಿವಾರದಂದು ಗವಿ ಮಠ ಮಠಾಧೀಶರ ಆಶೀರ್ವಾದದೊಂದಿಗೆ ಹಾಗೂ ಮಠದ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಮತ್ತು ಸಹಯೋಗ ಮಲ್ಟಿಸ್ಟೇಟ್ ಕೊಪ್ಪಳ ಶಾಖೆಯ ಎಲ್ಲ ಸಿಬ್ಬಂದಿಗಳ ಸಹಯೋಗಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಹಯೋಗ ಮಲ್ಟಿಸ್ಟೇಟ್ ಸೊಸೈಟಿಯ ವ್ಯವಸ್ಥಾಪಕ ನಾಗರಾಜ ಮುಂದಿನ ಮನಿ ಮಾತನಾಡಿ  ಕಳೆದ 20 ವರ್ಷದಿಂದ ಬ್ಯಾಂಕಿಂಗ್, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ,ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣಕ್ಕೆ ಅನೇಕ ಯೋಜನೆಗಳು ಚಾಲ್ತಿಯಲ್ಲಿವೆ.FD 11%,RD 8%, ಚಾಲ್ತಿ ಖಾತೆಗೆ 2% ಮತ್ತು 3%, ಪಿಗ್ಮಿ ಉಳಿತಾಯ ಖಾತೆ 6%,ಉಳಿತಾಯ ಖಾತೆಗೆ 6% ಆಕರ್ಷಕ ಬಡ್ಡಿ ದರಗಳನ್ನು ಕೊಡುತ್ತಿದೆ.ಪ್ರಸ್ತುತ 210 ಶಾಖೆಗಳೊಂದಿಗೆ 7 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದ್ದರು.

ಈ ಸಂದರ್ಭದಲ್ಲಿ ಸಿಬಂದಿಗಳಾದ ಎ,ಕೆ ಸಣ್ಣಮುಖಪ್ಪ,  ರೋಹಿತ್‌ ಬುಜಾರಕರ್‌, ಕೃಷ್ಣಾ ಮುರಾರಿ, ಮಲ್ಲಪ್ಪ, ನಿರ್ಮಲಾ ದೊಡ್ಡ್ಮನಿ, ಮಂಜುಳಾ ಇತರರು ಇದ್ದರು.

 

Leave a Reply

Your email address will not be published. Required fields are marked *

error: Content is protected !!