
ರಾಜ್ಯದ ಸಿಎಂ ಸಿದ್ದರಾಮಯ್ಯ ಕೋತಿ ಇದಂತೆ
ಮಾಜಿ ಡಿಸಿಎಂ ಕೆ.ಎಸ್ಈಶ್ವರಪ್ಪ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 07 – ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋತಿ ಇದ್ದಂತೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುತ್ತಾರೆ ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ ಎಂದು ಮಾಜಿ ಡಿಸಿಎಂ ಕೆ.ಎಸ್ಈಶ್ವರಪ್ಪ ಟೀಕಿಸಿದರು.
ಅವರು ಬರ ಅಧ್ಯಯನ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ . ನಮ್ಮ ನಾಯಕರು ಸೂಚಿಸಿದಂತೆ ನಡೆದುಕೊಂಡಿವೆ. ಆದರೆ ಸಿದ್ದರಾಮಯ್ಯ ಮಂಗನಂತೆ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ ಪಕ್ಷಕ್ಕೆ ಬಂದರು.
ಅವರಿಗೆ ನನ್ನನ್ನು ಹೋಲಿಸಬೇಡಿ. ಈ ಹಿಂದೆ ಅಧಿಕಾರಕ್ಕಾಗಿ ದೇವೇಗೌಡರಿಗೆ ಮೋಸ ಮಾಡಿ ಜೆಡಿಎಸ್ ಬಿಟ್ಟರು. ಈಗ ಕಾಂಗ್ರೆಸ್ನವರು ಡಿ.ಕೆ.ಶಿವರಕುಮಾರ್ ಅವರನ್ನು ಸಿಎಂ ಮಾಡುತ್ತೇವೆ ಎಂದರೆ, ಮತ್ತೊಂದು ಪಕ್ಷಕ್ಕೆ ಹಾರುತ್ತಾರೆ ಎಂದು ತಮ್ಮನ್ನು ಸವಕಲು ನಾಣ್ಯ ಎಂದು ಕರೆದ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಸಿದ್ದರಾಮಯ್ಯ ಸ್ವಯಂಘೋಷಿತ ಹಿಂದುಳಿದ ನಾಯಕ. ಈ ಹಿಂದೆ ತಾವೇ ಸಿಎಂ ಇದ್ದರೂ ಜಾತಿ ಗಣತಿ ವರದಿ ಬಿಡುಗಡೆ ಮಾಡಲಿಲ್ಲ. ಸಮ್ಮಿಶ್ರ ಸರ್ಕಾರದರೂ ಬಾಯಿ ತೆರೆಯಲಿಲ್ಲ. ಈಗಲೂ ಮೌನವಹಿಸಿದ್ದಾರೆ. ಹೀಗಿದ್ದು, ಅಂಬೇಡ್ಕರ್, ದೇವರಾಜ ಅರಸು ನಂತರ ತಾನೇ ಹಿಂದುಳಿದ ನಾಯಕ ಎಂದು ಹೇಳಿಕೊಳ್ಳಲು ನಾಚಿಕೆ ಆಗುವುದಿಲ್ಲವಾ ಎಂದು ಕಿಡಿಕಾರಿದರು.
ಸಚಿವ ಮುನಿಯಪ್ಪ ನ್ಯಾ.ಸದಾಶಿವ ಆಯೋಗ ವರದಿ ಜಾರಿ ಮಾಡಿಸಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡಲಿ. ಸಿದ್ದರಾಮಯ್ಯ ಸಹವಾಸ ಮಾಡಿ ಅವರೂ ಸುಳ್ಳು ಹೇಳುವುದನ್ನು ಕಲಿತಿದ್ದಾರೆ. ಒಳ ಮೀಸಲು ಜಾರಿ ಮಾಡುವುದು ಬಿಟ್ಟು, ಪ್ರತಿಭಟನೆ ನಡೆಸುವಂತೆ ಪ್ರಚೋದನೆ ನೀಡುತ್ತಿದ್ದಾರೆಂದು ಎಂದು ದೂರಿದರು.
ಈ ಸಂದರ್ಭದಲ್ಲಿ ಶಾಸಕ ದುಡ್ಡನಗೌಡ ಪಾಟೀಲ್ ಸೇರಿದಂತೆ ಅನೇಕರು ಇದ್ದರು.