
ಸಾರ್ವಜನಿಕರು ಸಾಂಸ್ಕೃತಿಕ ಅವಗಾಹನೆ ಬೆಳೆಸಿಕೊಳ್ಳಬೇಕು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,31- ಶ್ರೀ ಜಯಪ್ರಕಾಶ್ ಜೆ ಗುಪ್ತ ಸಂಜೆ 6 ಗಂಟೆಗೆ ಅಲಾಪ್ ಸಂಗೀತ ಕಲಾ ಟ್ರಸ್ಟ್ ಬಳ್ಳಾರಿ ವತಿಯಿಂದ ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ ಸಹಕಾರದೊಂದಿಗೆ ಶ್ರೀ ರಾಮ ರಂಗೋತ್ಸವ ಕಾರ್ಯಕ್ರಮವನ್ನು ರಾಘವ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟನೆಯನ್ನು ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ ಗೌರವಾಧ್ಯಕ್ಷ ಶ್ರೀ ಕೆ ಚನ್ನಪ್ಪ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಯೋಧ್ಯೆ ಯಲ್ಲಿ ಬಲರಾಮನ ವಿಗ್ರಹ ಪ್ರತಿಷ್ಠಾಪನೆ ಸಂದರ್ಭದಲ್ಲಿ ನಾಲ್ಕು ದಿನಗಳ ಕಾಲ ರಂಗ ತೋರಣ ಬಳ್ಳಾರಿ ಮತ್ತು ಅಲಾಪ್ ಸಂಗೀತ ಕಲಾ ಟ್ರಸ್ಟ್ ಬಳ್ಳಾರಿ ಇವರುಗಳು ರಾಮನ ಕುರಿತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಂಡಿರುವುದು ಸಂತಸದ ವಿಷಯ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಲೆಕ್ಕ ಪರಿಶೋಧಕರಾದ ಶ್ರೀ ಜಯಪ್ರಕಾಶ್ ಜೆ ಗುಪ್ತ ಅವರು ಮಾತನಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಅವಗಾಹನೆ ಸಾರ್ವಜನಿಕರು ಬೆಳೆಸಿ ಕೊಳ್ಳಬೇಕು ಅಗ ಮಾತ್ರ ಜೀವನ ಸಾರ್ಥಕವಾಗುತ್ತದೆ.
ಅಯೋಧ್ಯೆಯಲ್ಲಿ ಯಾವ ರೀತಿ ಬಲರಾಮನ ವಿಗ್ರಹ ಪ್ರತಿಷ್ಠಾಪನೆ ವಿಷಯದ ಬಗ್ಗೆ ಮತ್ತು ಹೋರಾಟದ ಇತಿಹಾಸವನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆರ್ಯವೈಶ್ಯ ಅಸೋಸಿಯೇಷನ್ ಅಧ್ಯಕ್ಷರಾದ ಡಾಕ್ಟರ್ ಡಿ ಎಲ್ ರಮೇಶ್ ಗೋಪಾಲ್, ಬಳ್ಳಾರಿ ಜಿಲ್ಲಾ ವಾಣಿಜ್ಯ ಕೈಗಾರಿಕೆ ಸಂಸ್ಥೆ ಬಳ್ಳಾರಿ ಅಧ್ಯಕ್ಷರಾದ ಶ್ರೀ ಮಹಾ ರುದ್ರ ಗೌಡ, ತೆಲುಗು ಸಂಸ್ಕೃತಿ ಸಮಿತಿ ಅಧ್ಯಕ್ಷ ಶ್ರೀ ಗಾದೆಂ ಗೋಪಾಲ್ ಕೃಷ್ಣ, ಡಾಕ್ಟರ್ ಆರ್ ದೇವಣ್ಣ, ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ ಗೌರವ ಕಾರ್ಯದರ್ಶಿ ಶ್ರೀ ಎನ್ ಪ್ರಕಾಶ್ ಎಲ್ಲರೂ ಅತಿಥಿಗಳು ರಾಮನ ವಿಗ್ರಹ ಪ್ರತಿಷ್ಠಾಪನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಅಭಿಪ್ರಾಯಗಳು ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಸಹಕಾರ ನೀಡಿದವರಿಗೆ ಟ್ರಸ್ಟ್ ವತಿಯಿಂದ ಗೌರವಿ ಸಲ್ಲಿಸಲಾಯಿತು.
ಪ್ರಾರಂಭದಲ್ಲಿ ಶ್ರೀ ಮುದ್ದಟ ನೂರು ಹೆಚ್ ತಿಪ್ಪೇಸ್ವಾಮಿ ಮತ್ತು ಶ್ರೀ ಡಿ ವಿರುಪಾಕ್ಷಪ್ಪ ತಂಡದಿಂದ ವಚನ ಗಾಯನ ನಡೆಸಿಕೊಟ್ಟರು. ತದನಂತರ ಶ್ರೀ ಸಾಯಿ ಸಂತೋಷ ನಾಟ್ಯ ಮಂಡಳಿ ಹೈದರಾಬಾದ್ ಇವರಿಂದ ಮಾಯಾ ಬಜಾರ್ ತೆಲುಗು ಪೌರಾಣಿಕ ಪದ್ಯ ನಾಟಕ ಸಿನಿಮಾ ರೀತಿಯಲ್ಲಿ ಅದ್ಬುತವಾಗಿ ಪ್ರದರ್ಶನ ನೀಡಿ ಸಾರ್ವಜನಿಕ ಮೆಚ್ಚುಗೆ ಪಡೆದರು.ನಿರೂಪಣೆ ಶ್ರೀ ಹೆಚ್ ತಿಪ್ಪೇಸ್ವಾಮಿ, ವಂದನಾರ್ಪಣೆ ಟ್ರಸ್ಟ್ ಅಧ್ಯಕ್ಷರಾದ ಶ್ರೀ ರಮಣಪ್ಪ ಭಜಂತ್ರಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಿ ಧನಂಜಯ , ಹೆಚ್ ವಿಷ್ಣುವರ್ಧನ್ ರೆಡ್ಡಿ,ಕೆ. ಕೃಷ್ಣ ಜಿ ಆರ್ ವೆಂಕಟೇಶಲು, ಕೆ ಶ್ಯಾಮ ಸುಂದರ, ಕೆ ಸುರೇಂದ್ರ ಬಾಬು, ವಿ ರಾಮಚಂದ್ರ,ಶೇಷ ರೆಡ್ಡಿ,ಎಂ ರಾಮಾಂಜನೇಯಲು , ಕೆ ರಾಮಾಂಜನೇಯಲು, ಕಪ್ಪಗಲ್ ಪ್ರಭುದೇವ, ಅಡವಿ ಸ್ವಾಮಿ,ಭೀಮನೇನಿ ಭಾಸ್ಕರ್, ಭೀಮ ನೇನಿ ಪ್ರಸಾದ್, ಕುಮಾರಿ ಭೀಮನೇನಿ ಪ್ರಜ್ಞ, ಸುಬ್ಬಣ್ಣ , ಪುರುಷೋತ್ತಮ ಹಂದ್ಯಾಳ್,ಟ್ರಸ್ಟ್ ಅಧ್ಯಕ್ಷ ರಮಣಪ್ಪ ಭಜಂತ್ರಿ ಹಾಗೂ ಕಲಾಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು