
ಸಾಧನೆಗೆ ವಿಧ್ಯಾ ಗುರುಗಳ ಪ್ರೇರಣೆ ಮುಖ್ಯ
ಶ್ರೀಮತಿ ಲತಾ ಚಿನ್ನೂರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 23- ಸಾಧನೆಗೆ ವಿಧ್ಯಾ ಗುರುಗಳ ಆಶೀರ್ವಾದದ ಪ್ರೇರಣೆ ಮುಖ್ಯ ಎಂದು ನಗರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ಲತಾ ಚಿನ್ನೂರ ಹೇಳಿದರು.
ಅವರು ನಗರದ ಸಾಹಿತ್ಯ ಭವನದಲ್ಲಿ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಾರ್ಷಿಕೋತ್ಸವದ ಹಾಗೂ ಸಾಂಸ್ಕೃತಿಕ ಸಂಭ್ರಮ-2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಕ್ಕಳು ಟಿ.ವಿ ಹಾಗೂ ಮೊಬೈಲ್ ನಿಂದ ದುರವಿರಿ, ಮಕ್ಕಳ ಶೈಕ್ಷಣಿಕ ಬೆಳವಣಿಗೆ ಶಿಕ್ಷರ ಮೇಲೆ ಮಕ್ಕಳ ಶ್ರದ್ಧೆ ಬಹಳ ಮುಖ್ಯ ಎಂದರು.
ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ಶರಣಪ್ಪ ಬಾಚಲಾಪೂರ ಮಾತನಾಡಿ ಮಕ್ಕಳನ್ನ ಪಠ್ಯದ ಹುಳಗಳನ್ನಾಗಿ ಮಾಡುತ್ತಿದ್ದಾರೆ, ಮಗುವಿಗೆ ಆತ್ಮ ಸ್ಥೈರ್ಯ ,ಬದುಕಿನ ಮಜುಲಗಳ ಮತ್ತು ಸುತ್ತಮುತ್ತಲಿನ ಪರಿಸರ,ಮಾನವಿಯ ಮೌಲ್ಯಗಳನ್ನ ಬೆಳಸಿ ಕೋಳಿ ಎಂದು ಕರೆ ನೀಡಿದರು.
ಮಗುವಿನಿಂದ ತಂದೆ ತಾಯಿ ದುರವಿರಬೇಡಿ ,ಮಗುವಿಗೆ ಕನಿಷ್ಠ 6 ವರ್ಷಗಳ ನಂತರ ಶಿಕ್ಷಣ ನೀಡಬೇಕು ಎನ್ನುವುದು ತಜ್ಞರ ಅಭಿಪ್ರಾಯ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಕುಕನೂರ ಮಾತನಾಡಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಾ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸುತ್ತಿರುವ ಸಂಸ್ಥೆ ನಮ್ಮದು ಎಂದರು.
ಮುಖ್ಯ ಅತಿಥಿಗಳಾಗಿ ನಗರಸಭೆ ಮಾಜಿ ಅಧ್ಯಕ್ಷರು ಚಂದ್ರಶೇಖರ ಕವಲೂರ, ನಗರಸಭೆ ಸದಸ್ಯ ಮಲ್ಲಪ್ಪ ಕವಲೂರು,ಶ್ರೀಮತಿ ನಾಗರತ್ನ ಕುಕನೂರ , ಮುಖಂಡರು ಮುಸ್ತಫಾ ಕುದರಿಮೋತಿ, ಖಾಸಗಿ ಶಾಲೆಗಳ ಒಕ್ಕೂಟ ಅಧ್ಯಕ್ಷ ಬಸವರಾಜ ತಳಕಲ್ಲ , ಮುಖಂಡರಾದ ಭರಮಗೌಡ ಗೆಜ್ಜಿ ಇತರರು ಇದ್ದರು.