
ಸಿಪಿಐಎಂಎಲ್ ಬೆಂಬಲ ಕಾಂಗ್ರೆಸ್-ಪಕ್ಷಕ್ಕೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 30- ಇಂಡಿಯಾ ಒಕ್ಕೂಟದ ಅಂಗ ಪಕ್ಷವಾಗಿ ಭಾರತೀಯ ಕಮ್ಯೂನಿಷ್ಟ್ ಪಕ್ಷ (ಎಂ.ಎಲ್) ನ ಐದು ಅಭ್ಯರ್ಥಿಗಳು ಲೋಕ ಸಭಾ ಚುನಾವಣೆಗೆ ಸ್ಪರ್ಧಿಸಿರುವ ಹಿನ್ನೆಲಯಲ್ಲಿ ಸಿಪಿಐ ಎಂಲ್ ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷನ್ನು ಈ ಚುನಾವಣೆಯಲ್ಲಿ ಬೆಂಬಲಿಸಲಿದೆ ಎಂದು ಸಿಪಿಐಎಂಎಲ್ ರಾಜ್ಯ ಸ್ಥಾಯಿಸಮಿತಿ ಸದಸ್ಯ ಜೆ.ಭಾರಧ್ವಜ್ ಹೇಳಿದರು.
ಅವರು ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ ಕೋಮುವಾದಿ ಅಜೆಂಡಾವು ಜಾತ್ಯಾತೀತ ರಾಷ್ಟವನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಿ ಮಾನಸಿಕವಾಗಿ ಇನ್ನೊಂದು ಕೋಮಿನ ಜನರನ್ನು ಭಯದಲ್ಲಿಟ್ಟು ಆಳ್ವಿಕೆ ನಡೆಸುವುದು ಬಿಜೆಪಿಯ ಆಂತರಿಕ ಇಚ್ಚೆಯಾಗಿದೆ.
ಈ ಬಾರಿ ಒಕ್ಕಲೆಬ್ಬಿಸಿ ಸಿಪಿಐಎಂಎಲ್ ಅಧಿಕಾರಕ್ಕೆ ಬರಲಿದೆ. ಬಿಹಾರದಲ್ಲಿ ೩ ಲೋಕಸಭೆ ಹಾಗು ಒಂದು ವಿಧಾನಸಭೆಗೆ ಸಿಪಿಐಎಂಎಲ್ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಜಾರ್ಕಂಡ್ ಹಾಗು ವೆಷ್ಟ್ ಬ್ಯಾಂಗಲ್‌ಲ್ಲಿ ತಲಾ ಒಬ್ಬರು ಇಂಡಿಯಾ ಒಕ್ಕೂಟದ ಅಂಗ ಪಕ್ಷವಾಗಿ ಸ್ಪರ್ಧಿಸಿದ್ದಾರೆ.
ಗಂಗಾವತಿಯಲ್ಲಿ ಮೇ ೦೧ ರಂದು ಕಾರ್ಮಿಕ ದಿನಾಚರಣೆ ಆಚರಿಸುತ್ತಿದ್ದು, ನಗರದ ಶ್ರೀಕೃಷ್ಣದೇವರಾಯ ವೃತ್ತದಿಂದ ಬುದ್ಧ ಸರ್ಕಲ್ ವರೆಗೂ ಮೆರವಣಿಗೆ ನಡೆಸಲಾಗುವುದು. ಬುದ್ಧ ಭವನದಲ್ಲಿ ಬಹಿರಂಗ ಸಭೆ ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಸಮಿತಿ ಸದಸ್ಯೆ ಮೈತ್ರಿ, ಸಿಪಿಐಎಂಎಲ್ ರಾಜ್ಯ ಸಮಿತಿ ಸದಸ್ಯ ಸಣ್ಣ ಹನುಮಂತಪ್ಪ ಹುಲಿ ಹೈದರ್, ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ವಿಜಯ್ ದೊರೆರಾಜು, ಕಟ್ಟಡ ಕಾರ್ಮಿಕ ಗಂಗಾವತಿ ತಾಲೂಕಾ ಅಧ್ಯಕ್ಷ ಚಾಂದ್ ಪಾಶಾ ಉಪಸ್ಥೀತರಿದ್ದರು.