
ಹೈದ್ರಾಬಾದ್ ಹಾಗೂ ರಾಜಸ್ಥಾನ ರಾಜ್ಯಗಳ ಸಿಎಂಎಫ್ ಸಂಸ್ಥೆ ಹಾಗೂ ಯುನಿಸೆಫ್ ಪದಾಧಿಕಾರಿಗಳಿಂದ ಜಿಲ್ಲೆಯ ಶಾಲಾ ಪೂರ್ವ ಶಿಕ್ಷಣ ಪ್ರಕ್ರಿಯೆ ವೀಕ್ಷಣೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 2- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಖಾಂತರ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ನಡೆಯುತ್ತಿರುವ ಶಾಲಾ ಪೂರ್ವ ಶಿಕ್ಷಣ ಪ್ರಕ್ರಿಯೆಯನ್ನು ವೀಕ್ಷಿಸಲು ಹೈದ್ರಾಬಾದ ಮತ್ತು ರಾಜ್ಯಸ್ಥಾನ ರಾಜ್ಯದಿಂದ ಟಾಟಾ ಟ್ರಸ್ಟ್ನ ಅಂಗ ಸಂಸ್ಥೆಯಾದ ಸಿ.ಎಮ್.ಎಫ್ ಸಂಸ್ಥೆಯ ತಂಡದ ಮುಖ್ಯಸ್ಥರಾದ ವಿಜಯಸಿಂಗ್ ಮತ್ತು ತಂಡದರವರು ಹಾಗೂ ಯುನಿಸೆಫ್ ಪದಾಧಿಕಾರಿಗಳು, ಜೂನ್ 26 ಮತ್ತು 27 ರಂದು ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದರು.
ಜೂನ್ 26 ರಂದು ಯಲಬುರ್ಗಾ ಯೋಜನೆಯಲ್ಲಿ ತಳಕಲ್ ಅಂಗನವಾಡಿ-2 ಮತ್ತು ಮಂಡಲಗಿರಿ-3 ಅಂಗನವಾಡಿಗೆ ಭೇಟಿ ನೀಡಿದ ತಂಡದವರು, ಕೇಂದ್ರದಲ್ಲಿ ಶಾಲಾ ಪೂರ್ವ ಶಿಕ್ಷಣಕ್ಕೆ ಸಂಬAಧಿಸಿದAತೆ ಬೆಳಿಗ್ಗೆ 10 ಗಂಟೆಯಿAಧ ಮಧ್ಯಾಹ್ನ 1.30 ರವರೆಗೆ ಅಂಗನವಾಡಿಯಲ್ಲಿನ ಚಟುವಟಿಕೆಗಳನ್ನು ವೀಕ್ಷಣೆ ಮಾಡಿದರು. ಮಕ್ಕಳ ಪ್ರತಿಕ್ರಿಯೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಶಾಲಾ ಪೂರ್ವ ಶಿಕ್ಷಣದ ಚಟುವಟಿಕೆ ನೋಡಿ ಬೆರಗಾದರು. ಕೇಂದ್ರದಲ್ಲಿ ಸ್ವಚ್ಛತೆ, ಮಕ್ಕಳ ಆಹಾರ ಎಲ್ಲವನ್ನೂ ಗಮನಿಸಿದರು.
ಜೂನ್ 27 ರಂದು ಯುನಿಸೆಫ್ ಹೈದ್ರಾಬಾದ್ ತಂಡವು ಕೊಪ್ಪಳ ಯೋಜನೆಯಲ್ಲಿ ಕೊಪ್ಪಳ ನಗರದ ಮೋಚಿವಾಡದ ಅಂಗನವಾಡಿ ಕೇಂದ್ರ ಹಾಗೂ ಕೋಳೂರ ಅಂಗನವಾಡಿ ಕೇಂದ್ರ 1 ಮತ್ತು 2ನೇ ಕೇಂದ್ರಕ್ಕೆ ಭೇಟಿ ನೀಡಿದರು. ಶಾಲಾ ಪೂರ್ವ ಶಿಕ್ಷಣದ ಚಟುವಟಿಕೆಗೆ ತಯಾರಿಸಿಕೊಂಡ ಸಾಮಗ್ರಿಗಳನ್ನು ಪರಿಶೀಲಿಸಿ, ಕೇಂದ್ರದಲ್ಲಿ ಹೊಂದಿಸಿಕೊAಡ ವಿಧಾನವನ್ನು ಸವಿಸ್ತಾರವಾಗಿ ಗಮನಿಸಿದರು.
ಹೊಸಲಿಂಗಾಪೂರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ 4 ವೀಕ್ಷಣೆ ಮಾಡಿ, ಕೇಂದ್ರ ಸಂಖ್ಯೆ 3ರಲ್ಲಿ ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳ ಪಾಲಕರೊಂದಿಗೆ ಶಾಲಾ ಪೂರ್ವ ಶಿಕ್ಷಣದ ಚಟುವಟಿಕೆ ಕುರಿತು, ಮಕ್ಕಳ ಕಲಿಕೆ ಯಾವ ರೀತಿ ಆಗುತ್ತದೆ, ಪೋಷಕರ ಪಾತ್ರ, ಕಲಿಕೆಯ ವಾತಾವರಣದ ಬಗ್ಗೆ ಸಮಗ್ರವಾಗಿ ಚರ್ಚಿಸಿದರು. ಪಾಲಕರಿಗೆ ಮಕ್ಕಳ ಆರೈಕೆ ಹಾಗೂ ಶಿಕ್ಷಣ ಕೊಡಿಸುವ ಜವಾಬ್ದಾರಿಗಳ ಬಗ್ಗೆ ಅರ್ಥಮಾಡಿಸಿದರು. ಅಂಗನವಾಡಿಯಲ್ಲಿ ಕಲಿತ 6 ವರ್ಷ ಪೂರ್ಣಗೊಳಿಸಿದ ಮಕ್ಕಳ ಪಾಲಕರು ಅಂಗನವಾಡಿಯಲ್ಲಿ ಸಭೆ ಸೇರಿ ಮಕ್ಕಳಲ್ಲಿ ಆಗಿರುವ ಕಲಿಕೆಯನ್ನು ಚರ್ಚಿಸಿ ಅಂಗನವಾಡಿಯಿAದ ಶಾಲೆಗೆ ಸೇರಿಸಲು ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಚರಿಸಲಾಯಿತು.
ಅದೇ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲೆಗೆ ಪ್ರವೇಶೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪಾಲಕರು ಹಾಗೂ ಮುಖ್ಯ ಶಿಕ್ಷಕರು, ಸಹಶಿಕ್ಷಕರೊಂದಿಗೆ ಸಭೆ ನಡೆಸಿ ಮಕ್ಕಳ ಶಿಕ್ಷಣದ ಗುಣಮಟ್ಟ ಹಾಗೂ ಅವರಲ್ಲಿರುವ ಕೌಶಲ್ಯ, ಗುಣಸ್ವಭಾವಗಳನ್ನು ಶಾಲಾ ಶಿಕ್ಷಕರಿಗೆ ಅರ್ಥ ಮಾಡಿಸಿದರು. ಈ ಪ್ರಯತ್ನ ಉತ್ತಮ ಕಾರ್ಯವಾಗಿದ್ದು, ಎಲ್ಲಾ ಶಾಲೆಗಳಲ್ಲಿ ಇದನ್ನು ಮಾಡಬೇಕು. ಮಕ್ಕಳು ಶಾಲೆ ಬಿಡುವ ಸಂಖ್ಯೆ ಕಡಿಮೆ ಆಗುತ್ತದೆ ಎಂದರು. ಪಾಲಕರು ಕೇಂದ್ರದಲ್ಲಿ ಮಗು ಕಲಿತ ವಿಷಯಗಳನ್ನು ವೇದಿಕೆ ಮೇಲೆ ಪ್ರದರ್ಶಿಸಲು ಅವಕಾಶ ಕೊಟ್ಟು ಮಗುವಿನಲ್ಲಿ ಭಾಷಾ ಬೆಳವಣಿಗೆ, ಬೌದ್ದಿಕ ಬೇಳವಣಿಗೆ, ಸಾಮಾಜಿಕ ಬೆಳವಣಿಗೆ, ಕೌಶಲ್ಯ ಬೆಳವಣಿಗೆ ಯಾವ ರೀತಿ ಆಗಿರುತ್ತದೆ ಎಂದು ಗಮನಿಸಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಕಾರ್ಯಕ್ರಮ ನಿರುಪಣಾಧಿಕಾರಿಗಳು ಶಾಲಾ ಪ್ರವೇಶೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ. ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದಂತಾಗಿ ಅವರ ಕಲಿಕೆ ಉತ್ತಮಗೊಳ್ಳುತ್ತದೆ ಎಂದರು.
ಜೂನ್ 27 ರಂದು ಯಲಬುರ್ಗಾ ಯೋಜನೆಯ ಬಾನಾಪೂರ-2, ತಳಕಲ್-4 ಹಾಗೂ 6ನೇ ಕೇಂದ್ರದಲ್ಲಿ ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮದಲ್ಲಿ ತಂಡದವರು ಭಾಗವಹಿಸಿ, ಇದೊಂದು ಮಕ್ಕಳ ಕಾಳಜಿ ಮಾಡುವ ವೇದಿಕೆ. ಮಕ್ಕಳ ಪಾಲಕರು ಮಕ್ಕಳಲ್ಲಿ ಆಗಿರುವ ಕಲಿಕೆಯನ್ನು ನೇರವಾಗಿ ವೀಕ್ಷಿಸಲು ಅವಕಾಶವಿದ್ದು, ಇದು ಹೀಗೆ ಮುಂದುವರಿಯಲಿ ಎಂದರು. ಮಕ್ಕಳ ನ್ಯೂನ್ಯತೆಯನ್ನು ಅರಿತು ತಿದ್ದಲು ಉತ್ತಮ ವೇದಿಕೆ ಇದಾಗಿದೆ. ಅಂಗನವಾಡಿ ಕೇಂದ್ರಗಳು ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆಯವರು ಉತ್ತಮ ಪಠ್ಯಕ್ರಮ ರಚಿಸಿ ತರಬೇತಿ ನೀಡಿದ್ದಾರೆ. ನಾವೆಲ್ಲರೂ ಮಕ್ಕಳ ಶಿಕ್ಷಣಕ್ಕೆ ಶ್ರಮಿಸೋಣ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಆಗೋಣ ಪಾಲಕರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಹೀಗೆ ಇರಲಿ ಎಂದು ಹಾರೈಸಿದರು. ಕೊಪ್ಪಳ ಜಿಲ್ಲೆಯ ಅಂಗನವಾಡಿಯಲ್ಲಿ ನಡೆಯುವ ಶಾಲಾ ಪಾರ್ವ ಶಿಕ್ಷಣದ ಚಟುವಟಿಕೆಗಳನ್ನು ನಮ್ಮ ರಾಜ್ಯದಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದರು.
ನAತರ ಜಿಲ್ಲಾ ಆಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಂಗನವಾಡಿ ಕೇಂದ್ರಗಳಲ್ಲಿ ನಡೆಯುವ ಶಾಲಾ ಪೂರ್ವ ಶಿಕ್ಷಣದ ಚಟುವಟಿಕೆಗಳ ಕುರಿತು ಅಧಿಕಾರಿಗಳೊಂದಿಗೆ ಅಭಿಪ್ರಾಯ ಹಂಚಿಕೊಂಡರು. ಮಕ್ಕಳ ಕಲಿಕೆಗೆ ಅದರದೇ ಆದ ಪಠ್ಯಕ್ರಮ ಮತ್ತು ತರಬೇತಿ ಅತ್ಯಂತ ಅವಶ್ಯ. ಉತ್ತಮ ತರಬೇತಿಯನ್ನು ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆಯವರು ನೀಡಿದ್ದರಿಂದ ಅಂಗನವಾಡಿಯ ಮಕ್ಕಳಲ್ಲಿ ವಯಸ್ಸಿಗೆ ಅನುಗುಣವಾಗಿ ಉತ್ತಮ ಕಲಿಕೆ ಆಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರಮ ನಿರುಪಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಡಿಪಿಒಗಳು, ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.