
ಸಿಇಟಿ ವಿದ್ಯಾರ್ಥಿಗಳಿಗೆ ಶುಭಕೋರಿದ ಕ್ಯಾವಟರ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 18- ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಶುಭಕೋರಿದರು.
ಗುರುವಾರ ಬೆಳಗ್ಗೆ ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಶುಭಕೋರಿದರು. ಈ ವೇಳೆ ವಿದ್ಯಾರ್ಥಿಗಳು ಮತ್ತೊಮ್ಮೆ ಮೋದಿ ಸರ್ಕಾರಕ್ಕೆ ಯುವಕರ ಬೆಂಬಲವಿದೆ. ಮತ್ತೊಮ್ಮೆ ಮೋದಿಯವರು ಪ್ರಧಾನಮಂತ್ರಿ ಆಗುತ್ತಾರೆ ಎಂದು ವಿದ್ಯಾರ್ಥಿಗಳು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡರಾದ ಬಸವರಾಜ ಗೌರ, ವಕೀಲ ಪ್ರಕಾಶ್ ಪರ್ವತಗೌಡ, ಡಾ. ಕವಿ ಪಾಟೀಲ್, ಸುನೀಲ್ ಹೆಸರೂರು, ರಮೇಶ್ ಕವಲೂರು, ವಿ.ಬಿ.ಅಂಗಡಿ, ರಾಜೇಂದ್ರ ಕುಮಾರ್, ಅಂಬರೇಶ್ ಮುರಳಿ, ಅಸ್ಲಾಂಪಾಷಾ, ಮಲ್ಲಿಕಾರ್ಜುಕಟ್ಟಿ, ಸಂತೋಷ್, ಮಂಜುನಾಥ ಗುದಗಿ, ಮಾರುತಿ ನಾಯಕ್, ಸದ್ದಾಂ ಖಾಜಿ, ಮಹೆಬೂಬ್ ಕರಡಿ, ಮಂಜುನಾಥ್ ಉಲ್ಲತ್ತಿ, ಚನ್ನಬಸವ ಗಾಳಿ, ಬಿಜೆಪಿ- ಜೆಡಿಎಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.