
ಸಾರ್ವಜನಿಕ ಆಸ್ಪತ್ರೆ ಉನ್ನತಿಕರಣ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ಶಾಸಕ ಬಿ ಎಂ ನಾಗರಾಜ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,30- ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಕೂಡ ಸಾಮಾಜಿಕ ನ್ಯಾಯ ಹಾಗೂ ಅತ್ಯುತ್ತಮ ಆರೋಗ್ಯ ಭಾಗ್ಯ ದೊರೆಯಬೇಕು ಎಂದು ಶಾಸಕ ಬಿ ಎಂ ನಾಗರಾಜ್ ಅವರು ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡವನ್ನು ಸಾರ್ವಜನಿಕರಿಗಾಗಿ ಲೋಕಾರ್ಪಣೆ ಗೊಳಿಸಿ ಮಾತನಾಡಿದರು.
ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಬಳ್ಳಾರಿ ಕೆಕೆಆರ್‌ಡಿಬಿ ಯೋಜನೆಡಿ ನಿರ್ಮಿಸಿದ ಸಿರುಗುಪ್ಪ ತಾಲೂಕು ಸಾರ್ವಜನಿಕ ಆಸ್ಪತ್ರೆ ಉನ್ನತೀಕರಣದ ನೂರು ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ವನ್ನು ಜನಪರ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಉದ್ಘಾಟಿಸಿದರು.
ಅತಿಥಿಗಳು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ ನಾಗೇಂದ್ರ, ಕೊಪ್ಪಳ ಲೋಕಸಭಾ ಸಂಸತ್ ಕರಡಿ ಸಂಗಣ್ಣ, ಬಳ್ಳಾರಿ ರಾಜ್ಯಸಭಾ ಸಂಸತ್ ಡಾ ನಾಸಿರ್ ಹುಸೇನ್, ವಿಧಾನ ಪರಿಷತ್ ಶಾಸಕ ಡಾ ಚಂದ್ರಶೇಖರ ಬಿ ಪಾಟೀಲ್, ಶಶಿಲ್ ಜಿ ನಮೋಶಿ, ವೈ ಎಂ ಸತೀಶ್ ಬಳ್ಳಾರಿ ಜಿಲ್ಲಾ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾ ಹಕ ಅಧಿಕಾರಿ ರಾಹುಲ್ ಶರಣಪ್ಪ ಶಂಕನೂರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ವೈ ರಮೇಶ್ ಬಾಬು ತಾಲೂಕ ವೈದ್ಯಾಧಿಕಾರಿ ಡಾ ಬಿ ಈರಣ್ಣ, ತಾಲೂಕ ಆರೋಗ್ಯ ಹಿರಿಯ ಅಧಿಕಾರಿ ಡಾ ನಿವೃತ್ತಿ ನಿಂಗಪ್ಪ, ಗಣ್ಯರು, ಕಾಂಗ್ರೆಸ್ ಕಾರ್ಯ ಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತರು, ಸಾರ್ವಜನಿಕ ರು ಇದ್ದರು