IMG-20240117-WA0032

ವಜ್ರಬಂಡಿ ಗ್ರಾಮದಲ್ಲಿ ಶರಣ ಶ್ರೀ ಸಿದ್ದರಾಮೇಶ್ವರ ಜಯಂತೋತ್ಸವ ಪ್ರಯುಕ್ತ ಭಾವಚಿತ್ರ ಮೇರವಣಿಗೆ

ಕರುನಾಡ ಬೆಳಗು ಸುದ್ದಿ 

ಯಲಬುರ್ಗಾ ,17- ಈ ನಾಡಿಗೆ ಶರಣರು ಸಂತರು ನೀಡಿದ ಕೊಡುಗೆ ಅಪಾರವಾಗಿವೆ ಅವರ ತತ್ವ ಆದರ್ಶಗಳನ್ನು ವಿಚಾರ ಹಾಗು ಸಾಧನೆಗಳನ್ನು ಪ್ರತಿಯೊಬ್ಬ ಯುವಕರು ತಮ್ಮ ಜೀವನದಲ್ಲ ಅಳವಡಿಸಿಕೊಂಡ ಹೋಗಬೇಕು ಎಂದು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಹುಲಗಪ್ಪ ಬಂಡಿವಡ್ಡರ ಹೇಳಿದರು.

ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶಿವಯೋಗಿ ಸಿದ್ಧರಾಮೇಶ್ವರರು 68 ಸಾವಿರ ವಚನಗಳನ್ನು ರಚಿಸಿ ಹಾಡಿದ್ದಾರೆ. ಅವುಗಳ ಪೈಕಿ ಈಗ 1,679 ವಚನಗಳು ಮಾತ್ರ ಲಭಿಸಿವೆ. ಬಸವಣ್ಣ ಹಾಗೂ ಸಿದ್ದರಾಮೇಶ್ವರ ಶಿವಯೋಗಿಗಳು ಶ್ರೇಷ್ಠ ವಚನಕಾರರಾಗಿದ್ದಾರೆ. ಬಸವಣ್ಣನವರು ಸಾಮಾಜಿಕವಾಗಿ ಹೆಚ್ಚು ಹೆಚ್ಚು ಒತ್ತು ಕೊಡುತ್ತಿದ್ದರು. ಸಿದ್ದರಾಮೇಶ್ವರರು ಸಮಾಜ ಸೇವೆಯಲ್ಲಿ ತೃಪ್ತಿ ಪಡೆಯುತ್ತಿದ್ದರು ಎಂದು ಹೇಳಿದರು. ಮುದಕಮ್ಮ ದೇವಿ ದೇವಸ್ಥಾನದಿಂದ ಶರಣ ಶ್ರೀ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವೇದಮೂರ್ತಿ ಶಿವಯ್ಯ ಸ್ವಾಮಿ ಹಿರೇಮಠ ಚಾಲನೆ ನೀಡಿದರು ಮೇರವಣಿಗೆಯು ವಾಲ್ಮೀಕಿ ವೃತ್ತದಿಂದ ಸಿದ್ದರಾಮೇಶ್ವರ ವೃತ್ತದ ವರಗೆ ಪೋಟೋ ಮೇರವಣಿಗೆ ಮಾಡಲಾಯಿತು ಮೇರವಣಿಗೆಯಲ್ಲಿ ಮಹಿಳೆಯರು ಯುವಕರು ಸಮಾಜದ ಮುಖಂಡರು ಶ್ರೀ ಸಿದ್ದರಾಮೇಶ್ವರ ವೃತ್ತದಲ್ಲಿ ಜಮಾಗೊಂಡು ವೃತ್ತಕ್ಕೆ ಪೂಜೆ ಸಲ್ಲಿಸಿದರು ನಂತರ ಅನ್ನ ಸಂತರ್ಪಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಚಂದವ್ವ ರಾಮಪ್ಪ ರಾಠೋಡ, ಸದಸ್ಯರುಗಳಾದ ರಾಮಣ್ಣ ಪೂಜಾರ,ಕನಕಪ್ಪ ಉಪ್ಪಾರ ಶರಣಪ್ಪ ಚಿಕ್ಕಗೌಡ್ರ ಭಾಗ್ಯಶ್ರೀ ತಳವಾರ, ಮುಖಂಡರುಗಳಾದ ರೇವಣೇಪ್ಪ ಮ್ಯಾಗೇರಿ,ದುರಗಪ್ಪ ವಣಗೇರಿ.ಮುದಕಪ್ಪ ವಡ್ಡರ,ಹುಲಗಪ್ಪ ವಡ್ಡರ, ಮಂಜುನಾಥ ನರೇಗಲ್,ರವಿ ವಣಗೇರಿ,ಶರಣಪ್ಪ ಉಪ್ಪಾರ, ಯಲ್ಲಪ್ಪ ಹಳ್ಳಿಗುಡಿ,

ಹಂಪಯ್ಯ ಸ್ವಾಮಿ ಹಿರೇಮಠ, ರವಿ ಶ್ಯಾಡ್ಲಗೇರಿ, ಶಿಕ್ಷಕ ಶರಣಪ್ಪ ತಳವಾರ.ನೀಲಪ್ಪ ಗ್ವಾಡಿ,ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!